Home Mangalorean News Kannada News ಮಹಾಲಕ್ಷ್ಮೀ ಬ್ಯಾಂಕಿನ 48ನೇ ವಾರ್ಷಿಕ ಮಹಾಸಭೆ : ಶೇ. 15 ಡಿವಿಡೆಂಡ್ ಘೋಷಣೆ

ಮಹಾಲಕ್ಷ್ಮೀ ಬ್ಯಾಂಕಿನ 48ನೇ ವಾರ್ಷಿಕ ಮಹಾಸಭೆ : ಶೇ. 15 ಡಿವಿಡೆಂಡ್ ಘೋಷಣೆ

Spread the love

ಮಹಾಲಕ್ಷ್ಮೀ ಬ್ಯಾಂಕಿನ 48ನೇ ವಾರ್ಷಿಕ ಮಹಾಸಭೆ : ಶೇ. 15 ಡಿವಿಡೆಂಡ್ ಘೋಷಣೆ

  • ಮಹಾನಗರಿ ಮುಂಬೈಗೂ ಮಹಾಲಕ್ಷೀ ಬ್ಯಾಂಕ್ ವ್ಯವಹಾರ ವಿಸ್ತರಣೆ: ಯಶ್ಪಾಲ್ ಸುವರ್ಣ

ಉಡುಪಿ: ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ 2025-26ನೇ ಸಾಲಿನ 48ನೇ ವಾರ್ಷಿಕ ಮಹಾಸಭೆಯು ದಿನಾಂಕ 26-08-2026 ಬುಧವಾರ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣರವರ ಅಧ್ಯಕ್ಷತೆಯಲ್ಲಿ ಉಡುಪಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು.

ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಎ. ಸುವರ್ಣರವರು ಸರ್ವ ಸದಸ್ಯರನ್ನು ಸ್ವಾಗತಿಸಿ, ಮಹಾಲಕ್ಷ್ಮೀ ಬ್ಯಾಂಕ್ ತನ್ನ ವ್ಯವಹಾರ ಕ್ಷೇತ್ರವನ್ನು ಮಹಾರಾಷ್ಟ್ರ ರಾಜ್ಯಕ್ಕೂ ವಿಸ್ತರಿಸಿ ಮಹಾನಗರಿ ಮುಂಬೈ ನಗರದಲ್ಲಿಯೂ ಗ್ರಾಹಕರಿಗೆ ಸೇವೆ ನೀಡುವ ಯೋಜನೆ ಆಡಳಿತ ಮಂಡಳಿಯ ಮುಂದಿದೆ. ನಿರಂತರ 16 ವರ್ಷಗಳಿಂದ ಅತಿ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸದಸ್ಯರು ಮತ್ತು ಗ್ರಾಹಕರ ವಿಶ್ವಾಸ ಹಾಗೂ ಸಹಕಾರದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಗರಿಷ್ಟ ಲಾಭ ದಾಖಲಿಸಿದೆ.

2027-28ನೇ ಸಾಲಿನಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 1000 ಕೋಟಿ ಠೇವಣಿ ಸಂಗ್ರಹ ಹಾಗೂ 1 ಲಕ್ಷ ಗ್ರಾಹಕರನ್ನು ಹೊಂದುವ ಗುರಿಯೊಂದಿಗೆ ಕಾರ್ಯೋನ್ಮುಖವಾಗಿದ್ದು ಸಮಾಜಮುಖಿ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಸುವರ್ಣ ಮಹೋತ್ಸವ ಆಚರಿಸಲಿದ್ದು, ಸುಮಾರು 7.5 ಕೋಟಿ ವೆಚ್ಚದಲ್ಲಿ ಉಡುಪಿ ನಗರದ ಹೃದಯಭಾಗದಲ್ಲಿರುವ ಸ್ವಂತ ಕಟ್ಟಡಕ್ಕೆ ಶೀಘ್ರದಲ್ಲಿಯೇ ಉಡುಪಿ ಶಾಖೆ ಮತ್ತು ಗಂಗೊಳ್ಳಿ ಶಾಖೆ ಸ್ವಂತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಸುರತ್ಕಲ್ ಶಾಖೆ ಗ್ರಾಹಕರ ಸೇವೆಗಾಗಿ ವಿಸ್ತರಣೆಗೊಳ್ಳುತ್ತಿದ್ದು, ಹೆಜಮಾಡಿ ಶಾಖೆಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆಯೂ ನಿರ್ಧರಿಸಲಾಗಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ ಸಹಕಾರಿ ಸಂಸ್ಥೆಗೆ ಸಮರ್ಥ ನಾಯಕತ್ವ ಸಿಕ್ಕಿದಲ್ಲಿ ಯಾವ ರೀತಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಮಹಾಲಕ್ಷ್ಮೀ ಬ್ಯಾಂಕಿನ ಸಮಗ್ರ ಅಭಿವೃದ್ಧಿಯೇ ಕೈಗನ್ನಡಿ. ಶಾಸಕ ಯಶ್ಪಾಲ್ ಸುವರ್ಣ ಮಹಾಲಕ್ಷ್ಮೀ ಬ್ಯಾಂಕ್ ಹಾಗೂ ದ.ಕ. ಮೀನು ಮಾರಾಟ ಫೆಡರೇಶನ್ ಎರಡೂ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಬರುತ್ತಿದ್ದು, ಓರ್ವ ಸಹಕಾರಿ ಮುಖಂಡರಾಗಿ ಕರಾವಳಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ ಎಂದರು.

ಮಲ್ಪೆ ಮೀನುಗಾರ ಸಂಘದ ಮಾಜಿ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ ಮಹಾಲಕ್ಷ್ಮೀ ಬ್ಯಾಂಕ್ ತನ್ನ ಗ್ರಾಹಕ ಸ್ನೇಹಿ ಸೇವೆಯಿಂದ ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರವಾಗಿ ಇಂದು ಸಧೃಡ ಆರ್ಥಿಕ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ಇತ್ತೀಚಿನ ಕೆಲವು ದಿನಗಳಿಂದ ಬ್ಯಾಂಕಿನ ಏಳಿಗೆ ಸಹಿಸದೆ ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಆಡಳಿತ ಮಂಡಳಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಮೊಗವೀರ ಸಮುದಾಯದ ಹಿರಿಯರು ಸುಮಾರು 50 ವರ್ಷಗಳ ಹಿಂದೆ ಮೀನುಗಾರರಿಗೆ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಸ್ಥಾಪಿಸಿದ್ದ ಮಹಾಲಕ್ಷ್ಮೀ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದು ಎಲ್ಲಾ ಸಮುದಾಯದ ಗ್ರಾಹಕರಿಗೂ ಉತ್ತಮ ಸೇವೆ ನೀಡುತ್ತಾ ಮಾದರಿ ಆರ್ಥಿಕ ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ಸಮಸ್ತ ಮೊಗವೀರ ಸಮಾಜಕ್ಕೆ ಹೆಮ್ಮೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿನ ವಿರುದ್ಧ ಕೆಲವು ವ್ಯಕ್ತಿಗಳು ನಿರಂತರ ಅಪಪ್ರಚಾರ ನಡೆಸುತ್ತಾ ಬ್ಯಾಂಕಿನ ವಿಶ್ವಾ ಸಾರ್ಹತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು ಇಂತಹ ಷಡ್ಯಂತ್ರವನ್ನು ಮೊಗವೀರ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

ಬ್ಯಾಂಕಿನ ನಿವ್ವಳ ಲಾಭದಲ್ಲಿ ಸಹಕಾರ ಶಿಕ್ಷಣ ನಿಧಿಗೆ ರೂ.15,51,089/-ರ ಚೆಕ್ನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಅಧ್ಯಕ್ಷ ಯಶ್ಪಾಲ್ ಸುವರ್ಣ ಹಸ್ತಾಂತರಿಸಿದರು.

ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರದ ಸಾಧಕರಾದ ವೈಭವಿ ಎಸ್. ಕರ್ಕೇರ, ಸಾತ್ವಿಕ, ಧನ್ಯಾ, ಪ್ರಗತಿ ಎಲ್. ಕೋಟ್ಯಾನ್, ವೈಷ್ಣವಿ ಎಸ್. ಕರ್ಕೇರ, ಡಾ|| ಅಶ್ವಿತಾ, 2026ನೇ ಸಾಲಿನ ಸಿ.ಎ ಅಂತಿಮ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸಿ.ಎ. ರಿತೇಶ್ ಜೆ. ಕೋಟ್ಯಾನ್, 25 ಗಂಟೆಗಳ ಕಾಲ ನಿರಂತರ ದಾಸರ ಪದಗಳನ್ನು ಹಾಡುವ ಮೂಲಕ ವಿಶ್ವದಾಖಲೆ ಮಾಡಿರುವ ವಿದುಷಿ ಸಂಗೀತ ಬಾಲಚಂದ್ರ ಹಾಗೂ ಜೀ ಕನ್ನಡ ವಾಹಿನಿಯ ಲಿಟ್ಲ್ ಚಾಂಪಿಯನ್ ರಿಯಾಲಿಟಿ ಶೋ ಸೆಮಿಫೈನಲಿಸ್ಟ್ ವೃದ್ಧಿ ಆರ್. ಕೊಳಂಬೆ ಯವರನ್ನು ಸಮಾರಂಭದಲ್ಲಿ ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ನಾರಾಯಣ ಕರ್ಕೇರ, ಮೀನುಗಾರ ಮುಖಂಡರಾದ ರಾಮಚಂದ್ರ ಕುಂದರ್, ಶಿವಪ್ಪ ಟಿ. ಕಾಂಚನ್, ಸತೀಶ್ ಕುಂದರ್, ರತ್ನಾಕರ ಸಾಲ್ಯಾನ್, ದಯಾನಂದ ಕುಂದರ್, ಶರಣ್ ಕುಮಾರ್ ಮಟ್ಟು, ದಯಾಕರ ಸುವರ್ಣ, ನಾಗರಾಜ ಕುಂದರ್, ನಾಗರಾಜ ಸುವರ್ಣ, ಗುಂಡು ಬಿ. ಅಮೀನ್, ದೇವಪ್ಪ ಕಾಂಚನ್, ವಿಜಯ ಬಂಗೇರ, ಲೋಕೇಶ್ ಸಾಲ್ಯಾನ್, ಅರುಣ್ ಕುಮಾರ್, ಹರೀಶ್ಚಂದ್ರ ಮೆಂಡನ್, ಸುಂದರ ಪಿ. ಸಾಲ್ಯಾನ್ ಹಾಗೂ ಬ್ಯಾಂಕಿನ ಉಪಾಧ್ಯಕ್ಷರಾದ ವಾಸುದೇವ ಸಾಲ್ಯಾನ್, ನಿರ್ದೇಶಕರುಗಳಾದ ಶಶಿಕಾಂತ ಬಿ ಕೋಟ್ಯಾನ್, ಶೋಭೇಂದ್ರ ಸಸಿಹಿತ್ಲು, ಕೆ. ಸಂಜೀವ ಶ್ರೀಯಾನ್, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ಸುರೇಶ್ ಬಿ ಕರ್ಕೇರ, ಶಿವರಾಮ ಕುಂದರ್, ವೆಂಕಟರಮಣ ಕಿದಿಯೂರು, ವನಜಾ ಜೆ ಪುತ್ರನ್, ಶ್ರೀಮತಿ ವನಜ ಕಿದಿಯೂರು, ಸದಾನಂದ ಬಳ್ಕೂರು, ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್. ಕೆ, ಸಿ.ಎ. ಅಜಿತ್ ಕುಮಾರ್, ಹರೀಂದ್ರನಾಥ ಶೆಟ್ಟಿ, ಪಾರ್ಶ್ವನಾಥ ಹಾಗೂ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರಾದ ಶ್ರೀ ಶರತ್ ಕುಮಾರ್ ಶೆಟ್ಟಿ ಎನ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಾರಿಕಾ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version