Home Mangalorean News Kannada News ಮಂಗಳೂರು| ಮೆಕ್ ಡೊನಾಲ್ಡ್ ಆಹಾರ ಮಳಿಗೆಗೆ ಅಧಿಕಾರಿಗಳ ದಾಳಿ: ಪರಿಶೀಲನೆ

ಮಂಗಳೂರು| ಮೆಕ್ ಡೊನಾಲ್ಡ್ ಆಹಾರ ಮಳಿಗೆಗೆ ಅಧಿಕಾರಿಗಳ ದಾಳಿ: ಪರಿಶೀಲನೆ

Spread the love

ಮಂಗಳೂರು| ಮೆಕ್ ಡೊನಾಲ್ಡ್ ಆಹಾರ ಮಳಿಗೆಗೆ ಅಧಿಕಾರಿಗಳ ದಾಳಿ: ಪರಿಶೀಲನೆ

ಮಂಗಳೂರು: ನಗರದ ಕೆ.ಎಸ್ ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್ ನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಮ್ಯಾಕ್ಡೊನಾಲ್ಡ್ ಆಹಾರ ಮಳಿಗೆಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆಯಷ್ಟೇ ಕೆಎಫ್ ಸಿ ಮಳಿಗೆಯಲ್ಲಿ ಕೊಳೆತ ಚಿಕನ್ ಮಾಂಸ ಪತ್ತೆಯಾಗಿದ್ದರಿಂದ ಆಹಾರ ಇಲಾಖೆ ಅಧಿಕಾರಿಗಳು ಎಚ್ಚತ್ತುಕೊಂಡಿದ್ದು ಇಂದು ಅದೇ ಮಾಲ್ ನಲ್ಲಿರುವ ಮೆಕ್ ಡೊನಾಲ್ಡ್ ಕಂಪನಿಯ ಮಳಿಗೆಯಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಮಳಿಗೆಯಲ್ಲಿ ಮಾಂಸ ಇನ್ನಿತರ ವಸ್ತುಗಳನ್ನು ಶೇಖರಿಸಿಟ್ಟ ಫ್ರೀಜರ್, ಚಿಕನ್ ಬರ್ಗರ್ ಇನ್ನಿತರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಮಾಂಸ ಮತ್ತು ತರಕಾರಿ ವಸ್ತುಗಳನ್ನು ಒಂದೇ ಸ್ಟೋರೇಜ್, ಫ್ರೀಜರ್ ನಲ್ಲಿ ಇಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗಳು ಹೈಜೀನ್ ಅವ್ಯವಸ್ಥೆಯ ಬಗ್ಗೆ ಎಚ್ಚರಿಕೆಯ ನೋಟಿಸ್ ಅಂಟಿಸಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಡೀಪ್ ಫ್ರೀಜರ್ ನಲ್ಲಿ ಮಾಂಸಹಾರ ಮತ್ತು ಸಸ್ಯಹಾರ ಒಟ್ಟಿಗೆ ಇಟ್ಟಿರುವುದು ಪತ್ತೆಯಾಗಿದೆ. ಪ್ರತ್ಯೇಕ ಸ್ಟೋರೇಜ್ ವ್ಯವಸ್ಥೆ ಇಟ್ಟುಕೊಂಡಿರಬೇಕು ಸೇರಿದಂತೆ ಆಹಾರ ಉತ್ಪನ್ನಗಳ ಸುರಕ್ಷತೆ ಬಗ್ಗೆ ವಿಶೇಷ ಆದ್ಯತೆ ನೀಡಬೇಕು. ಇದೇ ರೀತಿಯ ಪರಿಸ್ಥಿತಿ ಪುನರಾವರ್ತನೆಯಾದರೆ ದಂಡ ವಿಧಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


Spread the love

Exit mobile version