ವರಾಹಿ ಒಡಲು ಬರಿದಾಗಿಸಬೇಡಿ – ಕೆ ವಿಕಾಸ್ ಹೆಗ್ಡೆ
ಉಡುಪಿ: ವರಾಹಿ ನದಿ ನೀರನ್ನು ನಂಬಿದ್ದ ಕುಂದಾಪುರ ಪುರಸಭೆ ಹಾಗೂ ಕುಂದಾಪುರ ಪುರಸಭೆಯಿಂದ ನೀರನ ಸಂಪರ್ಕವನ್ನು ಪಡೆದಿರುವ ಸುಮಾರು ಏಳು ಗ್ರಾಮ ಪಂಚಾಯತ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಏರ್ಪತ್ತಿರುವುದು ಒಂದು ಗಂಭೀರ ವಿಚಾರ ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಈ ಭಾರಿ ಕಡು ಬೇಸಗೆಯಿಂದ ಎಲ್ಲಾ ಕಡೆ ಕುಡಿಯುವ ನೀರಿನ ಸಮಸ್ಯೆ ಏರ್ಪಟ್ಟ ವಿಚಾರ ಗಂಭೀರವಾಗಿರುವಾಗ ವರಾಹಿ ನದಿ ನೀರನ್ನು ನಂಬಿ ಹಲವು ವರ್ಷಗಳಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದೆ ನಿರಾತಂಕವಾಗಿದ್ದ ಕುಂದಾಪುರ ಪುರಸಭೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದು ಅತ್ಯಂತ ಗಂಭೀರ ವಿಚಾರ. ಕಡು ಬೇಸಗೆಯಿಂದ ವರಾಹಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಕುಂದಾಪುರ ಪುರಸಭೆ ಹಾಗೂ ಸುಮಾರು ಏಳು ಗ್ರಾಮ ಪಂಚಾಯತ್ ಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಏರ್ಪಟ್ಟಿದೆ. ಮುಂದೆ ಎಲ್ಲಿಯಾದರೂ ಸಿದ್ಧಾಪುರ ಏತ ನೀರಾವರಿ ಯೋಜನೆ ಹೆಸರಿನಲ್ಲಿ ಜಾಕ್ ವೆಲ್ ಹೋರಿಯಬ್ಬೆಯ ಡೈವರ್ಶನ್ ವೀಯರ್ ಪಕ್ಕದಲ್ಲೇ ನಿರ್ಮಾಣವಾಗಿ ಡ್ಯಾಮ್ ನಿಂದ ನೇರವಾಗಿ ನೀರನ್ನು ಎತ್ತಿದರೆ ಮುಂದೆ ವರಾಹಿ ನದಿಯಲ್ಲಿ ಬೇಸಗಗೆ ಮೊದಲೇ ನೀರಿನ ಹರಿಯುವಿಕೆಯಲ್ಲಿ ಗಣನೀಯ ಕಡಿಮೆಯಾಗಿ ಅಕ್ಟೋಬರ್ ನವೆಂಬರ್ ತಿಂಗಳಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಏರ್ಪಡುವ ಸಾಧ್ಯತೆ ಇದೇ ಹಾಗೂ ವರಾಹಿ ನದಿ ನೀರನ್ನೇ ನಂಬಿರುವ ವರಾಹಿ ನದಿ ಪಾತ್ರದ ರೈತರು ನೀರಿಲ್ಲದೆ ತಮ್ಮ ಕೃಷಿ ನಾಶವಾಗುವ ದಿನ ದೂರವಿಲ್ಲ. ಅದಕ್ಕಾಗಿ ಈಗಾಗಲೇ ರೈತರ ಹಾಗೂ ಕುಡಿಯುವ ನೀರು ಬಳಕೆದಾರ ಬೇಡಿಕೆಯಂತೆ ಸಿದ್ಧಾಪುರ ಏತ ನೀರಾವರಿಗೆ ಅಗತ್ಯವಾದ ಜಾಕ್ ವೆಲ್ ಅನ್ನು ಹೋರಿಯಬ್ಬೆ ಡೈವರ್ಶನ್ ವೀಯರ್ ನ ಕೆಳ ಭಾಗದಲ್ಲಿ ನಿರ್ಮಾಣ ಮಾಡಬೇಕು ಹಾಗೂ ಇದರಿಂದ ವರಾಹಿ ನದಿಯಲ್ಲಿ ನೀರಿನ ಹರಿಯುವಿಕೆಯಲ್ಲಿ ಹೆಚ್ಚಾಗುವ ಕಾರಣ ಕುಂದಾಪುರ ಪುರಸಭೆ, ಗ್ರಾಮ ಪಂಚಾಯತ್ ಗಳು ಹಾಗೂ ನದಿ ಪಾತ್ರದ ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಬಹುದು ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿದ್ದಾರೆ.
