Home Mangalorean News Kannada News ವಿಜಯವೀರ ಸಂಘದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಆಯ್ಕೆ

ವಿಜಯವೀರ ಸಂಘದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಆಯ್ಕೆ

Spread the love

ವಿಜಯವೀರ ಸಂಘದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಆಯ್ಕೆ

ಉಡುಪಿ: ವಿಜಯವೀರ ಸಂಘ (ರಿ), ಚಿತ್ಪಾಡಿ-ಬೈಲೂರು ಇದರ ವಾರ್ಷಿಕ ಮಹಾಸಭೆಯು ಜೂನ್ 14ರಂದು ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳಾಗಿ ಹರೀಶ್ ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಸಚಿನ್ ಕುಮಾರ್ ಹಾಗೂ ವಿಶ್ವನಾಥ್ ಶೇರಿಗಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾಸ್ಕರ್ ಬಂಗೇರ ಪ್ರಧಾನ ಕಾರ್ಯದರ್ಶಿಯಾಗಿ, ಶರತ್ ಕುಂದರ್ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಸದಾಶಿವ ಶೆಟ್ಟಿ ಹಾಗೂ ಪ್ರಕಾಶ್ ಜಿ.ಕೆ., ಜೊತೆ ಕಾರ್ಯದರ್ಶಿಯಾಗಿ ವಿಜಯ್ ಡಿಸೋಜಾ, ಜೊತೆ ಕೋಶಾಧಿಕಾರಿಯಾಗಿ ಪ್ರಾಣೇಶ್ ಪೂಜಾರಿ, ಕಲಾ ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ, ಜೊತೆ ಕಲಾ ಕಾರ್ಯದರ್ಶಿಯಾಗಿ ರವೀಂದ್ರ ಕೋಟ್ಯಾನ್, ಕ್ರೀಡಾ ಕಾರ್ಯದರ್ಶಿಯಾಗಿ ಸಂಕೇತ್ ಶೆಟ್ಟಿ ಹಾಗೂ ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಅಮಿತ್ ಆಯ್ಕೆಯಾಗಿದ್ದಾರೆ.

1972ರಲ್ಲಿ ಸ್ಥಾಪಕ ಅಧ್ಯಕ್ಷ ಭೋಜ ಶೇರಿಗಾರ್ ಹಾಗೂ ಇತರ ಹಿರಿಯರ ಪರಿಶ್ರಮದಿಂದ ಆರಂಭಗೊಂಡ ವಿಜಯವೀರ ಸಂಘವು ಕಳೆದ 54 ವರ್ಷಗಳಿಂದ ಸಾಮಾಜಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದೆ.

ಮುಂದಿನ ದಿನಗಳಲ್ಲಿಯೂ ಸಂಘವು ಸಮಾಜಮುಖಿ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತನ್ನ ಸೇವಾ ಕಾರ್ಯವನ್ನು ನಿರಂತರವಾಗಿ ಮುಂದುವರಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.


Spread the love

Exit mobile version