ಕೋಡಿಬೆಂಗ್ರೆ ಪ್ರವಾಸಿ ಬೋಟ್ ದುರಂತ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯವೇ ಕಾರಣ : ಯಶ್ ಪಾಲ್ ಸುವರ್ಣ
ಕೋಡಿ ಬೆಂಗ್ರೆ ಪ್ರವಾಸಿ ಬೋಟ್ ದುರಂತದಿಂದ ಪ್ರವಾಸಿಗರ ಸಾವಿಗೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರವಾಸಿ ಬೋಟ್ ಗಳು ನಿಯಮಾವಳಿಗಳನ್ನು ಮೀರಿ, ಸೂಕ್ತ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದರೂ ಪ್ರವಾಸೋದ್ಯಮ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ನಕಲಿ ದಾಖಲೆಗಳನ್ನು ನೀಡಿ ಕೆಲವು ಪ್ರವಾಸಿ ಬೋಟ್ ಗಳು ಪ್ರವಾಸಿ ಚಟುವಟಿಕೆ ನಡೆಸುತ್ತಿರುವ ಬಗ್ಗೆಯೂ ಇಲಾಖೆ ಕ್ರಮವಹಿಸಿಲ್ಲ.
ಮಲ್ಪೆ ಬೀಚಿನಲ್ಲಿ ಕೇವಲ ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಆಸಕ್ತಿ ತೋರುವ ಪ್ರವಾಸೋದ್ಯಮ ಇಲಾಖೆ ಸ್ವಚ್ಚತೆ, ಜೀವ ರಕ್ಷಕ ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ.
ಇಂತಹ ಘಟನೆಗಳು ಉಡುಪಿ ಜಿಲ್ಲಾ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
