Home Mangalorean News Kannada News ಬಿಡದಿಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲ ಪತ್ತೆ: ₹5.05 ಕೋಟಿ ಮೌಲ್ಯದ ಔಷಧಿ, ಯಂತ್ರೋಪಕರಣ ವಶ

ಬಿಡದಿಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲ ಪತ್ತೆ: ₹5.05 ಕೋಟಿ ಮೌಲ್ಯದ ಔಷಧಿ, ಯಂತ್ರೋಪಕರಣ ವಶ

Spread the love

ಬಿಡದಿಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲ ಪತ್ತೆ: ₹5.05 ಕೋಟಿ ಮೌಲ್ಯದ ಔಷಧಿ, ಯಂತ್ರೋಪಕರಣ ವಶ

ಬಿಡದಿಯ ಕುರುಬರಕೇರನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ಪರವಾನಗಿ ಇಲ್ಲದೆ ನಡೆಯುತ್ತಿದ್ದ ನಕಲಿ ಔಷಧಿಗಳ ಮರುಪ್ಯಾಕಿಂಗ್ ಮತ್ತು ಮರುಲೇಬಲಿಂಗ್ ಜಾಲವನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಔಷಧ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ ಆಗಸ್ಟ್ 18ರಂದು ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಲಾಗಿದ್ದು, ಒಟ್ಟು ₹5,05,49,575 ಮೌಲ್ಯದ ನಕಲಿ ಔಷಧಿಗಳು ಹಾಗೂ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಇತರ ರಾಜ್ಯಗಳಿಂದ ಕಡಿಮೆ ಬೆಲೆಯ ಔಷಧಿಗಳನ್ನು ಖರೀದಿಸಿ, ಅವುಗಳನ್ನು ಹೊಸ ವಯಲ್‌ಗಳಿಗೆ ತುಂಬುತ್ತಿದ್ದರು. ಬಳಿಕ ಫೈಜರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳ ದುಬಾರಿ ಹಾಗೂ ಆಮದು ಮಾಡಿದ ಜೀವರಕ್ಷಕ ಔಷಧಿಗಳ ಹೆಸರಿನಲ್ಲಿ ನಕಲಿ ಲೇಬಲ್ ಮತ್ತು ಸ್ಟ್ಯಾಂಪ್‌ಗಳನ್ನು ಅಂಟಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಸಾರ್ವಜನಿಕರನ್ನು ವಂಚಿಸಲು ಬಳಸಲಾಗುತ್ತಿದ್ದ ಲೇಬಲ್‌ಗಳಲ್ಲಿನ ಕ್ಯೂಆರ್/ಸ್ಕ್ಯಾನಿಂಗ್ ಕೋಡ್‌ಗಳು ನಿಷ್ಕ್ರಿಯವಾಗಿದ್ದವು.

5 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತು ವಶ

ದಾಳಿಯ ವೇಳೆ CEFIAVIGENT 2.5 Injection, HIZLAM Injectables, Xavitaz Injection, EMBLAVEO, Zavicefta Injection, TIGYNT IV Vials ಸೇರಿದಂತೆ ವಿವಿಧ ಔಷಧಿಗಳು, ಅವಧಿ ಮೀರಿದ ಔಷಧಿಗಳು, ಪ್ಯಾಕೇಜಿಂಗ್ ಸಾಮಗ್ರಿಗಳು, ಇಂಜೆಕ್ಷನ್ ಫಿಲ್ಲಿಂಗ್ ಯಂತ್ರ ಹಾಗೂ ನಕಲಿ ಲೇಬಲ್‌ಗಳು ಮತ್ತು ಸ್ಟ್ಯಾಂಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿಕೊಂಡ ವಸ್ತುಗಳ ಮೌಲ್ಯ ₹5,05,49,575 ಎಂದು ಅಂದಾಜಿಸಲಾಗಿದೆ.

ಕಠಿಣ ಕಾನೂನು ಕ್ರಮ

ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಕಲಿ ಔಷಧಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಸೆಕ್ಷನ್ 17B ಹಾಗೂ 27ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸೆಕ್ಷನ್ 27ರ ಅಡಿಯಲ್ಲಿ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಇಲಾಖೆಯ ಮಾಹಿತಿ ತಿಳಿಸಿದೆ. ತನಿಖೆ ಮುಂದುವರಿದಿದ್ದು, ಜಾಲದ ಹಿಂದಿರುವ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

16 ಔಷಧ ಪರವಾನಗಿ ರದ್ದು, 8 ಅಮಾನತು

ವಶಪಡಿಸಿಕೊಂಡ ಔಷಧಿಗಳ ಬ್ಯಾಚ್‌ಗಳ ಮಾರಾಟ ಮತ್ತು ವಿತರಣೆಯನ್ನು ತಡೆಯಲು ಅವುಗಳ ಬ್ಯಾಚ್ ಸಂಖ್ಯೆಗಳನ್ನು FDA ಪೋರ್ಟಲ್‌ನಲ್ಲಿ ಬ್ಲಾಕ್ ಮಾಡಲಾಗಿದೆ. ಔಷಧಿಗಳ ರಾಸಾಯನಿಕ ಸಂಯೋಜನೆ, ಶುದ್ಧತೆ ಮತ್ತು ತೀವ್ರತೆಯನ್ನು ಪರೀಕ್ಷಿಸಲು ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ತನಿಖೆಯ ಮುಂದುವರಿದ ಭಾಗವಾಗಿ ಔಷಧಿಗಳನ್ನು ಮಾರಾಟ ಹಾಗೂ ಸರಬರಾಜು ಮಾಡಿರುವ ಚಿಲ್ಲರೆ ಮತ್ತು ಸಗಟು ಮಳಿಗೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು, 16 ಔಷಧ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಹಾಗೂ 8 ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ. ನೆಲಮಂಗಲದಲ್ಲಿರುವ ಮೆ|| ಪೈಜರ್ ಸಿ & ಎಫ್ ಉಗ್ರಾಣದ ಔಷಧ ಪರವಾನಗಿಯನ್ನೂ ಅಮಾನತುಗೊಳಿಸಲಾಗಿದೆ ಎಂದು ಇಲಾಖೆಯ ಮಾಹಿತಿ ತಿಳಿಸಿದೆ.

ಸಾರ್ವಜನಿಕರಿಗೆ ಇಲಾಖೆಯ ಸೂಚನೆ

ಜೀವರಕ್ಷಕ ಔಷಧಿಗಳನ್ನು ಸಾರ್ವಜನಿಕರು ಅಧಿಕೃತ ಪರವಾನಗಿ ಹೊಂದಿರುವ ಔಷಧಾಲಯಗಳಿಂದಲೇ ಖರೀದಿಸುವಂತೆ ಇಲಾಖೆ ಮನವಿ ಮಾಡಿದೆ. ಔಷಧಿಗಳ ಪ್ಯಾಕಿಂಗ್‌ನಲ್ಲಿ ಸಂಶಯಾಸ್ಪದ ವ್ಯತ್ಯಾಸಗಳು ಕಂಡುಬಂದರೆ ಅಥವಾ ಲೇಬಲ್‌ನಲ್ಲಿರುವ ಕ್ಯೂಆರ್ ಕೋಡ್‌ಗಳು ಸ್ಕ್ಯಾನ್ ಆಗದಿದ್ದರೆ, ತಕ್ಷಣ ಔಷಧ ಜಾರಿ ಅಧಿಕಾರಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version