Home Mangalorean News Kannada News ಕುಲಾಲ ಸಂಘ ಮುಂಬಯಿ – ಮಹಿಳಾ ವಿಭಾಗದಿಂದ ನಮ್ಮ ಸಂಸ್ಕೃತಿ – ತುಳುವೆರೆ ಆಯನ ಸನ್ಮಾನ...

ಕುಲಾಲ ಸಂಘ ಮುಂಬಯಿ – ಮಹಿಳಾ ವಿಭಾಗದಿಂದ ನಮ್ಮ ಸಂಸ್ಕೃತಿ – ತುಳುವೆರೆ ಆಯನ ಸನ್ಮಾನ , ನೃತ್ಯ ರೂಪಕದ ಸ್ಪರ್ಧೆ

Spread the love

ಕುಲಾಲ ಸಂಘ ಮುಂಬಯಿ – ಮಹಿಳಾ ವಿಭಾಗದಿಂದ ನಮ್ಮ ಸಂಸ್ಕೃತಿ – ತುಳುವೆರೆ ಆಯನ ಸನ್ಮಾನ , ನೃತ್ಯ ರೂಪಕದ ಸ್ಪರ್ಧೆ

ಮುಂಬಯಿ: ತುಳು ಬಾಷೆ, ಸಂಸ್ಕೃತಿ, ಸಂಸ್ಕಾರಕ್ಕೆ ಕೇವಲ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಮಹತ್ವವಿದೆ. ಸರಕಾರವೂ ತುಳು ಬಾಷೆಗೆ ಮಾನ್ಯತೆ ನೀಡಿದೆ. ಸಂಘದ ಅಭಿವೃದ್ದಿಯೊಂದಿಗೆ ಇಂತಹ ತುಳು ಬಾಷೆ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸೋಣ ಎಂದು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ. ಮೂಲ್ಯ ಪಾದೆಬೆಟ್ಟು ನುಡಿದರು.

ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ವತಿಯಿಂದ “ನಮ್ಮ ಸಂಸ್ಕೃತಿ – ತುಳುವೆರೆ ಆಯನ” ಸಾಂಸ್ಕೃತಿಕ ಕಾರ್ಯಕ್ರಮವು ಸೆ. 20 ರಂದು ದಾದರ್ ಪೂರ್ವದ ಹಿಂದೂ ಕಾಲೋನಿಯಲ್ಲಿರುವ ಬಿ. ಎನ್. ವೈದ್ಯ ಸಭಾಗೃಹ (ಕಿಂಗ್ ಜಾರ್ಜ್ ಆಡಿಟೋರಿಯಂ) ನಲ್ಲಿ ಜರಗಿದ್ದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ ಹಾಗೂ ಜೀವನ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಕಾರ್ಯಕ್ರಮಗಳ ಪಾತ್ರ ಮಹತ್ವದ್ದಾಗಿದೆ. ಸಂಘದ ಚಟುವಟೆಕೆಗಳಲ್ಲಿ ಯುವ ಜನಾಂಗವು ಅಧಿಕ ಸಂಖ್ಯೆಯಲ್ಲಿ ಬಾಗವಹಿಸುವಂತಾಗಲಿ. ಮಹಿಳೆಯರು ಇದೇ ರೀತಿ ಒಗ್ಗಟ್ಟಿನಿಂದ ಮುಂದುವರಿಯಲಿ. ಮಹಿಳಾ ವಿಭಾಗವು ಆಯೋಜಿಸಿರುವ ಈ ಕಾರ್ಯಕ್ರಮವು ತುಳುವರ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುವುದರ ಜೊತೆಗೆ ಸಂಘದ ಸದಸ್ಯರಲ್ಲಿ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಅಭಿಮಾನವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ ಮಾತನಾಡುತ್ತಾ, “ಸಂಸ್ಕೃತಿ ಕೇವಲ ಆಚರಣೆಯಲ್ಲ; ಸಂಸ್ಕೃತಿ ನಮ್ಮ ಬದುಕಿನ ನಡೆ. ಸಂಸ್ಕೃತಿ ನಮ್ಮ ಮೂಲ ಬೇರು ಹಾಗೂ ನಮ್ಮ ಗುರುತು. ಗೋಮಾತೆ, ಭಾರತ ಮಾತೆ ಎಂದು ಗೌರವಿಸುವ ಭಾರತದ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಮಹಿಳೆ ಇಡೀ ಸಮಾಜದ ಪ್ರತಿಬಿಂಬವಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ನಾವೆಲ್ಲರೂ ಒಂದಾಗಿ ನಮ್ಮ ಸಂಸ್ಕೃತಿಯನ್ನು ಆಚರಿಸಿ, ಮುಂದಿನ ಪೀಳಿಗೆಗೆ ಪರಿಚಯಿಸೋಣ” ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿಯವರು ಮಾತನಾಡಿ, “ನಮ್ಮನ್ನು ಸ್ವಾಗತಿಸಿದ ರೀತಿಯನ್ನು ನೋಡಿದಾಗ ನಿಜವಾಗಿಯೂ ಇಲ್ಲಿ ಸಂಸ್ಕೃತಿ ಎದ್ದು ಕಾಣುತ್ತಿದೆ. ನಾವು ಎಲ್ಲೇ ಇದ್ದರೂ ನಮ್ಮ ಮೂಲ ಬೇರು ನಮ್ಮ ಊರಿನಲ್ಲಿಯೇ ಇದೆ. ಆದ್ದರಿಂದ ತುಳು ಭಾಷೆಗೆ ಪ್ರಧಾನ್ಯತೆ ನೀಡೋಣ ಹಾಗೂ ತುಳು ಲಿಪಿಯನ್ನು ಕಲಿಯೋಣ. ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ನಾಡಿನ ಭಾಷೆ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ” ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಸಮಾಜ ಸೇವಕಿ ಪ್ರಿಯದರ್ಶಿನಿ ಸುನಿಲ್ ಕುಲಾಲ್ ಮಾತನಾಡಿ, “ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಮೂಲಕ ನಾಡಿನ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ತುಳುವರು ಎಲ್ಲಿ ನೆಲೆಸಿದ್ದರೂ ತಮ್ಮ ಪ್ರತಿಭೆ ಹಾಗೂ ಸಾಧನೆಯ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸುತ್ತಾರೆ. ಬಹುಕಾಲದಿಂದ ಕನಸಾಗಿಯೇ ಉಳಿದಿದ್ದ ತುಳು ಭಾಷೆಗೆ ಸರ್ಕಾರವು ಪ್ರಾಧಾನ್ಯತೆ ನೀಡಿರುವುದು ಅಭಿನಂದನೀಯ” ಎಂದು ಹೇಳಿದರು.

ಸಮಾಜ ಸೇವಕಿ ನಮ್ರತಾ ಜಗದೀಶ್ ಬಂಜನ್ ಮಾತನಾಡಿ, “ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದಕ್ಕೆ ನಾನು ಋಣಿಯಾಗಿದ್ದೇನೆ. ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳನ್ನು ನಾವೇ ಉಳಿಸಿ ಬೆಳೆಸಬೇಕಾಗಿದೆ. ಇಂತಹ ಉತ್ತಮ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಕ್ಕೆ ನನ್ನ ಸಂಪೂರ್ಣ ಪ್ರೋತ್ಸಾಹವಿದೆ” ಎಂದರು.

ಅತಿಥಿಯಾಗಿ ಉಪಸ್ಥಿತರಿದ್ದ ಸಮಾಜ ಸೇವಕಿ ದೇವಕಿ ಸುನಿಲ್ ಸಾಲಿಯಾನ್ ಮಾತನಾಡಿ ಸಮಾರಂಭಕ್ಕೆ ಶುಭ ಕೋರಿದರು.

ಕೊಡುಗೈ ದಾನಿ ಡಾ. ಸುರೇಖಾ ರತನ್ ಕುಲಾಲ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, “ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟ ಸಂಸ್ಕೃತಿ ಮತ್ತು ಸಂಸ್ಕಾರಗಳು ನಮ್ಮ ನಡೆ-ನುಡಿಯಲ್ಲಿ ಪ್ರತಿಬಿಂಬಿಸುತ್ತವೆ. ನಮ್ಮ ಆಹಾರ ಪದ್ಧತಿಯೂ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಪ್ರತಿಯೊಂದು ಸಂಸ್ಕೃತಿಯ ಹಿಂದೆ ಅದರದೇ ಆದ ಸಂಸ್ಕಾರ ಅಡಗಿದೆ. ಇಂತಹ ಅಮೂಲ್ಯವಾದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.

ಮುಖ್ಯ ಬಾಷಣಕಾರರಾಗಿ ಆಗಮಿಸಿದ ಚಿಣ್ಣರ ಬಿಂಬ ಟ್ರಸ್ಟ್‌ನ ಮುಖ್ಯ ಸಮನ್ವಯಕಿ ಗೀತಾ ರಘುರಾಮ ಹೇರಳ ಅವರು ತುಳು ಸಂಸ್ಕೃತಿಯ ಬಗ್ಗೆ ತಿಳಿಸುತ್ತಾ ತುಳು ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಮನೆಯ ಹಿರಿಯರಿಂದ ಸಂಸ್ಕೃತಿಯ ಬಗ್ಗೆ ನಾವು ತಿಳಿದಿದ್ದೇವೆ. ತುಳುವರಿಗೆ ಒಳ್ಳೆಯ ಸಂಸ್ಕೃತಿ ಸಂಸ್ಕಾರವಿದೆ. ತುಳು ಸಂಸ್ಕೃತಿಗೆ ದೇಶದಲ್ಲೇ ಪ್ರಾಮುಖ್ಯತೆ ಇದೆ. ಹಿರಿಯರನ್ನು ಗೌರವಿಸುವುದು ಸಂಸ್ಕೃತಿಯ ಒಂದು ಬಾಗ. ಮಹಿಳೆಯರು ಮಕ್ಕಳಿಗೆ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಊರಿನ ನಮ್ಮ ದೈವ ದೇವರ ಬಗ್ಗೆ ಮಕ್ಕಳಿಗೆ ಅರಿವು ಉಂಟಾಗಬೇಕು. ಮಕ್ಕಳು ದೇಶದ ದೊಡ್ಡ ಶಕ್ತಿ ಎನ್ನುತ್ತಾ ಸಂಸ್ಕೃತಿಯ ಬಗ್ಗೆ ಮಾಹಿತಿಯಿತ್ತರು.

ಕುಲಾಲ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಸಂಘದ ಚಟುವಟಿಕೆಗಳ ಮಾಹಿತಿಯಿತ್ತರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ಸುಮತಿ ಬಂಜನ್ ಮತ್ತು ಮಮತಾ ಗುಜರನ್ ಇವರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು. ರತ್ನಾ ಡಿ. ಕುಲಾಲ್ ಪರಿಚಯಿಸಿದರು.

ದಾನಿಗಳನ್ನು ಹಾಗೂ ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳನ್ನು, ಸ್ಥಳೀಯ ಸಮಿತಿಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳನ್ನು ಮತ್ತು ಕಾರ್ಯಕಾರಿ ಸಮಿತಿಯ ಮತ್ತು ಉಪಸಮಿತಿಗಳ ಸದಸ್ಯರುಗಳನ್ನು ಗೌರವಿಸಲಾಯಿತು.

ವೇದಿಕೆಯಲಿದ್ದ ಗಣ್ಯರು ದೀಪ ಬೆಳಗಿಸಿ ಹಿಂಗಾರ ಅರಳಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಪ್ರಣಿತಾ ಅವರು ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ನಯನಾ ಎನ್. ಬಂಗೇರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕೃಪ ಜಗದೀಶ್ ಮೂಲ್ಯ, ಪ್ರತಿಕ್ಷಾ ಸೌರಬ್ ಬಂಗೇರ ನೆರವೇರಿಸಿದರು. ಕೋಶಾಧಿಕಾರಿ ಲತಾ ಎಸ್. ಮೂಲ್ಯ ವಂದನಾರ್ಪಣೆ ಮಾಡಿದರು. ಬೆಳಗ್ಗೆ ಮಹಿಳಾ ಸದಸ್ಯರಿಂದ ಹಳದಿ-ಕುಂಕುಮ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳು ಮಾತ್ರವಲ್ಲದೆ ಸ್ಥಳೀಯ ಸಮಿತಿಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳಾದ ರತ್ನಾ ಡಿ. ಕುಲಾಲ್, ರೇಣುಕಾ ಎಸ್ ಸಾಲ್ಯಾನ್, ಕುಶಲಾ ಜಿ ಬಂಗೇರ, ಬೇಬಿ ವಿ ಬಂಗೇರ ಮತ್ತು ಇಂದಿರಾ ಆರ್ ಬಂಜನ್ ಉಪಸ್ಥಿತರಿದ್ದರು.

ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಉಪಾಧ್ಯಕ್ಷ ಡಿ.ಐ. ಮೂಲ್ಯ, ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲಿಯಾನ್, ಕೋಶಾಧಿಕಾರಿ ಜಯ ಎಸ್. ಅಂಚನ್, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ್ ಸಿ ಮೂಲ್ಯ ಮತ್ತು ಸುನಿಲ್ ಕೆ ಕುಲಾಲ್, ಜೊತೆ ಕೋಶಾಧಿಕಾರಿ ರೇಣುಕಾ ಎಸ್ ಸಾಲ್ಯಾನ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕವಿತಾ ಸಿ. ಹಂಡ, ಕಾರ್ಯದರ್ಶಿ ನಯನಾ ಎನ್. ಬಂಗೇರ, ಕೋಶಾಧಿಕಾರಿ ಲತಾ ಎಸ್. ಮೂಲ್ಯ ಜೊತೆ ಕಾರ್ಯದರ್ಶಿ ಆರತಿ ಕೆ ಸಾಲ್ಯಾನ್, ಜೊತೆ ಕೋಶಾಧಿಕಾರಿ ಚಂದ್ರಾವತಿ ಎಸ್ ಸಾಲ್ಯಾನ್ ಮತ್ತು ಎಲ್ಲಾ ಸದಸ್ಯರು ಕಾರ್ಯಕಾರಿ ಸಮಿತಿ ಹಾಗೂ ಯುವ ವಿಭಾಗದ ಎಲ್ಲಾ ಸದಸ್ಯರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಸಾಂಪ್ರದಾಯಿಕ ಕಲೆಗಳು, ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ವೈವಿಧ್ಯವನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು. ಮಹಿಳಾ ವಿಭಾಗದ ಸದಸ್ಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ತುಳು ಸಂಸ್ಕೃತಿಯ ವೈಭವವನ್ನು ಸಾರುವ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.

ಮಧ್ಯಾಹ್ನ ‘ನಮ್ಮ ಸಂಸ್ಕೃತಿ’ ಶೀರ್ಷಿಕೆಯಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಐದು ಸ್ಥಳೀಯ ಸಮಿತಿಗಳ ಮಹಿಳಾ ವಿಭಾಗದ ಸದಸ್ಯರು ಉತ್ಸಾಹದಿಂದ ಭಾಗವಹಿಸಿ, ಕುಲಾಲ ಸಂಸ್ಕೃತಿಯನ್ನು ಆಧರಿಸಿದ ನೃತ್ಯ ರೂಪಕ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಇದರೊಂದಿಗೆ ಹಾಸ್ಯ, ಗಾಯನ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು.


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version