Home Mangalorean News Kannada News ಮಂಗಳೂರು: ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್ ಲಾರಿ ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ಮಂಗಳೂರು: ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್ ಲಾರಿ ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Spread the love

ಮಂಗಳೂರು: ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್ ಲಾರಿ ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ಮುಲ್ಕಿ: ರಸ್ತೆ ಬದಿ ಬಸ್ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿರುವ ಘಟನೆ ಪಾವಂಜೆ ದೆವಸ್ಥಾನದ ಮುಂಭಾಗ ಶುಕ್ರವಾರ ಸಂಜೆ ನಡೆಸಿದೆ.

ಗಾಯಗೊಂಡವರನ್ನು ಶಿಕ್ಷಕಿ ಕುಸುಮಾ ಮತ್ತು ಅವರ ಮಗಳು ಸುಮಲತಾ (14) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅವರು ಪಾವಂಜೆಯಲ್ಲಿ ನಿಂತು ಬಸ್ ಕಾಯುತ್ತಿದ್ದ ವೇಳೆ ಮಂಗಳೂರು- ಉಡುಪಿ ಕಡೆ ಸಂಚರಿಸುತ್ತಿದ ಟ್ರೈಲರ್ ಲಾರಿ ಢಿಕ್ಕಿ ಹೊಡೆದಿದೆ. ಘಟನೆಯಿಂದ ಕುಸುಮಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಸಮತಲಾ ಅವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟ್ರೈಲರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


Spread the love

Exit mobile version