Home Mangalorean News Kannada News ಆಶಾ ಕಾರ್ಯಕರ್ತೆಯರಿಗೆ 12 ದಿನ ಕಾಯಲು ಸಚಿವ ಯು.ಟಿ.‌ ಖಾದರ್ ಮನವಿ

ಆಶಾ ಕಾರ್ಯಕರ್ತೆಯರಿಗೆ 12 ದಿನ ಕಾಯಲು ಸಚಿವ ಯು.ಟಿ.‌ ಖಾದರ್ ಮನವಿ

Spread the love

ಆಶಾ ಕಾರ್ಯಕರ್ತೆಯರಿಗೆ 12 ದಿನ ಕಾಯಲು ಸಚಿವ ಯು.ಟಿ.‌ ಖಾದರ್ ಮನವಿ

ಮಂಗಳೂರು: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಹಠ ಬಿಟ್ಟು 12 ದಿನಗಳ ಕಾಲ ತಾಳ್ಮೆಯಿಂದ ಕಾಯುವಂತೆ ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.

ಮುಂಬರುವ ವಿಧಾನಮಂಡಲ ಅಧಿವೇಶನ ಮುಕ್ತಾಯಗೊಳ್ಳುವಷ್ಟರಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಯ ಕುರಿತು ಸರ್ಕಾರದ ವತಿಯಿಂದ ‘ಸಿಹಿ ಸುದ್ದಿ’ ನೀಡುವುದಾಗಿ ಮುಖ್ಯಮಂತ್ರಿಗಳು ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಆಶಾ ಕಾರ್ಯಕರ್ತೆಯರು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಅವರ ಕಷ್ಟ-ಸುಖಗಳು ನಮಗೆ ಚೆನ್ನಾಗಿ ಅರ್ಥವಾ ಗುತ್ತವೆ. ಆದರೆ, ಸರ್ಕಾರ ಸುಳ್ಳು ಭರವಸೆಗಳನ್ನು ನೀಡಲು ಸಾಧ್ಯವಿಲ್ಲ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಮುಂಬರುವ ಅಧಿವೇಶನದ ಅಂತ್ಯದೊಳಗೆ ಖಂಡಿತವಾಗಿಯೂ ಸಿಹಿ ಸುದ್ದಿ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. 12 ದಿನಗಳ ಕಾಲ ಕಾದು, ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ತೊಂದರೆಯಾಗದಂತೆ ಕರ್ತವ್ಯಕ್ಕೆ ಹಾಜರಾಗಿ ಎಂದು ಖಾದರ್ ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದ ವ್ಯಾಪ್ತಿಯಲ್ಲಿ ಬರುತ್ತಾರೆ. ಕೇಂದ್ರವು ಕೇವಲ 2,000 ರೂ. ಹಾಗೂ 1 ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದರೆ, ರಾಜ್ಯ ಸರ್ಕಾರ 5,000 ಸೇರಿಸಿ ಒಟ್ಟು 8,000 ರೂ. ಗೌರವಧನ ನೀಡುತ್ತಿದೆ. ರಾಜ್ಯದಲ್ಲಿ ಬಿಸಿಯೂಟ ಸಿಬ್ಬಂದಿ 4,000ರೂ.ಗಳಿಗೆ ಹಾಗೂ ಅತಿಥಿ ಶಿಕ್ಷಕರು 10-12 ಸಾವಿರ ರೂ.ಗಳಿಗೆ ದುಡಿಯುತ್ತಿದ್ದಾರೆ. ಸರ್ಕಾರ ಎಲ್ಲಾ ವರ್ಗದ ನೌಕರರನ್ನು ಸಮಾನವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅವರು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು.

ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಆಶಾ ಕಾರ್ಯಕರ್ತೆಯರಿಗೆ ಏನೂ ಮಾಡದ ಬಿ.ವೈ. ವಿಜಯೇಂದ್ರ ಅವರು ಈಗ ಟೀಕೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ವಿಜಯೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಎನ್‌ಎಚ್‌ಎಂ ಪೋತ್ಸಾಹಧನ ಹೆಚ್ಚಿಸುವಂತೆ ಒತ್ತಾಯಿಸಲಿ. ಕೇಂದ್ರ ಎಷ್ಟು ಮೊತ್ತ ಹೆಚ್ಚಿಸುತ್ತದೋ ಅಷ್ಟೇ ಮೊತ್ತವನ್ನು ರಾಜ್ಯ ಸರ್ಕಾರವೂ ಮ್ಯಾಚಿಂಗ್ ಗ್ರ್ಯಾಂಟ್ ಆಗಿ ನೀಡಲಿದೆ. ಬೇಕಿದ್ದರೆ ಒಟ್ಟಿಗೆ ದೆಹಲಿಗೆ ನಿಯೋಗ ಹೋಗೋಣ ಬನ್ನಿ ಎಂದು ಸಚಿವ ಖಾದರ್ ಸವಾಲು ಹಾಕಿದರು.

ಮಂಗಳೂರು ಮಹಾನಗರ ಪಾಲಿಕೆಗೆ ಸುಮಾರು 400 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಬೆಂಗ್ರೆ ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಶಂಕುಸ್ಥಾಪನೆಗೆ ಸಿದ್ಧವಾಗಿದೆ. ಮಂಗಳಾ ಕ್ರೀಡಾಂಗ ಣದ ಅಭಿವೃದ್ಧಿಗೆ ಹೆಚ್ಚುವರಿ 20 ಕೋಟಿ ರೂ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

ರಾಜ್ಯದ ಎಲ್ಲಾ ಜನೌಷಧಿ ಕೇಂದ್ರಗಳ ತಪಾಸಣೆ ಪೂರ್ಣಗೊಂಡಿದ್ದು, ವರದಿ ನನ್ನ ಕೈಯಲ್ಲಿದೆ. ದೆಹಲಿಯಿಂದ ಸಕಾಲಕ್ಕೆ ಔಷಧಿ ಪೂರೈಕೆಯಾಗದ ಕಾರಣ, ಅಂಗಡಿ ಮಾಲೀಕರು ಬಾಡಿಗೆ ಮತ್ತು ವಿದ್ಯುತ್ ಬಿಲ್ ಕಟ್ಟಲಾಗದೆ ಸ್ಥಳೀಯ ಕಂಪನಿಗಳಿಂದ ಕಡಿಮೆ ದರಕ್ಕೆ ಔಷಧಿ ಖರೀದಿಸಿ ‘ಜನೌಷಧಿ’ ಫಲಕದ ಅಡಿಯಲ್ಲಿ ಮಾರಾಟ ಮಾಡುತ್ತಿ ದ್ದಾರೆ. ರಾಷ್ಟ್ರಮಟ್ಟದಲ್ಲಿ ಅತಿ ಕಡಿಮೆ ದರ ನಮೂದಿಸಿದವರಿಗೆ ಟೆಂಡರ್ ನೀಡುವುದರಿಂದ ಗುಣಮಟ್ಟವಿಲ್ಲದ ಗೂಡಂಗಡಿ ಮಾದರಿಯ ಫ್ಯಾಕ್ಟರಿಗಳ ಔಷಧಿಗಳು ಪೂರೈಕೆಯಾಗುತ್ತಿವೆ ಎಂದು ಸಚಿವ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ಅಂಗಡಿ ಮಾಲೀಕರು ಸಾಲ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಮಾನವೀಯತೆಯಿಂದ ನಾವು ಇನ್ನೂ ಬೀಗ ಹಾಕಿ ಪ್ರಕರಣ ದಾಖಲಿಸಿಲ್ಲ. ಕೇಂದ್ರ ಆರೋಗ್ಯ ಸಚಿವರು ತಕ್ಷಣವೇ ಈ ಸಮಸ್ಯೆಯನ್ನು ಸರಿಪಡಿಸದಿದ್ದರೆ ರಾಜ್ಯ ಸರ್ಕಾರ ಅನಿವಾರ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ದೆಹಲಿಯಲ್ಲಿ ಬಿಸ್ಲೆರಿ ನೀರಿನ ಮಾದರಿಯಲ್ಲಿ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಂಡಿ ರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ರಾಜ್ಯಾದ್ಯಂತ 112 ವಾಟರ್ ಪ್ಯೂರಿಫಿಕೇಶನ್ ಮತ್ತು ಮಿನರಲ್ ವಾಟರ್ ಘಟಕಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಲಾಗಿದೆ. ಈ ಪೈಕಿ ಲೋಪದೋಷ ಕಂಡುಬಂದ 12 ಫ್ಯಾಕ್ಟರಿಗಳಿಗೆ ಈಗಾಗಲೇ ಬೀಗ ಹಾಕಲಾಗಿದ್ದು, 60 ಘಟಕಗಳ ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಪ್ರಯೋಗಾಲಯದ ವರದಿ ಬಂದ ಬಳಿಕ ಎಷ್ಟೇ ದೊಡ್ಡ ಕಂಪನಿಯಾಗಿದ್ದರೂ ಮುಲಾಜಿಲ್ಲದೆ ಬಂದ್ ಮಾಡುತ್ತೇವೆ. ದೆಹಲಿ ಅಥವಾ ಹೊರರಾಜ್ಯದ ಕಲುಷಿತ ಘಟಕಗಳಿಂದ ಕರ್ನಾಟಕಕ್ಕೆ ನೀರು ಸರಬರಾಜಾಗುತ್ತಿದ್ದರೆ ಅದನ್ನು ರಾಜ್ಯದಲ್ಲಿ ನಿಷೇಧಿಸಲಾಗುವುದು ಎಂದು ಎಚ್ಚರಿಸಿದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version