ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ನಿರ್ದೇಶಕರಾಗಿ ರೋಶನಿ ಒಲಿವರ್ ನೇಮಕ
ಉಡುಪಿ: ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳ ಆಡಳಿತಾತ್ಮಕ ಕಾರ್ಯ ನಿರ್ವಹಣೆಗಾಗಿ ನಿರ್ದೇಶಕರುಗಳನ್ನು ಹಾಗೂ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದ್ದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ನಿರ್ದೇಶಕರಾಗಿ ಸಕ್ರೀಯ ಕಾಂಗ್ರೆಸ್ ಕಾರ್ಯಕರ್ತೆ ರೋಶನಿ ಒಲಿವರ್ ಅವರನ್ನು ನೇಮಕ ಮಾಡಲಾಗಿದೆ.
ಇತರ ಸದಸ್ಯರುಗಳಾಗಿ ಸಂಗಪ್ಪ ಎಸ್ ಹುಬ್ಬರ್ ಬಿಜಾಪುರ, ಮತೀನಾ ಹಾವೇರಿ, ಪ್ರವೀಣ್ ಕುಮಾರ್ ಕೆ ಎನ್ ಕೋಲಾರ, ಡಾ. ಸೌಮ್ಯ ತುಮಕೂರು ಇವರುಗಳನ್ನು ನೇಮಿಸಲಾಗಿದೆ.
