Home Mangalorean News Kannada News ಮಂಗಳೂರು: ಗೃಹರಕ್ಷಕದಳ ಕಛೇರಿಯಲ್ಲಿ ಪ್ರವಾಹ ರಕ್ಷಣಾ ತಂಡದ ಪೂರ್ವಸಿದ್ಧತೆ

ಮಂಗಳೂರು: ಗೃಹರಕ್ಷಕದಳ ಕಛೇರಿಯಲ್ಲಿ ಪ್ರವಾಹ ರಕ್ಷಣಾ ತಂಡದ ಪೂರ್ವಸಿದ್ಧತೆ

Spread the love

ಮಂಗಳೂರು: ಗೃಹರಕ್ಷಕದಳ ಕಛೇರಿಯಲ್ಲಿ ಪ್ರವಾಹ ರಕ್ಷಣಾ ತಂಡದ ಪೂರ್ವಸಿದ್ಧತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಪ್ರವಾಹ ರಕ್ಷಣಾ ತಂಡಗಳ ಪೂರ್ವಸಿದ್ಧತೆ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಬೂಮರಡ್ಡಿ ಅವರು ಪ್ರವಾಹ ರಕ್ಷಣಾ ತಂಡದ ಸಾಮಾಗ್ರಿಗಳಾದ ಫೈಬರ್ ಬೋಟ್, ಲೈಫ್ ಜಾಕೆಟ್, ಲೈಫ್ ಬಾಯ್ ಮತ್ತು ಹಗ್ಗಗಳನ್ನು ಪರೀಕ್ಷಿಸಿ ಪ್ರವಾಹ ರಕ್ಷಣಾ ತಂಡವನ್ನು ಸಿದ್ಧಪಡಿಸಿ, ಪ್ರವಾಹ ರಕ್ಷಣಾ ತಂಡದ ಸದಸ್ಯರುಗಳಿಗೆ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯವನ್ನು ಮಾಡುವ ಕುರಿತು ಮಾರ್ಗದರ್ಶನ ನೀಡಿದರು. ಸಾರ್ವಜನಿಕರಿಂದ ತುರ್ತು ಕರೆ ಬಂದಾಗ ಕರ್ತವ್ಯಕ್ಕೆ ಸನ್ನದ್ಧರಾಗಿರುವಂತೆ ರಕ್ಷಣಾ ತಂಡದ ಸದಸ್ಯರುಗಳಿಗೆ ಸೂಚನೆ ನೀಡಿದರು.

ಕೇಂದ್ರ ಕಛೇರಿಯಿಂದ ನೀಡಲಾದ ಬೋಟ್‍ಗಳನ್ನು ಹಾಗೂ ಪ್ರವಾಹ ರಕ್ಷಣಾ ಸಾಮಗ್ರಿಗಳನ್ನು ಈಗಾಗಲೇ ಘಟಕಗಳ ಘಟಕಾಧಿಕಾರಿ/ಪ್ರಭಾರ ಘಟಕಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ಕವಿತಾ ಕೆ.ಸಿ., ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ವಿಶ್ವನಾಥ ಎಮ್., ಸಹಾಯಕ ಬೋಧಕ ಸುನಿಲ್ ಮುಗಳ್‍ಕೋಡ್, ಮಂಗಳೂರು ಘಟಕದ ಘಟಕಾಧಿಕಾರಿ ಸುನಿಲ್ ಕುಮಾರ್ ಮತ್ತು ಗೃಹರಕ್ಷಕರಾದ ಧನಂಜಯ, ಕೇಶವ ಶೆಟ್ಟಿಗಾರ್, ಜ್ಞಾನೇಶ್ ಕೋಟ್ಯಾನ್, ದಿನೇಶ್ ಆಚಾರ್ಯ, ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version