ಎಂ ಆರ್ ಪಿ ಎಲ್ ಸ್ಪೋಟದ ವೇಳೆ ಶಾಸಕ ಭರತ್ ಶೆಟ್ಟಿ ನೀಡಿರುವ ಬೇಜವಬ್ದಾರಿ ಹೇಳಿಕೆಗೆ ಕ್ಷಮೆ ಯಾಚಿಸಲಿ : ಪ್ರಶಾಂತ್ ಜತ್ತನ್ನ
ಉಡುಪಿ: ಎಂ ಆರ್ ಪಿ ಎಲ್ ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್ಟಿಯು)ನಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಶಾಸಕರಾದ ಡಾ. ಭರತ್ ಶೆಟ್ಟಿಯವರು ನೀಡಿರುವ ಬೇಜವಬ್ದಾರಿ ಹೇಳಿಕೆಗೆ ಸಾರ್ವಜನಿಕರ ಹಾಗೂ ಮೃತ ಮನಿಶ್ ಕರ್ಕಡ ಅವರ ಮನೆಯವರ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಆಗ್ರಹಿಸಿದ್ದಾರೆ.
ಎಂ ಆರ್ ಪಿ ಎಲ್ ನ ಮೂರನೇ ಘಟಕದಲ್ಲಿ ಕಳೆದ ಬುಧವಾರ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್ಟಿಯು)ನಲ್ಲಿ ಭೀಕರವಾದ ಸ್ಪೋಟ ಸಂಭವಿಸಿದ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಲ್ಕಿ ಹಳೆಯಂಗಡಿ ನಿವಾಸಿ ಯುವಕ ಮನೀಶ್ ಕರ್ಕಡ ಮೃತಪಟ್ಟಿದ್ದಾರೆ. ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕರಾದ ಭರತ್ ಶೆಟ್ಟಿಯವರ ಯಾವುದೇ ರೀತಿಯ ಸೂಕ್ತ ಮಾಹಿತಿಯನ್ನು ಪಡೆಯದೇ ತಮಗೆ ತೋಚಿದ ರೀತಿಯಲ್ಲಿ ಘಟನೆಯಲ್ಲಿ ಯಾರಿಗೂ ಕೂಡ ಪ್ರಾಣಹಾನಿ ಸಂಭವಿಸಿಲ್ಲ ಯಾರೂ ಕೂಡ ಗಾಬರಿಯಾಗುವುದು ಬೇಡ ಎಂಬ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಿರುತ್ತಾರೆ. ಘಟನೆಯ ಕುರಿತು ಸೂಕ್ತ ವಿವರಗಳು ತಮ್ಮಲ್ಲಿ ಇಲ್ಲದೆ ಏಕಾ ಏಕಿ ಹೇಳಿಕೆ ನೀಡಿರುವುದು ಮೃತ ಯುವಕನ ಮನೆಯವರಿಗೆ ಸೇರಿದಂತೆ ಆತನ ಅಭಿಮಾನಿ ಬಳಗಕ್ಕೆ ನೋವು ತಂದಿದೆ ಇದಕ್ಕಾಗಿ ಶಾಸಕರು ಕೂಡಲೇ ಕ್ಷಮೆ ಯಾಚಿಸುವುದರೊಂದಿಗೆ ಮುಂದೆ ಇಂತಹ ಹೇಳಿಕೆ ನೀಡುವ ಮೊದಲು ಪೂರ್ವಾಪರ ತಿಳಿದು ಮಾತನಾಡಿದರೆ ಉತ್ತಮ.
ಇದೇ ಸ್ಪೋಟದಲ್ಲಿ ಕಳವಾರು ಸಂತ ಜೋಸೇಫರ ಚರ್ಚ್ ಸೇರಿದಂತೆ ಮೂರು ಗ್ರಾಮಗಳ 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಹಾನಿಯಾಗಿದೆ. ಚರ್ಚಿನ ಹಂಚು, ಕಿಟಕಿ ಗಾಜುಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು ಯಾವುದೇ ರೀತಿಯ ಆದಾಯವಿಲ್ಲದ ಚರ್ಚು ಮತ್ತೆ ದುರಸ್ಥಿ ಮಾಡಲು ಲಕ್ಷಾಂತರ ಹಣ ವ್ಯಯಿಸುವ ಅಗತ್ಯವಿದೆ. ಘಟನೆಯ ಬಳಿಕ ಎಮ್ ಆರ್ ಪಿ ಎಲ್ ಆಡಳಿತವಾಗಲಿ ಸ್ಥಳೀಯ ಶಾಸಕರಾಗಲಿ ಜಿಲ್ಲಾಡಳಿತವಾಗಲಿ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಕೂಡ ನಡೆಸದೆ ಇರುವುದು ಖಂಡನೀ
ಊರಿನ ಅಭಿವೃದ್ದಿಯ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆಗಳಿಗೆ ಅವಕಾಶ ನೀಡಿದ್ದು ಘಟಕಗಳಲ್ಲಿ ಸೂಕ್ತ ಸುರಕ್ಷಾ ವಿಧಾನಗಳನ್ನು ಅಳವಡಿಸಕೊಳ್ಳದಿರುವುದು ಕಂಪೆನಿ ಆಡಳಿತದ ಬೇಜವಾಬ್ದಾರಿಯಾಗಿದ್ದು ಭಾರೀ ಗಾತ್ರದ ಸ್ಪೋಟದಿಂದಾಗಿ ಚರ್ಚಿನ ಕಟ್ಟಡ ಸಂಪೂರ್ಣವಾಗಿ ಹಾನಿಯಾಗಿರುವ ಸಾಧ್ಯತೆ ಇದ್ದು ಕೂಡಲೇ ಚರ್ಚು ಸೇರಿದಂತೆ ಮೂರು ಗ್ರಾಮಗಳ 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಆಗಿರುವ ಹಾನಿಯ ಕುರಿತು ಜಿಲ್ಲಾಧಿಕಾರಿಗಳ ಮೂಲಕ ತನಿಖೆ ನಡೆಸಿ ಎಂಆರ್ಪಿಎಲ್ ಸಂಸ್ಥೆಯಿಂದಲೇ ನಷ್ಟ ಪರಿಹಾರ ಕೊಡಿಸುವಂತೆ ಹಾಗೂ ಮೃತ ಮನಿಶ್ ಕರ್ಕಡ ಅವರ ಮನೆಯವರಿಗೆ ಕೂಡ ಸೂಕ್ತ ಪರಿಹಾರ ನೀಡುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
