Home Mangalorean News Kannada News ಉಡುಪಿ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ: ಸಾರ್ವಜನಿಕರಿಗೆ ಎಚ್ಚರ ವಹಿಸಲು ಮನವಿ

ಉಡುಪಿ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ: ಸಾರ್ವಜನಿಕರಿಗೆ ಎಚ್ಚರ ವಹಿಸಲು ಮನವಿ

Spread the love

ಉಡುಪಿ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ: ಸಾರ್ವಜನಿಕರಿಗೆ ಎಚ್ಚರ ವಹಿಸಲು ಮನವಿ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, “SP UDUPI” ಎಂಬ ಅಧಿಕೃತ ಸಾಮಾಜಿಕ ಜಾಲತಾಣ ಖಾತೆ ಹೊರತುಪಡಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಯಾವುದೇ ವೈಯಕ್ತಿಕ ಅಥವಾ ಅಧಿಕೃತ ಖಾತೆಗಳು ಇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಸಾರ್ವಜನಿಕರು ಇಂತಹ ನಕಲಿ ಖಾತೆಗಳಿಗೆ ಪ್ರತಿಕ್ರಿಯಿಸದೇ, ಯಾವುದೇ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು ಅಥವಾ ಹಣವನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಲಾಗಿದೆ.

ಸಂದೇಹಾಸ್ಪದ ಖಾತೆಗಳು ಕಂಡುಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ facebook.com ಮೂಲಕ ಸಂಬಂಧಿತ ಖಾತೆಯನ್ನು ರಿಪೋರ್ಟ್ ಮಾಡುವಂತೆ ಕೋರಲಾಗಿದೆ.


Spread the love

Exit mobile version