Home Mangalorean News Kannada News ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆಗೆ ಅವಕಾಶ: ಇಬ್ಬರು ವಾಹನ ಮಾಲೀಕರಿಗೆ ತಲಾ ₹25 ಸಾವಿರ ದಂಡ...

ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆಗೆ ಅವಕಾಶ: ಇಬ್ಬರು ವಾಹನ ಮಾಲೀಕರಿಗೆ ತಲಾ ₹25 ಸಾವಿರ ದಂಡ ವಿಧಿಸಿ  ನ್ಯಾಯಾಲಯ ಆದೇಶ

Spread the love

ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆಗೆ ಅವಕಾಶ: ಇಬ್ಬರು ವಾಹನ ಮಾಲೀಕರಿಗೆ ತಲಾ ₹25 ಸಾವಿರ ದಂಡ ವಿಧಿಸಿ  ನ್ಯಾಯಾಲಯ ಆದೇಶ

ಬಂಟ್ವಾಳ: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಾಹನ ಮಾಲೀಕರಿಗೆ ತಲಾ ₹25,000 ದಂಡ ವಿಧಿಸಿ  ನ್ಯಾಯಾಲಯ ಆದೇಶಿಸಿದೆ.

ದಿನಾಂಕ 06.04.2026 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ನಲ್ಲಿ KA-19-HT-9694 ಸಂಖ್ಯೆಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿರುವುದು ವಾಹನ ತಪಾಸಣೆ ವೇಳೆ ಪತ್ತೆಯಾಯಿತು. ಇದೇ ರೀತಿ, ದಿನಾಂಕ 28.04.2026 ರಂದು ಬಿಸಿ ರೋಡ್ ಬಳಿ KA-05-KG-6785 ಸಂಖ್ಯೆಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕ ಚಲಾಯಿಸುತ್ತಿರುವುದು ಪೊಲೀಸರು ಪತ್ತೆಹಚ್ಚಿದರು.

ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ವಾಹನ ಮಾಲೀಕರ ವಿರುದ್ಧ ಬಂಟ್ವಾಳ ಸಂಚಾರ ಠಾಣೆ ಪೊಲೀಸರು ಕಲಂ 199(A) ಐಎಂವಿ ಕಾಯ್ದೆಯಡಿ ಮಾನ್ಯ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣಗಳ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ದಿನಾಂಕ 18.05.2026 ರಂದು ಎರಡೂ ವಾಹನಗಳ ಮಾಲೀಕರಿಗೆ ತಲಾ ₹25,000 ದಂಡ ವಿಧಿಸಿ ಆದೇಶಿಸಿದೆ.


Spread the love

Exit mobile version