ಜು. 4-6 ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಚಿವ ಖಾದರ್ ಪ್ರವಾಸ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರು ಜುಲೈ 4 ರಿಂದ 6 ರವರೆಗೆ ಕೈಗೊಳ್ಳುವ ಪ್ರವಾಸ ವಿವರ ಈ ರೀತಿ ಇವೆ.
ಜುಲೈ 4 ರಂದು ಬೆಳಿಗ್ಗೆ 10:30 ಕಾರವಾರದಲ್ಲಿ ಹಾಗೂ ಸಂಜೆ 4:30 ಉಡುಪಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ರಾತ್ರಿ 8:15 -ಮಂಗಳೂರಿನ ಐ.ಎಮ್.ಎ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜುಲೈ 5 ರಂದು ಬೆಳಿಗ್ಗೆ 10- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ, ಮಧ್ಯಾಹ್ನ 12:30- ಮಂಗಳೂರಿನಿಂದ ಕೊಡಗು ಜಿಲ್ಲೆಗೆ ತೆರಳಿ, ವಾಸ್ತವ್ಯ.
ಜುಲೈ 6 ರಂದು ಬೆಳಿಗ್ಗೆ 10:30 – ಸುಳ್ಯದಲ್ಲಿ ಸ್ಥಳೀಯ ಕಾರ್ಯಕ್ರಮ, ಸಂಜೆ 5 – ಮಂಗಳೂರಿನಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಲಿದ್ದಾರೆ.
