Home Mangalorean News Kannada News ಸ್ಫೋಕ್ಗೆ ವಯಸ್ಸಿನ ಮಿತಿ ಇಲ್ಲ: ಕೆಎಂ ಸಿ ಆಸ್ಪತ್ರೆ ತಜ್ಞರ ಎಚ್ಚರಿಕೆ

ಸ್ಫೋಕ್ಗೆ ವಯಸ್ಸಿನ ಮಿತಿ ಇಲ್ಲ: ಕೆಎಂ ಸಿ ಆಸ್ಪತ್ರೆ ತಜ್ಞರ ಎಚ್ಚರಿಕೆ

Spread the love

ಸ್ಫೋಕ್ಗೆ ವಯಸ್ಸಿನ ಮಿತಿ ಇಲ್ಲ: ಕೆ.ಎಂ.ಸಿ ಆಸ್ಪತ್ರೆ ತಜ್ಞರ ಎಚ್ಚರಿಕೆ

ಮಂಗಳೂರು: KMC ಆಸ್ಪತ್ರೆ ಮಂಗಳೂರು, ತನ್ನ ಸಮಗ್ರ ಸ್ಟೋಕ್ ಸಿದ್ಧತಾ ಘಟಕದ ಮೂಲಕ ಯುವ ವಯಸ್ಕರಲ್ಲಿ ಹೆಚ್ಚುತ್ತಿರುವ ಪಾರ್ಶ್ವವಾಯುವಿನ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಇಂಟರ್ವೆನ್ನನಲ್ ನ್ಯೂರೋರೇಡಿಯಾಲಜಿ, ಕ್ರಿಟಿಕಲ್ ಕೇರ್, ತುರ್ತು ವೈದ್ಯಕೀಯ ಹಾಗೂ ಪುನರ್ವಸತಿ ತಜ್ಞರನ್ನು ಒಳಗೊಂಡ ತಂಡವು, ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ಸಾರ್ವಜನಿಕರು ಗುರುತಿಸುವುದು ಮತ್ತು ತಕ್ಷಣ ಚಿಕಿತ್ಸೆ ಪಡೆಯುವ ಮಹತ್ವದ ಕುರಿತು ಜಾಗೃತಿ ಮೂಡಿಸಿದೆ.

KMC ಆಸ್ಪತ್ರೆ ಮಂಗಳೂರಿನ ಸ್ಟೋಕ್ ಆರೈಕೆಯ 30 ಸುವರ್ಣ ವರ್ಷಗಳ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂರು ದಶಕಗಳಲ್ಲಿ ಆಸ್ಪತ್ರೆಯ ತಂಡವು 25,000ಕ್ಕೂ ಹೆಚ್ಚು ಪಾರ್ಶ್ವವಾಯು ಪ್ರಕರಣಗಳಿಗೆ ಚಿಕಿತ್ಸೆ ನೀಡಿದ್ದು, ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಇಂಟರ್ವೆನ್ನನಲ್ ರೇಡಿಯಾಲಜಿ, ಐಸಿಯು, ತುರ್ತು ವೈದ್ಯಕೀಯ ಹಾಗೂ ನ್ಯೂರೋ-ರಿಹ್ಯಾಬಿಲಿಟೇಶನ್ ಸೇವೆಗಳ ಮೂಲಕ 24×7 ಸಮಗ್ರ ಆರೈಕೆ ಒದಗಿಸುತ್ತಿದೆ.

KMC ಆಸ್ಪತ್ರೆ ಮಂಗಳೂರು ಕ್ಲಸ್ಟರ್ ನಿರ್ದೇಶಕ ಶ್ರೀ ಪ್ರಮೋದ್ ಕುಂದರ್ ಮಾತನಾಡಿ, “ಪಾರ್ಶ್ವವಾಯು ಈಗ ವಯಸ್ಸಾದವರಿಗಷ್ಟೇ ಸೀಮಿತವಾಗಿಲ್ಲ. ಯುವ ವಯಸ್ಕರಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ಆರಂಭಿಕ ಲಕ್ಷಣಗಳನ್ನು ಗುರುತಿಸಿ, ಸುವರ್ಣ ಅವಧಿಯಲ್ಲಿ ಸ್ಟೋಕ್ ಸಿದ್ಧತಾ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಂತ ಮುಖ್ಯ,” ಎಂದರು.

ನರವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಕನ್ಸಲ್ವೆಂಟ್ನಾ, ಝಡ್.ಕೆ. ಮಿಸ್ತ್ರಿ ಮಾತನಾಡಿ, “30-50 ವರ್ಷದವರಲ್ಲಿ ಪಾರ್ಶ್ವವಾಯು ಪ್ರಕರಣಗಳ ಏರಿಕೆ ಕಾಣುತ್ತಿದೆ. ಒತ್ತಡ, ಜಡ ಜೀವನಶೈಲಿ ಮತ್ತು ಕಡಿಮೆ ವಯಸ್ಸಿನಲ್ಲೇ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡ ಪ್ರಮುಖ ಕಾರಣಗಳಾಗಿವೆ,” ಎಂದರು.

ನರವಿಜ್ಞಾನ ಕನ್ಸಲ್ವೆಂಟ್ಲಾ. ಶಿವಾನಂದ ಪೈ ಅವರು, “B.E.F.A.S.T. ಸೂಚನೆಗಳನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು. ಸಮತೋಲನ ಕಳೆದುಕೊಳ್ಳುವುದು, ದೃಷ್ಟಿ ಬದಲಾವಣೆ, ಮುಖದ ಒಂದು ಭಾಗ ಬಾಗುವುದು, ಕೈಯಲ್ಲಿ ದೌರ್ಬಲ್ಯ ಮತ್ತು ಮಾತು ತೊದಲುವುದು ಪ್ರಮುಖ ಲಕ್ಷಣಗಳು. ಯಾವುದೇ ಹಠಾತ್ ನರಸಂಬಂಧಿ ಲಕ್ಷಣವನ್ನು ತುರ್ತು ಪರಿಸ್ಥಿತಿಯೆಂದು ಪರಿಗಣಿಸಬೇಕು,” ಎಂದರು.

ಡಾ. ರೋಹಿತ್ ಪೈ, ಕನ್ಸಲೆಂಟ್- ನರವಿಜ್ಞಾನ, “ಇಸ್ಕಿಮಿಕ್ ಸ್ಟೋಕ್ನಲ್ಲಿ 4.5 ಗಂಟೆಗಳೊಳಗೆ ಇಂಟ್ರಾವೀನಸ್ ಥಾಂಬೊಲಿಸಿಸ್ ನೀಡುವುದು ಬಹಳ ಮುಖ್ಯ. ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಜೀವನಶೈಲಿಯನ್ನು ನಿಯಂತ್ರಿಸುವ ಮೂಲಕ ಮರುಪಾರ್ಶ್ವವಾಯುವನ್ನು ತಡೆಯಬಹುದು,’ ಎಂದು ಹೇಳಿದರು.

ಡಾ. ಕೀರ್ತಿರಾಜ್ ಬಿ., ಕನ್ಸಲೆಂಟ್- ಇಂಟರ್ವೆನ್ನನಲ್ ನ್ಯೂರೋರೇಡಿಯಾಲಜಿ, “ಅಗತ್ಯವಿರುವ ಆಯ್ದ ಪ್ರಕರಣಗಳಲ್ಲಿ ಮೆಕ್ಯಾನಿಕಲ್ ಥಾಂಬೆಕ್ಷಮಿ ಮೂಲಕ ರಕ್ತನಾಳದಲ್ಲಿರುವ ದೊಡ್ಡ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಬಹುದು. ಇದರಿಂದ ಕೆಲವು ರೋಗಿಗಳಿಗೆ 24 ಗಂಟೆಗಳವರೆಗಿನ ವಿಸ್ತ್ರತ ಚಿಕಿತ್ಸಾ ಅವಕಾಶ ದೊರೆಯುತ್ತದೆ,’ ಎಂದರು.

ಡಾ. ಮಯೂರ್ ಕಾಮತ್, ಕನ್ಸಲೆಂಟ್ – ನ್ಯೂರೋಸರ್ಜರಿ, “ತೀವ್ರ ಪಾರ್ಶ್ವವಾಯುವಿನಲ್ಲಿ ಮೆದುಳಿನ ಊತ ಅಥವಾ ರಕ್ತಸ್ರಾವ ಉಂಟಾದಾಗ ತ್ವರಿತ ಶಸ್ತ್ರಚಿಕಿತ್ಸಾ ಚಿಕಿತ್ಸೆ ಜೀವ ಉಳಿಸುವಲ್ಲಿ ನಿರ್ಣಾಯಕವಾಗಬಹುದು,” ಎಂದು ತಿಳಿಸಿದರು

ತುರ್ತು ವೈದ್ಯಕೀಯ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಮಾತನಾಡಿ, “ಕುಂದಾಪುರ, ಸುರತ್ಕಲ್ ಪುತ್ತೂರು, ಕಕ್ಕಿಂಜೆ ಮತ್ತು ಚೇರುವತ್ತೂರು ಸೇರಿದಂತೆ ಐದು ತುರ್ತು ಕೇಂದ್ರಗಳು ಪ್ರಾಥಮಿಕ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆರು ಅಡ್ವಾನ್ಸ್ ಲೈಫ್ ಸಪೋರ್ಟ್ ಅಂಬ್ಯುಲೆನ್ಸ್ ಗಳ ಮೂಲಕ ರೋಗಿಗಳಿಗೆ ತ್ವರಿತ ಚಿಕಿತ್ಸೆ ಲಭ್ಯವಾಗುವಂತೆ ಮಾಡಲಾಗಿದೆ,” ಎಂದರು.

ಡಾ. ಜಯೇಶ್ ಕಾಮತ್, ಕನ್ಸಲ್ವೆಂಟ್- ಕ್ರಿಟಿಕಲ್ ಕೇರ್, “ಸ್ಟೋಕ್ ನಂತರ ನ್ಯೂರೋ-ಐಸಿಯು ಮೇಲ್ವಿಚಾರಣೆ ಮೆದುಳಿನ ಊತ ನಿಯಂತ್ರಣ ಹಾಗೂ ದೇಹದ ಪ್ರಮುಖ ಕಾರ್ಯಗಳ ಸ್ಥಿರೀಕರಣ ಅತ್ಯಗತ್ಯ,” ಎಂದರು.

ಫಿಸಿಯೋಥೆರಪಿ ವಿಭಾಗದ ಪ್ರಾಧ್ಯಾಪಕ ಡಾ. ಅಬ್ರಹಾಂ ಜೋಶುವಾ ಮಾತನಾಡಿ, “ರೋಗಿಯ ಸ್ಥಿತಿ ಸ್ಥಿರವಾದ 24-48 ಗಂಟೆಗಳೊಳಗೆ ಸೂಕ್ತ ನ್ಯೂರೋ-ರಿಹ್ಯಾಬಿಲಿಟೇಶನ್ ಆರಂಭಿಸುವುದು ಚೇತರಿಕೆಗೆ ಸಹಕಾರಿ,” ಎಂದರು.

ತಜ್ಞರ ಸಮಿತಿಯಲ್ಲಿ ಡಾ. ಝಡ್. ಕೆ. ಮಿಸ್ತ್ರಿ, ವಿಭಾಗದ ಮುಖ್ಯಸ್ಥರು ಹಾಗೂ ಕನ್ಸಲೆಂಟ್-ನ್ಯೂರಾಲಜಿ; ಡಾ. ಶಿವಾನಂದ ಪೈ, ಕನ್ಸಲೆಂಟ್ – ನ್ಯೂರಾಲಜಿ; ಡಾ. ರೋಹಿತ್ ಪೈ, ಕನ್ಸಲೆಂಟ್ – ನ್ಯೂರಾಲಜಿ; ಡಾ. ಅರ್ಪಿತಾ ಶ್ರೀವಾಸ್ತವ ಕನ್ಸಲೈಂಟ್ – ನ್ಯೂರಾಲಜಿ; ಡಾ. ಮಯೂರ್ ಕಾಮತ್, ಕನ್ಸಲೆಂಟ್ – ನ್ಯೂರೋಸರ್ಜರಿ; ಡಾ. ಕೀರ್ತಿರಾಜ್ ಬಿ-ಕನ್ಸಲೈಂಟ್ – ಇಂಟರ್ವೆನ್ನನಲ್ ನ್ಯೂರೋರೇಡಿಯಾಲಜಿ; ಡಾ. ಜೀಧು ರಾಧಾಕೃಷ್ಣನ್, ಕ್ಲಸ್ಟರ್ ಹೆಡ್ – ಎಮರ್ಜೆನ್ಸಿ ಮೆಡಿಸಿನ್, ಡಾ.ಜಯೇಶ್ ಕಾಮತ್, ಕನ್ಸಲೆಂಟ್- ಐಸಿಯು ಮತ್ತು ಕ್ರಿಟಿಕಲ್ ಕೇರ್; ಹಾಗೂ ಡಾ. ಅಬ್ರಹಾಂ ಜೋಶುವಾ ಪ್ರೊಫೆಸರ್ – ಫಿಸಿಯೋಥೆರಪಿ ವಿಭಾಗ ಅವರು ಒಳಗೊಂಡಿದ್ದರು.

ಕಾರ್ಯಕ್ರಮದ ಬಳಿಕ ಸ್ವಯಂಸೇವಕರಿಗಾಗಿ ಪ್ರಥಮ ಪ್ರತಿಕ್ರಿಯೆದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಪಾರ್ಶ್ವವಾಯುವಿನ ಲಕ್ಷಣಗಳು, ತಪ್ಪು ಕಲ್ಪನೆಗಳು ಮತ್ತು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತ ತರಬೇತಿ ನೀಡಲಾಯಿತು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version