Home Mangalorean News Kannada News ಗೋವಿನ ಹೆಸರಿನಲ್ಲಿ ಸಂಘಪರಿವಾರ ಗೂಂಡಾಗಿರಿ ನಡೆಸುತ್ತಿದೆ: ರಿಯಾಝ್ ಫರಂಗಿಪೇಟೆ

ಗೋವಿನ ಹೆಸರಿನಲ್ಲಿ ಸಂಘಪರಿವಾರ ಗೂಂಡಾಗಿರಿ ನಡೆಸುತ್ತಿದೆ: ರಿಯಾಝ್ ಫರಂಗಿಪೇಟೆ

Spread the love

ಗೋವಿನ ಹೆಸರಿನಲ್ಲಿ ಸಂಘಪರಿವಾರ ಗೂಂಡಾಗಿರಿ,ಕೊಲೆ,ಹಲ್ಲೆಯನ್ನು ನಡೆಸುತ್ತಿದೆ: ರಿಯಾಝ್ ಫರಂಗಿಪೇಟೆ

  • ಮಂಗಳೂರಿನಲ್ಲಿ SDPI ಪ್ರತಿಭಟನೆ: ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ ತೀವ್ರ ವಿರೋಧ

ಮಂಗಳೂರು: ರಾಜ್ಯದಲ್ಲಿನ ಗಲಭೆಕೋರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಸಮಿತಿಗಳ ವತಿಯಿಂದ ಇಂದು ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಗಲಭೆಕೋರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಶಕ್ತಿಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ವೇಳೆ ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳನ್ನು ತಕ್ಷಣ ತಡೆಗಟ್ಟಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ, ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡು ಅದನ್ನು ಸಾಮಾಜಿಕ ಮಾಧ್ಯಮದಿಂದ ಹಿಡಿದು ರಾಷ್ಟ್ರೀಯ ಮಾಧ್ಯಮದವರೆಗೆ ತಮಗೆ ಬೇಕಾದಂತೆ ಚರ್ಚೆ ನಡೆಸಿ ಸುಳ್ಳನ್ನು ಸತ್ಯವೆಂದು ಪ್ರಚಾರ ಪಡಿಸುತ್ತಿದೆ‌. ಇದರ ವಿರುದ್ದ ಯಶಸ್ವಿಯಾಗುವಲ್ಲಿ ಜಾತ್ಯಾತೀತ ಪಕ್ಷಗಳು ವಿಫಲವಾಗಿದೆ. ಇದರಿಂದ ಬಿಜೆಪಿ ದೇಶವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದೆ.

ಗೋ ಸಾಗಾಟಗಾರನ್ನು ತಡೆಯುವ ಸಂಘಪರಿವಾರದ ಕಾರ್ಯಕರ್ತರೊಂದಿಗೆ ಕೆಲವೊಮ್ಮೆ ಪೋಲಿಸ್ ಇಲಾಖೆ ಕೂಡ ಸಾಥ್ ನೀಡುತ್ತದೆ. ಗೋ ಸಾಗಾಟಗಾರನ್ನು ಠಾಣೆಗೆ ಕರೆದೊಯ್ಯುವ ಪೋಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸುತ್ತದೆ. ಆದರೆ ಕಾನೂನು ಕೈಗೆತ್ತಿಕೊಂಡ ಸಂಘಪರಿವಾರದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇವರಿಗೆ ನೈತಿಕ ಪೋಲಿಸ್ ಗಿರಿ ಮಾಡಲು ಅನುಮತಿ ನೀಡಿದವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಗಲಭೆಕೋರರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ, ಚುಣಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 48 ಗಂಟೆಯಲ್ಲಿ ಹಿಜಾಬ್ ವಾಪಸ್,2B ಮೀಸಲಾತಿ ಮರು ಸ್ಥಾಪನೆ, ಸೇರಿದಂತೆ ಹಲವು ಜನಪರ ಭರವಸೆ ನೀಡಿದ್ದು ಶೇಕಡಾ 90% ರಷ್ಟು ಮುಸ್ಲಿಮರ ಮತವನ್ನು ಪಡೆದು ಅಧಿಕಾರಕ್ಕೆ ಬಂದರು. ಯಾವ ಭರವಸೆಯನ್ನೂ ಈಡೇರಿಸಿಲ್ಲ. ಬ್ರಾಹ್ಮಣರ ಜನಿವಾರ ವಿವಾದ ಉಂಟಾದಾಗ ಒಂದು ತಿಂಗಳ ಒಳಗೆ ಹಿಜಾಬ್ ಹಾಗೂ ಜನಿವಾರ ನಿಷೇಧ ವಾಪಸ್ ಪಡೆದು ಬ್ಯಾಲೆನ್ಸ್ ಮಾಡಿದ್ದಾರೆ. ಆದರೆ ಈ ಎಲ್ಲಾ ವಿಷಯಗಳ ಬಗ್ಗೆ ದಾಖಲಾದ ಪ್ರಕರಣವನ್ನು ಸರ್ಕಾರ ವಾಪಸ್ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ ವಾಟಾಲ್ ನಾಗರಾಜ್ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳ ನಾಯಕರ ಕೇಸ್ ವಾಪಸ್ ಪಡೆದದ್ದು ಸ್ವಾಗತಾರ್ಹ. ಆದರೆ ಪ್ರಮೋದ್ ಮುತಾಲಿಕ್, ಚೈತ್ರ ಕುಂದಾಪುರ ಸೇರಿದಂತೆ ಹಲವು ಸಂಘಪರಿವಾರದ ಬಾಡಿಗೆ ದ್ವೇಷ ಭಾಷಣಗಾರರ ಕೇಸ್ ಅನ್ನು ವಾಪಸ್ ಪಡೆದಿರುವುದು ದುರದೃಷ್ಟಕರವಾಗಿದೆ. ಹಾಗೂ ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದ ಟಿಪ್ಪು ಜಯಂತಿ ಹೆಸರಿನಲ್ಲಿ ಅಮಾಯಕರ ವಿರುದ್ಧ ದಾಖಲಾದ ಪ್ರಕರಣ, ಹಿಜಾಬ್, 2ಬಿ ಮೀಸಲಾತಿ, ಒಳ ಮೀಸಲಾತಿ ಪರ ಹೋರಾಟಗಾರರ ಮೇಲಿನ ಪ್ರಕರಣ ಯಾಕೆ ಹಿಂಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಅಶ್ರಫ್ ಅಗ್ನಾಡಿ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಕಾರ್ಯದರ್ಶಿ ನಿಸಾರ್ ವಲವೂರು, ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಸೇರದಂತೆ ಜಿಲ್ಲಾ, ಅಸ್ಸೆಂಬ್ಳಿ ನಾಯಕರು, ವಿಮೆನ್ ಇಂಡಿಯಾ ಮೂವ್ಮೆಂಟ್ ನಾಯಕಿಯರು ಉಪಸ್ಥಿತರಿದ್ದರು. ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
Inline Feedbacks
View all comments
wpDiscuz
0
0
Would love your thoughts, please comment.x
()
x
Exit mobile version