Home Mangalorean News Kannada News ಮೂಡುಬಿದಿರೆ : ತಲವಾರು ಹಿಡಿದು ಭಯದ ವಾತಾವರಣ ಸೃಷ್ಟಿಸಿದ ಯುವಕ ಪೊಲೀಸರ ವಶಕ್ಕೆ

ಮೂಡುಬಿದಿರೆ : ತಲವಾರು ಹಿಡಿದು ಭಯದ ವಾತಾವರಣ ಸೃಷ್ಟಿಸಿದ ಯುವಕ ಪೊಲೀಸರ ವಶಕ್ಕೆ

Spread the love

ಮೂಡುಬಿದಿರೆ : ತಲವಾರು ಹಿಡಿದು ಭಯದ ವಾತಾವರಣ ಸೃಷ್ಟಿಸಿದ ಯುವಕ ಪೊಲೀಸರ ವಶಕ್ಕೆ

ಮಂಗಳೂರು :  ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನೊಬ್ಬ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಗೆ ತೆರಳಿದ ಆರೋಪಿ, ಅಲ್ಲಿದ್ದ ಯುವಕರಿಗೆ ತಲ್ವಾರ್ ಬೀಸಿ ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ ಎನ್ನಲಾಗಿದೆ.

ಮೊಬೈಲ್ ನೀಡಲು ನಿರಾಕರಿಸಿದ ವೇಳೆ ತಲ್ವಾರ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪವೂ ಕೇಳಿಬಂದಿದೆ. ಘಟನೆಯಿಂದ ಬಸ್ ನಿಲ್ದಾಣದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾದರು.

 ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೂಕ್ತ  ಮಾಹಿತಿ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಾಗಿದೆ.ಮೇಲ್ನೋಟಕ್ಕೆ ಯುವಕ ಮದ್ಯಪಾನ ಮಾಡಿರುದಾಗಿ ಮಾಹಿತಿ ಲಭ್ಯ ವಾಗಿದೆ


Spread the love

Exit mobile version