ಕೊಡವೂರು ಮಹಾ ರುದ್ರ ಯಾಗ: ಕನ್ನಿ ಮೀನುಗಾರರೊಂದಿಗೆ ಪೂರ್ವಭಾವಿ ಸಭೆ
ಮಲ್ಪೆ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾ ರುದ್ರ ಯಾಗ ಕಾರ್ಯಕ್ರಮ ಪೂರ್ವಭಾವಿಯಾಗಿ ಮಲ್ಪೆಯ ಕನ್ನಿ ಮೀನುಗಾರರ ಸಂಘದ ಸಭೆಯಲ್ಲಿ ಬಾಗವಹಿಸಿ ಮೀನುಗಾರರ ಜೊತೆ ಸಭೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಪರಮ ಶಿವನ ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಮೀನುಗಾರರು ಪಾಲ್ಗೊಂಡು ಶಂಕರನಾರಯಣ ಸ್ವಾಮಿ ಅನುಗ್ರಹಕ್ಕೆ ಪಾತ್ರರಾಗುವಂತೆ ಸಮಿತಿ ಪ್ರಧಾನ ಸಂಚಾಲಕರಾದ ಕೃಷ್ಣ ಮೂರ್ತಿ ಅಚಾರ್ಯ ಮನವಿ ಮಾಡಿದರು.
ಬಳಿಕ ಸಂಘದ ಎಲ್ಲಾ ಸದಸ್ಯರು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಕನ್ನಿ ಮೀನುಗಾರರ ಸಂಘದ ಆಧ್ಯಕ್ಷರರಾದ ದಯಕರ್ ವಿ ಸುವರ್ಣ ರವರಿಗೆ ಅಮಂತ್ರಣ ಪತ್ರಿಕೆ ನೀಡಲಾಯಿತು.
ಈ ಸಂಧರ್ಭದಲ್ಲಿ ರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕರಾದ ತಾರನಾಥ್ ,ಸಂಚಾಲಕರಾದ ರಮೇಶ್ ತಿಂಗಳಾಯ ಉಪಸ್ಥಿತರಿದ್ದರು.
