Home Mangalorean News Kannada News ಸಮಾಧಾನ ಮಹೋತ್ಸವ ಯಶಸ್ವಿ: ಡಾ.ಪ್ರದೀಪ್ ಡಿಮೆಲ್ಲೊ

ಸಮಾಧಾನ ಮಹೋತ್ಸವ ಯಶಸ್ವಿ: ಡಾ.ಪ್ರದೀಪ್ ಡಿಮೆಲ್ಲೊ

Spread the love

ಸಮಾಧಾನ ಮಹೋತ್ಸವ ಯಶಸ್ವಿ: ಡಾ.ಪ್ರದೀಪ್ ಡಿಮೆಲ್ಲೊ

ಉಡುಪಿ: ಫೇಲೋಶಿಫ್ ಆಫ್ ಉಡುಪಿ ಡಿಸ್ಟ್ರಿಕ್ ಚರ್ಚಸ್ ವತಿಯಿಂದ ಉಡುಪಿಯಲ್ಲಿ ಆಯೋಜಿಸಲಾದ ʼಸಮಾಧಾನ ಮಹೋತ್ಸವ’ ಯಾವುದೇ ಅಡಚಣೆ ಇಲ್ಲದೆ ಅಭೂತಪೂರ್ವ ಯಶಸ್ವಿ ಕಂಡಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಡಾ.ಪ್ರದೀಪ್ ಡಿಮೆಲ್ಲೊ ತಿಳಿಸಿದ್ದಾರೆ.

ಇದಕ್ಕೆ ಕಾರಣರಾದ ಎಫ್‌ಯುಡಿಸಿ ತಂಡ, ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ ಜತ್ತನ್ನ ಅವರಿಗೆ ರಾಜ್ಯದ ಸಮಸ್ತ ಕ್ರೈಸ್ತ ಸಮುದಾಯವು ಅಭಿನಂದನೆಗಳನ್ನು ಸಲ್ಲಿಸುತ್ತದೆ. ಇನ್ನು ಮುಂದೆ ಜಿಲ್ಲಾಡಳಿತವು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನಿನ ಚೌಕಟ್ಟಿ ನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಾರದರ್ಶಕ ಹಾಗೂ ನ್ಯಾಯಬದ್ಧ ಆಡಳಿತ ನಡೆಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ವಿರುದ್ಧ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಸಂದರ್ಭದಲ್ಲಿ ಪ್ರಶಾಂತ ಜತ್ತನ್ನ ಸ್ಪಷ್ಟನೆ ನೀಡಿದ್ದರು. ಅದರ ನಂತರ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಕುರಿತು ಸ್ಪಷ್ಟನೆ ಸಿಗದೆ ಇರುವು ದನ್ನು ಮನಗಂಡ ಎಫ್‌ಯುಡಿಸಿ, ಪ್ರಶಾಂತ ಜತ್ತನ್ನ ಹಾಗು ವಕೀಲ ಪ್ರದೀಪ್ ಪಿ.ಜಿ. ನೇತೃತ್ವದಲ್ಲಿ ಹೈಕೋರ್ಟ್‌ ನಿಂದ ಕಾರ್ಯಕ್ರಮಕ್ಕೆ ಅನುಮತಿ ಯನ್ನು ಪಡೆಯವಲ್ಲಿ ಯಶಸ್ವಿಯಾದರು ಎಂದು ಅವರು ತಿಳಿಸಿದರು.


Spread the love

Exit mobile version