Home Mangalorean News Kannada News ಮಂಗಳೂರಿನಲ್ಲಿ ಕಾರ್ ಮಾಡಿಫಿಕೇಶನ್ ಸೆಂಟರ್‌ ನಲ್ಲಿ ಬೆಂಕಿ ಅವಘಡ

ಮಂಗಳೂರಿನಲ್ಲಿ ಕಾರ್ ಮಾಡಿಫಿಕೇಶನ್ ಸೆಂಟರ್‌ ನಲ್ಲಿ ಬೆಂಕಿ ಅವಘಡ

Spread the love

ಮಂಗಳೂರಿನಲ್ಲಿ ಕಾರ್ ಮಾಡಿಫಿಕೇಶನ್ ಸೆಂಟರ್‌ ನಲ್ಲಿ ಬೆಂಕಿ ಅವಘಡ

ಮಂಗಳೂರು: ನಗರದ ಫಳ್ನೀರ್ ಸಮೀಪದ ಟೋಪಾಜ್ ಕಾರ್ ಮಾಡಿಫಿಕೇಶನ್ ಸೆಂಟರ್‌ನಲ್ಲಿ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಿಂದ ಎರಡು BMW ಕಾರುಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿನಷ್ಟ ಉಂಟಾಗಿದೆ.

ಇಂದು ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ವ್ಯಾಪಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಕಾರ್ ಸೆಂಟರ್ ಮಾಜಿ ಶಾಸಕ ಮೊಯ್ದೀನ್ ಬಾವ ಅವರ ತಂಗಿಯ ಮಗ ಸಿಯಾಜ್ ಅವರಿಗೆ ಸೇರಿದುದಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ದೌಡಾಯಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Exit mobile version