ಕಾವೂರು ಧರಣಿ ರೆಸಿಡೆನ್ಸಿನಲ್ಲಿ ವಾಸವಿದ್ದ ಬುದ್ದಿಮಾಂದ್ಯ ವ್ಯಕ್ತಿ ನಾಪತ್ತೆ
ಮಂಗಳೂರು: ಚಿಕ್ಕಮಗಳೂರು ಆಲ್ದೂರು ಮೂಲದ ಪ್ರಸ್ತುತ ಕಾವೂರು ಧರಣಿ ರೆಸಿಡೆನ್ಸಿನಲ್ಲಿ ವಾಸವಿದ್ದ ರವಿ (34) ಎಂಬವರು ಬುದ್ದಿಮಾಂದ್ಯರಾಗಿದ್ದು, ಮೇ 24 ರಂದು ಮನೆ ಬಿಟ್ಟು ಹೋಗಿದ್ದು, ಈ ಬಗ್ಗೆ ಕಾವೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಎತ್ತರ ಸುಮಾರು 5.5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಪಟ್ಟಿಗಳಿರುವ ಶರ್ಟ್, ಬೂದು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಾವೂರು ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
