Home Mangalorean News Kannada News ಈದ್, ಈಸ್ಟರ್ ಹಬ್ಬಗಳಿಗೆ ಸೂಕ್ತ ಭದ್ರತೆ ಒದಗಿಸಲು ಅಲ್ಪಸಂಖ್ಯಾತರ ವೇದಿಕೆಯಿಂದ ಎಸ್ಪಿಯವರಿಗೆ ಮನವಿ

ಈದ್, ಈಸ್ಟರ್ ಹಬ್ಬಗಳಿಗೆ ಸೂಕ್ತ ಭದ್ರತೆ ಒದಗಿಸಲು ಅಲ್ಪಸಂಖ್ಯಾತರ ವೇದಿಕೆಯಿಂದ ಎಸ್ಪಿಯವರಿಗೆ ಮನವಿ

Spread the love

ಈದ್, ಈಸ್ಟರ್ ಹಬ್ಬಗಳಿಗೆ ಸೂಕ್ತ ಭದ್ರತೆ ಒದಗಿಸಲು ಅಲ್ಪಸಂಖ್ಯಾತರ ವೇದಿಕೆಯಿಂದ ಎಸ್ಪಿಯವರಿಗೆ ಮನವಿ

ಉಡುಪಿ: ರಮಝಾನ್ ಈದ್ ಮತ್ತು ಅಲ್ಪಸಂಖ್ಯಾತರ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗಳಿ ಮನವಿ ಸಲ್ಲಿಸಲಾಯಿತು.

ಅಲ್ಪಸಂಖ್ಯಾತ ವರ್ಗಗಳ ಮುಸ್ಲಿಂ ಸಮುದಾಯದ ಒಂದು ತಿಂಗಳ ಕಠಿಣ ಉಪವಾಸದ ನಂತರ ಈದುಲ್ ಫಿತ್ರ ಹಬ್ಬವನ್ನು ಆಚರಿಸುವುದು ತಮಗೆ ತಿಳಿದಿರುವ ವಿಷಯ ಇಡೀ ಪ್ರಪಂಚದಾದ್ಯಂತ ಬಹಳ ವಿಜೃಂಬಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ಈ ಹಬ್ಬಗಳ ವಿಶೇಷತೆ ಸಾಮೂಹಿಕ ವಿಶೇಷ ಪ್ರಾರ್ಥನೆ, ದಾನಧರ್ಮ ಮತ್ತು ಸಾರ್ವಜನಿಕ ಸೌಹಾರ್ಧ ಸಭೆಗಳು.. ಈದ್ ಪ್ರಾರ್ಥನೆಗಾಗಿ ಮಸೀದಿಗಳು ಮತ್ತು ಈದ್ಲಾ ಮೈದಾನಗಳಲ್ಲಿ ಮುಸ್ಲಿಂ ಸಮುದಾಯದ ಬಹುಸಂಖ್ಯೆಯ ಜನರು ಸೇರುತ್ತಾರೆ. ನಂತರ ಸಾರ್ವಜನಿಕ ಭೇಟಿ ಮತ್ತು ನಮುದಾಯ ಕಾರ್ಯಕ್ರಮಗಳು ನಡೆಯುತ್ತವೆ. ಆದ್ದರಿಂದ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ, ಮಸೀದಿಗಳು, ಈದ್ಲಾ ಮೈದಾನಗಳು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪ್ರಮುಖ ಸ್ಥಳಗಳಲ್ಲಿ ಸಮರ್ಪಕ ಪೊಲೀಸ್ ಭದ್ರತೆಯನ್ನು ಒದಗಿಸುವಂತೆ ವಿನಂತಿಸುತ್ತೇವೆ.

ಹಾಗೂ ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟುಮಾಡುವ ಯಾವುದೇ ಸಮಾಜವಿರೋಧಿ ಅಥವಾ ಧಾರ್ಮಿಕ ವೈಷಮ್ಯ ಉಂಟುಮಾಡುವ ವರ ವಿರುದ್ಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸುತ್ತೇವೆ.

ಪೊಲೀಸ್ ಸಿಬ್ಬಂದಿಯ ಪೆಟ್ರೋಲಿಂಗ್, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಹಾಯಕವಾಗುತ್ತದೆ ಹಾಗೂ ಹಬ್ಬಗಳು ಶಾಂತಿಯುತವಾಗಿ ನಡೆಯಲು ನೆರವಾಗುತ್ತದೆ.

ಅಲ್ಪಾಸಂಖ್ಯಾತ ವೇದಿಕೆ ಉಡುಪಿ ಜಿಲ್ಲೆಯಲ್ಲಿ ಶಾಂತಿ, ಏಕತೆ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದೆ. ಹಬ್ಬದ ಅವಧಿಯಲ್ಲಿ ನಮ್ಮ ಸಂಪೂರ್ಣ ಸಹಕಾರ ಮತ್ತು ಸಮನ್ವಯವನ್ನು ಹಾಗೂ ಭಾರತದ ಸಂವಿಧಾನದ ಆರ್ಟಿಕಲ್ 25ರ ಪ್ರಕಾರ ಖಚಿತಪಡಿಸುತ್ತೇವೆ.

ಆದುದರಿಂದ ರಮಝಾನ್ ನ ಈದುಲ್ ಫಿತ್ರ ಹಾಗೂ ಮುಂಬರುವ ಗುಡ್ ಫೈಡೇ, ಈಸ್ಟರ್ ಅಲ್ಪಸಂಖ್ಯಾತ ಸಮುದಾಯಗಳ ಹಬ್ಬಗಳ ಮತ್ತು ಕಾರ್ಯಕ್ರಮಗಳ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಿ. ಸಂಬಂಧಿತ ಪೊಲೀಸ್ ಠಾಣೆಗಳಿಗೆ ಅಗತ್ಯ ಸೂಚನೆ ನೀಡುವಂತೆ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ವೇದಿಕೆ ಅಧ್ಯಕ್ಷರಾದ ಚಾರ್ಲ್ಸ್ ಅಂಬ್ಲರ್, ಲೆಸ್ಲಿ ಮತ್ತು ಲೊಯ್ಸೆಟ್ ಕರ್ನೆಲೀಯೋ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version