Home Mangalorean News Kannada News ದ.ಕ.ಜಿಲ್ಲೆಯಲ್ಲಿ ಸಂಭ್ರಮದ ಈದುಲ್ ಅಝ್ಹಾ ಆಚರಣೆ

ದ.ಕ.ಜಿಲ್ಲೆಯಲ್ಲಿ ಸಂಭ್ರಮದ ಈದುಲ್ ಅಝ್ಹಾ ಆಚರಣೆ

Spread the love

ದ.ಕ.ಜಿಲ್ಲೆಯಲ್ಲಿ ಸಂಭ್ರಮದ ಈದುಲ್ ಅಝ್ಹಾ ಆಚರಣೆ

ಮಂಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ‘ಈದುಲ್ ಅಝ್ಹಾ’ (ಬಕ್ರೀದ್ ಹಬ್ಬ)ವನ್ನು ದ.ಕ. ಜಿಲ್ಲಾದ್ಯಂತ ಅತ್ಯಂತ ಸಡಗರ, ಸಂಭ್ರಮದಿಂದ ಇಂದು ಆಚರಿಸಲಾಗುತ್ತಿದೆ.

ನಗರದ ಬಾವುಟಗುಡ್ಡದ ಈದ್ಧಾ ಮಸ್ಟಿದ್ದಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ಲಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ನೇತೃತ್ವದಲ್ಲಿ ಖುತುಬಾ ಪಾರಾಯಣ ಮತ್ತು ಝೀನತ್ ಬಕ್ಸ್ ಮಸ್ಟಿದ್‌ನ ಖತೀಬ್ ಸೈಯದ್ ಶಂಶುದ್ದೀನ್ ಬಾಸಿತ್ ಬಾ ಅಲವಿ ತಂಜಳ್ ಅಲ್ ಅನ್ಸಾರಿ ನೇತೃತ್ವದಲ್ಲಿ ಈದ್ ನಮಾಝ್ ನಡೆಯಿತು. ಈ ಸಂದರ್ಭ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಭೇಟಿ ನೀಡಿ ಶುಭ ಹಾರೈಸಿದರು. ಈದ್ಧಾ ಮತ್ತು ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಣಿ, ಉಪಾಧ್ಯಕ್ಷ ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಎಸ್. ಎಂ. ರಶೀದ್ ಹಾಜಿ ಮತ್ತಿತರ ಪದಾಧಿಕಾರಿಗಳು, ಆಡಳಿತ ಕಮಿಟಿಯ ಸದಸ್ಯರು ಪಾಲ್ಗೊಂಡಿದ್ದರು.

ಉಳ್ಳಾಲದ ಕೇಂದ್ರ ಜುಮಾ ಮಸ್ಟಿದ್‌ನಲ್ಲಿ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ, ಹಿಕಮಿ, ಸಖಾಫಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಸಾ ಪಾರಾಯಣ ನಡೆಯಿತು.

ಜಿಲ್ಲೆಯ ಮುಸ್ಲಿಮರು ಮಸೀದಿ, ಈದ್ದಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಮತ್ತು ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡು ಬಂತು. ಮಂಗಳೂರಿನ ಪಂಪ್‌ವೆಲ್‌ನ ಮಸ್ಟಿದುತ್ತಲ್ವಾ ಹಂಪನಕಟ್ಟೆಯ ಮಸ್ಟಿದುನ್ನೂ‌ರ್, ಸ್ಟೇಟ್‌ಬ್ಯಾಂಕ್‌ನ ಇಬ್ರಾಹೀಂ ಖಲೀಲ್ ಮಸ್ಟಿದ್‌, ಕಂಕನಾಡಿ ರಹ್ಮಾನಿಯಾ ಜುಮಾ ಮಸ್ಟಿದ್, ನಗರದ ವಾಸ್‌ಲೇನ್ ಇಹ್ರಾನ್ ಮಸ್ಕಿದ್, ಪಾಂಡೇಶ್ವರ ಪೊಲೀಸ್‌ಲೇನ್‌ನ ಫೌಝಿಯಾ ಜುಮಾ ಮಸ್ಟಿದ್, ಬಂದರ್ ಕಚ್ಚಿ ಮೇಮನ್ ಜುಮಾ ಮಸ್ಟಿದ್, ಬಂದರ್ ಕಂದುಕ ಬದ್ರಿಯಾ ಜುಮಾ ಮಸ್ಟಿದ್, ಬೋಳಾರ ಮುಹಿಯುದ್ದೀನ್ ಜುಮಾ ಮಸ್ಕಿದ್, ಕುದ್ರೋಳಿ ಜಾಮೀಯಾ ಜುಮಾ ಮಸ್ಕಿದ್, ಬಿಕರ್ನಕಟ್ಟೆ ಅಹಸನುಲ್ ಮಸಾಜೀದ್‌ ಸಹಿತ ಜಿಲ್ಲೆಯ ಎಲ್ಲಾ ಜುಮಾ ಮಸ್ಟಿದ್ ಮತ್ತು ಈದ್ದಾಗಳಲ್ಲಿ ನಮಾಝ್ ಹಾಗೂ ಖುತ್ಸಾ ನೆರವೇರಿಸಲಾಯಿತು.

ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ ನಾನಾ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು. ಈದ್ ನಮಾಝ್-ಖುತ್ಥಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ನಿರತ್‌ಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಸಲ್ಲಿಸುತ್ತಿದ್ದಾರೆ.


Spread the love

Exit mobile version