Home Mangalorean News Kannada News ಚಲಿಸುತ್ತಿದ್ದ ಬಸ್‌ಗೆ ಗಿಡುಗ ಡಿಕ್ಕಿ: ಮುಂಭಾಗದ ಗಾಜು ಪುಡಿ, ಒಬ್ಬರಿಗೆ ಗಾಯ

ಚಲಿಸುತ್ತಿದ್ದ ಬಸ್‌ಗೆ ಗಿಡುಗ ಡಿಕ್ಕಿ: ಮುಂಭಾಗದ ಗಾಜು ಪುಡಿ, ಒಬ್ಬರಿಗೆ ಗಾಯ

Spread the love

ಚಲಿಸುತ್ತಿದ್ದ ಬಸ್‌ಗೆ ಗಿಡುಗ ಡಿಕ್ಕಿ: ಮುಂಭಾಗದ ಗಾಜು ಪುಡಿ, ಒಬ್ಬರಿಗೆ ಗಾಯ

ಮಂಗಳೂರು: ಮುಲ್ಕಿ ಸಮೀಪ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ಬಸ್‌ಗೆ ಗಿಡುಗವೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್‌ನ ಮುಂಭಾಗದ ಗಾಜು ಪುಡಿಪುಡಿಯಾಗಿ, ಓರ್ವರಿಗೆ ಗಾಯವಾದ ಘಟನೆ ನಡೆದಿದೆ.

‘ಲಕ್ಷ್ಮಿ ಗಣೇಶ್’ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದಾಗ ಗಿಡುಗ ಬಸ್‌ನ ಮುಂಭಾಗಕ್ಕೆ ಬಡಿದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗದ ಗಾಜು ಸಂಪೂರ್ಣವಾಗಿ ಪುಡಿಯಾಗಿದೆ. ಘಟನೆಯಲ್ಲಿ ಓರ್ವರಿಗೆ ಗಾಯವಾಗಿದ್ದು, ಗಾಯದ ತೀವ್ರತೆ ಹಾಗೂ ಗಾಯಾಳುವಿನ ಗುರುತು ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಘಟನೆ ಮಂಗಳೂರು-ಮುಲ್ಕಿ ಸಮೀಪ ನಡೆದಿದೆ. ಹೆಚ್ಚಿನ ವಿವರಗಳು ನಿರೀಕ್ಷಿಸಲಾಗುತ್ತಿದೆ.


Spread the love

Exit mobile version