Home Mangalorean News Kannada News ಅ.17ರಂದು ಉಡುಪಿ ಉಚ್ಚಿಲ ದಸರಾ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ...

ಅ.17ರಂದು ಉಡುಪಿ ಉಚ್ಚಿಲ ದಸರಾ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ : ಯಶ್ಪಾಲ್ ಸುವರ್ಣ

Spread the love

ಅ.17ರಂದು ಉಡುಪಿ ಉಚ್ಚಿಲ ದಸರಾ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ : ಯಶ್ಪಾಲ್ ಸುವರ್ಣ

ಉಡುಪಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಉತ್ಸವದ ಅಂಗವಾಗಿ ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ವತಿಯಿಂದ ಅಕ್ಟೋಬರ್ 17 ರಂದು ಚಿತ್ರಕಲಾ ಸ್ಪರ್ಧೆ, ಕಿನ್ನಿ ಪಿಲಿ ಹಾಗೂ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರಕಲಾ ಸ್ಪರ್ಧೆ
ಉಚ್ಚಿಲ ಮೊಗವೀರ ಭವನದಲ್ಲಿ ಬೆಳಿಗ್ಗೆ 9.30 ರಿಂದ 12ರ ವರೆಗೆ “ಉಡುಪಿ ಉಚ್ಚಿಲ ದಸರಾ” ವಿಷಯದ ಕುರಿತು ಸ್ಪರ್ಧೆ ನಡೆಯಲಿದ್ದು, ಕಿರಿಯರ ವಿಭಾಗ (1- 4ನೇ ತರಗತಿ), ಪ್ರಾಥಮಿಕ ವಿಭಾಗ (5-7ನೇ ತರಗತಿ), ಹೈಸ್ಕೂಲ್ ವಿಭಾಗ, ಕಾಲೇಜು ವಿಭಾಗ (ಪಿ.ಯು.ಸಿ. ಮತ್ತು ಡಿಗ್ರಿ) ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ವಿಭಾಗದಲ್ಲಿ ನಗದು ಬಹುಮಾನ ಸಹಿತ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಧಾನಕರ ಬಹುಮಾನ ನೀಡಲಾಗುವುದು. ಸ್ಪರ್ಧಾಳುಗಳಿಗೆ ಡ್ರಾಯಿಂಗ್ ಹಾಳೆಯನ್ನು ಸ್ಥಳದಲ್ಲಿಯೇ ನೀಡಲಾಗುವುದು. ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.

ಕಿನ್ನಿಪಿಲಿ ನಲಿಕೆ
ದಸರಾ ಮುಖ್ಯ ವೇದಿಕೆಯಲ್ಲಿ 12.00 ಗಂಟೆಯಿಂದ ಕಿನ್ನಿಪಿಲಿ ನಲಿಕೆ ಹಾಗೂ ಪೊಣ್ಣು ಪಿಲಿ ನಲಿಕೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕಿನ್ನಿಪಿಲಿ ನಲಿಕೆ (0-2 ವರ್ಷ), (2-4 ವರ್ಷ), (4-6 ವರ್ಷ) (6-8 ವರ್ಷ) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಮಕ್ಕಳು ಬಣ್ಣ ಅಥವಾ ಹುಲಿ ವೇಷದ ಬಟ್ಟೆ ಧರಿಸಿ ಭಾಗವಹಿಸಬಹುದು. ನಗದು ಬಹುಮಾನ ಸಹಿತ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ಪೊಣ್ಣು ಪಿಲಿ ನಲಿಕೆ

ಪೊಣ್ಣು ಪಿಲಿ ನಲಿಕೆ ಗುಂಪು ವಿಭಾಗದ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಚೂಡಿದಾರ್ ಹಾಗೂ ಕೇಸರಿ ಶಾಲು ಉಡುಗೆ ಕಡ್ಡಾಯವಾಗಿದ್ದು, 6 ನಿಮಿಷದ ಕಾಲಾವಕಾಶ, ಹಿನ್ನಲೆ ಸಂಗೀತ ಒದಗಿಸಲಾಗುವುದು.

ಪ್ರಥಮ ರೂ.30 ಸಾವಿರ, ದ್ವಿತೀಯ ರೂ. 20 ಸಾವಿರ, ತೃತೀಯ ರೂ. 15 ಸಾವಿರ ಹಾಗೂ ಸಮಧಾನಕರ ರೂ. 7,500 ನಗದು ಬಹುಮಾನ, ಭಾಗವಹಿಸಿದ ಪ್ರತಿ ತಂಡಗಳಿಗೆ ಪ್ರಮಾಣ ಪತ್ರ ಹಾಗೂ ರೂ.5,000 ನಗದು ನೀಡಿ ಗೌರವಿಸಲಾಗುವುದು.

ವೈಯಕ್ತಿಕ ವಿಭಾಗ ಸ್ಪರ್ಧೆಯಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶವಿದ್ದು ಸೀರೆಯಲ್ಲಿ ಹುಲಿ ಹುಣಿತ ಹಾಗೂ 3 ನಿಮಿಷದ ಕಾಲಾವಕಾಶ. ಭಾಗವಹಿಸಿದ ಪ್ರತಿ ಸ್ಪರ್ಧಿಗೆ ಪ್ರಮಾಣ ಪತ್ರ ನೀಡಲಾಗುವುದು ಹಾಗೂ ವಿಜೇತರಿಗೆ ಪ್ರಥಮ ರೂ. 6 ಸಾವಿರ, ದ್ವಿತೀಯ ರೂ. 4 ಸಾವಿರ, ತೃತೀಯ ರೂ. 3 ಸಾವಿರ, ಸಮಧಾನಕರ ರೂ. 1,500 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಸ್ಪರ್ಧೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7619207778 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version