ಸೈಬರ್ ವಂಚಕರ ಬಲೆಗೆ ನಿವೃತ್ತ ವ್ಯಕ್ತಿ : ‘ಡಿಜಿಟಲ್ ಅರೆಸ್ಟ್’ ಬಗ್ಗೆ ಪೊಲೀಸ್ ಕಮಿಷನರ್ ಜಾಗೃತಿ
ಮಂಗಳೂರು: ಮಂಗಳೂರಿನಲ್ಲಿ ನಿವೃತ್ತ ವ್ಯಕ್ತಿಯೊಬ್ಬರು ‘ಡಿಜಿಟಲ್ ಅರೆಸ್ಟ್’ ವಂಚನೆಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ‘ಡಿಜಿಟಲ್ ಅರೆಸ್ಟ್’ ಎಂಬ ಯಾವುದೇ ಕಾನೂನು ವ್ಯವಸ್ಥೆ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳ ಕರೆ, ಬೆದರಿಕೆ ಹಾಗೂ ತ್ವರಿತ ಅಥವಾ ಖಚಿತ ಲಾಭದ ಹೂಡಿಕೆ ಆಮಿಷಗಳನ್ನು ನಂಬಬೇಡಿ ಎಂದು ಸೂಚಿಸಲಾಗಿದೆ. ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
