Home Mangalorean News Kannada News ಕಲ್ಸಂಕ ಬಳಿ ರಸ್ತೆ ಅಪಘಾತ: ಕಂಟೈನರ್ ಲಾರಿಯ ಚಕ್ರದಡಿಗೆ ಸಿಲುಕಿ ಯುವಕ ಮೃತ್ಯು

ಕಲ್ಸಂಕ ಬಳಿ ರಸ್ತೆ ಅಪಘಾತ: ಕಂಟೈನರ್ ಲಾರಿಯ ಚಕ್ರದಡಿಗೆ ಸಿಲುಕಿ ಯುವಕ ಮೃತ್ಯು

Spread the love

ಕಲ್ಸಂಕ ಬಳಿ ರಸ್ತೆ ಅಪಘಾತ: ಕಂಟೈನರ್ ಲಾರಿಯ ಚಕ್ರದಡಿಗೆ ಸಿಲುಕಿ ಯುವಕ ಮೃತ್ಯು

ಉಡುಪಿ: ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಸಂಜೆ ಕಲ್ಸಂಕ ಜಂಕ್ಷನ್ ಬಳಿಯ ಪಾಕಶಾಲೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಮೃತರನ್ನು ಮಣಿಪಾಲದ ಅವಿನಾಶ್ (19) ಎಂದು ಗುರುತಿಸಲಾಗಿದೆ.

ಉಡುಪಿಯಿಂದ ಮಣಿಪಾಲ ಕಡೆ ಹೋಗುತ್ತಿದ್ದ ಕಂಟೈನರ್ ಲಾರಿಯು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು ಇದರಿಂದ ನಿಯಂತ್ರಣ ತಪ್ಪಿದ ಅವಿನಾಶ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಇದರ ಪರಿಣಾಮ ಲಾರಿಯ ಚಕ್ರವು ಸವಾರದ ತಲೆಯ ಮೇಲೆ ಹರಿಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಉಡುಪಿ ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version