Home Mangalorean News Kannada News ಕೊಡವೂರು ಮಹಾ ರುದ್ರ ಯಾಗ : ಮಹರ್ಷಿ ಅನಂದ ಗುರೂಜಿಗೆ ಆಹ್ವಾನ

ಕೊಡವೂರು ಮಹಾ ರುದ್ರ ಯಾಗ : ಮಹರ್ಷಿ ಅನಂದ ಗುರೂಜಿಗೆ ಆಹ್ವಾನ

Spread the love

ಕೊಡವೂರು ಮಹಾ ರುದ್ರ ಯಾಗ : ಮಹರ್ಷಿ ಅನಂದ ಗುರೂಜಿಗೆ ಆಹ್ವಾನ

ಬೆಂಗಳೂರು: ಉಡುಪಿ ಜಿಲ್ಲೆಯ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾ ರುದ್ರ ಯಾಗ ಕಾರ್ಯಕ್ರಮಕ್ಕೆ ಬ್ರಹ್ಮಶ್ರೀ ಅನಂದ ಸಿದ್ಧಿ ಪೀಠದ ಸಂಸ್ಥಾಪಕರು ಹಾಗೂ ಶ್ರೀ ಭೂವರಾಹ ಸಾಲಿಗ್ರಾಮ ಕ್ಷೇತ್ರದ ಡಾ. ಶ್ರೀ ಶ್ರೀ ಮಹರ್ಷಿ ಅನಂದ ಗುರೂಜಿಯವರನ್ನು ಆಹ್ವಾನಿಸಲಾಯಿತು.

ಮಹಾ ರುದ್ರ ಯಾಗದ ಸೇವಾಕರ್ತರು ಹಾಗೂ ಮಹಾರುದ್ರ ಯಾಗ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಪ್ರಸಾದ್ ರಾಜ್ ಕಾಂಚನ್ ಅವರು ಆಹ್ವಾನ ಪತ್ರಿಕೆ ನೀಡಿ ಶ್ರೀಗಳನ್ನು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಪ್ರಸಾದ್ ರಾಜ್ ಕಾಂಚನ್ ಹಾಗೂ ಮಹಾರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕರಾದ ಕೃಷ್ಣಮೂರ್ತಿ ಆಚಾರ್ಯ ಮತ್ತು ತಾರನಾಥ್ ಪೂಜಾರಿ ಅವರು ಶ್ರೀಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಮೇ 15ರ ಶುಕ್ರವಾರ ನಡೆಯಲಿರುವ ಮಹಾರುದ್ರ ಯಾಗ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸಲಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಲಿದ್ದಾರೆ.


Spread the love

Exit mobile version