Home Mangalorean News Kannada News ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ – ಮಾರ್ಗಸೂಚಿ ಪ್ರಕಟ

ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ – ಮಾರ್ಗಸೂಚಿ ಪ್ರಕಟ

Spread the love

ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ – ಮಾರ್ಗಸೂಚಿ ಪ್ರಕಟ

ಉಡುಪಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿರುವ ಪ್ರಸಕ್ತ ಸಾಲಿನ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಯ ಅಭ್ಯರ್ಥಿಗಳಿಗಾಗಿ ಲಿಖಿತ ಪರೀಕ್ಷೆಯು ಆಗಸ್ಟ್ 2 (ಭಾನುವಾರ) ರಂದು ಬೆಳಗ್ಗೆ 10.30 ಗಂಟೆಯಿಂದ ಅಪರಾಹ್ನ 12 ಗಂಟೆಯವರೆಗೆ ಉಡುಪಿ ಜಿಲ್ಲೆಯ ಒಟ್ಟು 06 ಅತ್ಯಂತ ಸಂವೇದನಾಶೀಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದ್ದು, ಒಟ್ಟು 2367 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡದೆ, ಸಂಪೂರ್ಣ ಪಾರದರ್ಶಕತೆ ಹಾಗೂ ನ್ಯಾಯಸಮ್ಮತತೆಯನ್ನು ಕಾಯ್ದುಕೊಳ್ಳಲು ಜಿಲ್ಲಾಡಳಿತ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದ್ದು, ಅಭ್ಯರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಈ ಕೆಳಗಿನ ವಿವರವಾದ ಮಾರ್ಗಸೂಚಿಗಳನ್ನು ಪಾಲಿಸಬೇಕು.

1. ಕೇಂದ್ರಕ್ಕೆ ಆಗಮನ ಹಾಗೂ ಕಡ್ಡಾಯ ತಪಾಸಣಾ ಪ್ರಕ್ರಿಯೆಗಳು:
ವರದಿ ಮಾಡುವ ಸಮಯ : ಪರೀಕ್ಷೆಯು ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಗಲಿದ್ದರೂ, ಅಭ್ಯರ್ಥಿಗಳು ಬೆಳಿಗ್ಗೆ 09.30 ರೊಳಗೆ ಕಡ್ಡಾಯವಾಗಿ ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿರಬೇಕು. ತಪಾಸಣಾ ಪ್ರಕ್ರಿಯೆಗಳು ವಿಳಂಬವಾಗುವುದನ್ನು ತಡೆಯಲು ಮತ್ತು ಭದ್ರತಾ ಪರಿಶೀಲನೆಗೆ ಸಹಕರಿಸಲು ಈ ಸಮಯ ಪಾಲನೆ ಅತ್ಯಗತ್ಯ.

2. ಸಾಮಾಜಿಕ ಜಾಲತಾಣಗಳು & ವದಂತಿಗಳ ಮೇಲಿನ ಕಣ್ಗಾವಲು (ಕಠಿಣ ಕಾನೂನು ಎಚ್ಚರಿಕೆ):
ವಾಟ್ಸಾಪ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ಪ್ರಶ್ನೆ ಪತ್ರಿಕೆ ಪ್ರಸಾರ ಅಥವಾ ಅಕ್ರಮ ಆರ್ಥಿಕ ವ್ಯವಹಾರ ನಡೆಸುವ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಇತರೆ ಅನ್ವಯಿಸುವ ಕಾನೂನುಗಳಡಿ ಜೈಲು ಶಿಕ್ಷೆ ಸೇರಿದಂತೆ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಅಭ್ಯರ್ಥಿಗಳು ಹಾಗೂ ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವ ಯಾವುದೇ ನಕಲಿ ಸುದ್ದಿ, ವದಂತಿಗಳು ಅಥವಾ ಅಕ್ರಮ ಆಮಿಷಗಳಿಗೆ ಒಳಗಾಗಬಾರದು.

3. ಪರೀಕ್ಷಾ ಕೇಂದ್ರದೊಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾದ ವಸ್ತುಗಳು:
ಪರೀಕ್ಷೆಯ ಪವಿತ್ರತೆಯನ್ನು ಕಾಯ್ದುಕೊಳ್ಳಲು ಈ ಕೆಳಗಿನ ಯಾವುದೇ ವಸ್ತುವನ್ನು ಪರೀಕ್ಷಾ ಕೇಂದ್ರದ ಆವರಣಕ್ಕೆ ಅಥವಾ ಕೊಠಡಿಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರದಲ್ಲಿ ಇಡಲು ಅಥವಾ ಸುರಕ್ಷಿತವಾಗಿರಿಸಲು ಜಿಲ್ಲಾಡಳಿತವಾಗಲಿ ಅಥವಾ ಪರೀಕ್ಷಾ ಕೇಂದ್ರವಾಗಲಿ ಯಾವುದೇ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವುದಿಲ್ಲ. ಅಭ್ಯರ್ಥಿಗಳು ತಮ್ಮ ಸ್ವಂತ ಜವಾಬ್ದಾರಿಯಲ್ಲಿ ಇವುಗಳನ್ನು ಹೊರಗಡೆಯೇ ಬಿಟ್ಟು ಬರಬೇಕು.

ಇಲೆಕ್ಟ್ರಾನಿಕ್ ಮತ್ತು ಸಂವಹನ ಸಾಧನಗಳು: ಮೊಬೈಲ್ ಫೋನ್ಗಳು, ಬ್ಲೂಟೂತ್ ಸಾಧನಗಳು, ಇಯರ್ಫೋನ್ಗಳು, ಮೈಕ್ರೋಫೋನ್ಗಳು, ಪೇಜರ್ಗಳು, ಹೆಡ್ಫೋನ್ಗಳು, ಸ್ಮಾರ್ಟ್ ವಾಚ್ಗಳು, ಕ್ಯಾಮೆರಾ, ಪೆನ್ ಡ್ರೈವ್ಗಳು, ಕ್ಯಾಲ್ಕುಲೇಟರ್ಗಳು ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿರುತ್ತದೆ.

ಸ್ಟೇಷನರಿ ಮತ್ತು ಲೇಖನ ಸಾಮಾಗ್ರಿಗಳು: ಪೆನ್ಸಿಲ್, ಎರೇಸರ್, ಜಾಮಿಟ್ರಿ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಸ್ಕೇಲ್, ಲಾಗ್ ಟೇಬಲ್, ಯಾವುದೇ ಮುದ್ರಿತ ಅಥವಾ ಕೈಬರಹದ ಚೀಟಿಗಳು, ಬಿಡಿ ಹಾಳೆಗಳು, ನೋಟ್ ಬುಕ್ ಹಾಗೂ ರೆಕಾರ್ಡಿಂಗ್ ವಸ್ತುಗಳನ್ನು ನಿಷೇಧಿಸಲಾಗಿರುತ್ತದೆ.

ವೈಯಕ್ತಿಕ ಅಲಂಕಾರಿಕ ಹಾಗೂ ಇತರೆ ವಸ್ತುಗಳು: ಹ್ಯಾಂಡ್ ಬ್ಯಾಗ್, ಪರ್ಸ್, ವಾಲೆಟ್ (ಹಣದ ಚೀಲ), ಗಾಗಲ್ಸ್ (ಸನ್ ಗ್ಲಾಸ್), ಅಗಲವಾದ ಬೆಲ್ಟ್ಗಳು, ಕ್ಯಾಪ್ (ಟೋಪಿ) ಇತ್ಯಾದಿಗಳನ್ನು ನಿಷೇಧಿಸಲಾಗಿರುತ್ತದೆ..

ಆಹಾರ ಧಾನ್ಯಗಳು ಹಾಗೂ ಕುಡಿಯುವ ನೀರು: ಯಾವುದೇ ರೀತಿಯ ಆಹಾರ ಪದಾರ್ಥಗಳು (ತೆರೆದಿರುವ ಅಥವಾ ಪ್ಯಾಕ್ ಮಾಡಲಾದ) ಮತ್ತು ನೀರಿನ ಬಾಟಲಿಗಳನ್ನು ತರಲು ಅನುಮತಿ ಇಲ್ಲ. ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೊಠಡಿಗಳಲ್ಲೇ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮಾಡಲಾಗಿರುತ್ತದೆ.

4. ವಸ್ತ್ರಸಂಹಿತೆಯ ವಿವರವಾದ ಮಾರ್ಗಸೂಚಿಗಳು:
ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ ಕೆಇಎ ನಿಗದಿಪಡಿಸಿದ ಉಡುಪು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು

ಉಡುಪಿನ ಮಾದರಿ: ಅಭ್ಯರ್ಥಿಗಳು ಉದ್ದ ತೋಳಿನ ಶರ್ಟ್/ಕುರ್ತಾ/ಉಡುಪುಗಳನ್ನು ಧರಿಸಬಾರದು. ಅರ್ಧ ತೋಳಿನ ಸರಳ ಉಡುಪುಗಳನ್ನು ಮಾತ್ರ ಧರಿಸತಕ್ಕದ್ದು. ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಮೈಕ್ರೋ ಚಿಪ್ಗಳನ್ನು ಬಚ್ಚಿಡಲು ಅನುಕೂಲವಾಗುವಂತಹ ಜೇಬುಗಳಿರುವ, ದೊಡ್ಡ ಬಟನ್ಗಳಿರುವ ಅಥವಾ ಅತಿಯಾದ ವಿನ್ಯಾಸವಿರುವ ಉಡುಪುಗಳನ್ನು ಧರಿಸುವಂತಿಲ್ಲ.

ತಲೆ ಹಾಗೂ ಮುಖದ ಹೊದಿಕೆ: ಕಿವಿ, ತಲೆ ಅಥವಾ ಮುಖವನ್ನು ಮುಚ್ಚುವಂತಹ ಯಾವುದೇ ರೀತಿಯ ಕ್ಯಾಪ್, ಮಾಸ್ಕ್, ಸ್ಕಾರ್ಫ್ ಅಥವಾ ಮುಸುಕನ್ನು ಧರಿಸಿ ಪರೀಕ್ಷೆಗೆ ಬರುವಂತಿಲ್ಲ.

ವಿನಾಯಿತಿ: ಪರೀಕ್ಷಾರ್ಥಿಗಳಿಗೆ ಜನಿವಾರ ಮತ್ತು ಶಿವದಾರ ಧರಿಸಿ ಪರೀಕ್ಷೆಗೆ ಹಾಜರಾಗಲು ಸಂಪೂರ್ಣ ಅವಕಾಶವಿರುತ್ತದೆ.

ಆಭರಣಗಳು ಮತ್ತು ಲೋಹದ ವಸ್ತುಗಳು: ಯಾವುದೇ ರೀತಿಯ ಲೋಹದ ಆಭರಣಗಳು, ಬಳೆಗಳು, ಸರ, ಉಂಗುರ, ಅಥವಾ ಕೈಗಡಿಯಾರಗಳನ್ನು ಧರಿಸಬಾರದು.

ವಿನಾಯಿತಿ: ಮಹಿಳಾ ಅಭ್ಯರ್ಥಿಗಳಿಗೆ ಕೇವಲ ಮೂಗುತಿ ಮತ್ತು ಮಂಗಳಸೂತ್ರ ಧರಿಸಲು ಮಾತ್ರ ವಿನಾಯಿತಿ ನೀಡಲಾಗಿದೆ.

ಪಾದರಕ್ಷೆಗಳು: ಶೂಗಳು, ಬೂಟ್ಗಳು ಅಥವಾ ದಪ್ಪ ಅಡಿಯ ಪಾದರಕ್ಷೆಗಳನ್ನು ಧರಿಸಲು ಅವಕಾಶವಿಲ್ಲ. ಅಭ್ಯರ್ಥಿಗಳು ಸರಳವಾದ ಚಪ್ಪಲಿಗಳು ಅಥವಾ ಕಡಿಮೆ ಹಿಮ್ಮಡಿಯಿರುವ ಸ್ಯಾಂಡಲ್ಗಳನ್ನು ಮಾತ್ರ ಧರಿಸಿ ಬರಬೇಕು.

ಧಾರ್ಮಿಕ ಉಡುಪು ಧರಿಸುವ ಅಭ್ಯರ್ಥಿಗಳಿಗೆ: ಧಾರ್ಮಿಕ ಸಂಪ್ರದಾಯದ ಉಡುಪುಗಳನ್ನು ಧರಿಸಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳು ಪ್ರತ್ಯೇಕ ಭದ್ರತಾ ಪರಿಶೀಲನೆಗೊಳಪಡಬೇಕಾಗಿರುವುದರಿಂದ, ಪರೀಕ್ಷೆ ಆರಂಭಕ್ಕೆ 2 ಗಂಟೆಗಳ ಮುಂಚಿತವಾಗಿ (ಅಂದರೆ ಬೆಳಿಗ್ಗೆ 08:30 ಗಂಟೆಗೆ) ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು.

ವಿಶೇಷ ಚೇತನ ಅಭ್ಯರ್ಥಿಗಳಿಗೆ (Hearing Aids/Cochlear Implants): ಶ್ರವಣ ಸಾಧನ ಅಥವಾ ಕೋಕ್ಲಿಯರ್ ಇಂಪ್ಲಾAಟ್ ಬಳಸುವ ವಿಶೇಷ ಚೇತನ ಅಭ್ಯರ್ಥಿಗಳು ತಮ್ಮ UDID ಕಾರ್ಡ್ ಮತ್ತು ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಪರೀಕ್ಷೆ ಆರಂಭಕ್ಕೂ 2 ಗಂಟೆ ಮುಂಚಿತವಾಗಿ (ಬೆಳಿಗ್ಗೆ 08:30 ಕ್ಕೆ) ವರದಿ ಮಾಡಿಕೊಳ್ಳಬೇಕು. ಪ್ರತ್ಯೇಕ ಪರಿಶೀಲನೆಯ ನಂತರ ಸಾಧನ ಬಳಕೆಗೆ ಅನುಮತಿಸಲಾಗುವುದು.

5.ಪರೀಕ್ಷೆಯನ್ನು ಸುಸೂತ್ರವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತದಿಂದ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು:

ಕಟ್ಟುನಿಟ್ಟಿನ ಭದ್ರತೆ ಹಾಗೂ ತಾಂತ್ರಿಕ ಕಣ್ಗಾವಲು: ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಜಾಮರ್ಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರ ಹಾಗೂ ಕೊಠಡಿಗಳ ಮೇಲೆ ತೀವ್ರ ನಿಗಾವಹಿಸಲು ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪ್ರಾಧಿಕಾರದ ಕಚೇರಿಯಲ್ಲಿ ಸ್ಥಾಪಿಸಲಾದ ‘ಕಮಾಂಡ್ ಸೆಂಟರ್’ ಮೂಲಕ ನೇರ ಮೇಲ್ವಿಚಾರಣೆ ನಡೆಸಲಾಗುವುದು. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಮುಖ ಚಹರೆ ಗುರುತಿಸುವ ತಂತ್ರಜ್ಞಾನ ಮೂಲಕ ಅಭ್ಯರ್ಥಿಗಳ ಗುರುತನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲೂ ಸಿಸಿಟಿವಿ ಕಣ್ಗಾವಲು ಇರಲಿದೆ.

ನಿಷೇಧಾಜ್ಞೆ ಹಾಗೂ ಪೊಲೀಸ್ ಬಂದೋಬಸ್ತ್: ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಅನಗತ್ಯ ಜನಸಂದಣಿಯನ್ನು ನಿಯಂತ್ರಿಸಲು ಎಲ್ಲಾ 06 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS)ಕಲಂ 163 ರಡಿ (ಹಳೆಯ 144 ಸೆಕ್ಷನ್) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿಯಾದ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿ 100 ಅಭ್ಯರ್ಥಿಗಳ ದೈಹಿಕ ತಪಾಸಣೆಗಾಗಿ ತಲಾ ಒಬ್ಬರಂತೆ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಧಿಕಾರಿಗಳ ನೇಮಕ: ಸುಗಮ ನಿರ್ವಹಣೆಗಾಗಿ ಮಾರ್ಗಾಧಿಕಾರಿಗಳು, ವೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು, ವಿಶೇಷ ಜಾಗೃತ ದಳ ಹಾಗೂ ವಸ್ತ್ರ ಸಂಹಿತೆ ಪರಿಶೀಲನಾ ಅಧಿಕಾರಿಗಳನ್ನು ನೇಮಿಸಲಾಗಿದೆ.

ಆರೋಗ್ಯ ಮತ್ತು ತುರ್ತು ಸೇವೆಗಳು: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಸ್ಪಂದಿಸಲು ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಆಂಬುಲೆನ್ಸ್, ಅರ್ಹ ವೈದ್ಯಕೀಯ ಸಿಬ್ಬಂದಿ ಹಾಗೂ ತುರ್ತು ಮುನ್ನೆಚ್ಚರಿಕೆ ಔಷಧಗಳ ಲಭ್ಯತೆಯನ್ನು ಖಚಿತಪಡಿಸಲಾಗಿದೆ.

ನಿರಂತರ ವಿದ್ಯುತ್ ಪೂರೈಕೆ: ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಉಂಟಾಗದAತೆ ಸೂಕ್ತ ಕ್ರಮ ವಹಿಸಲು ಮೆಸ್ಕಾಂ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ Do’s and Don’ts ಹಾಗೂ ವಸ್ತ್ರ ಸಂಹಿತೆಯ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು KEA ಅಧಿಕೃತ ಜಾಲತಾಣ http://kea.kar.nic.in ಗೆ ಭೇಟಿ ನೀಡಬಹುದು. ಅಭ್ಯರ್ಥಿಗಳು ಮತ್ತು ಪೋಷಕರು ಈ ಎಲ್ಲಾ ನಿಯಮಗಳನ್ನು ಪಾಲಿಸಿ, ಪರೀಕ್ಷೆಯು ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತದೊಂದಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version