Home Mangalorean News Kannada News ಎಸ್.ಐ.ಆರ್: ಮತದಾರ ಹೆಸರು ’ಮೃತ’ ನಮೂದು ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟನೆ 

ಎಸ್.ಐ.ಆರ್: ಮತದಾರ ಹೆಸರು ’ಮೃತ’ ನಮೂದು ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟನೆ 

Spread the love

ಎಸ್.ಐ.ಆರ್: ಮತದಾರ ಹೆಸರು ’ಮೃತ’ ನಮೂದು ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟನೆ 

ಮಂಗಳೂರು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಭಾಗ ಸಂಖ್ಯೆ – 24 ರ ಮತದಾರರಾಗಿರುವ ಡೊನಾಲ್ಡ್ ಜೋಸೆಫ್ ರೇಗೂ ಅವರ ಹೆಸರನ್ನು ಗಣತಿ ನಮೂನೆಯಲ್ಲಿ ಮೃತ ಎಂದು ನಮೂದಿಸಿ ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುತ್ತಾರೆ ಎಂದು ದಿನ ಪತ್ರಿಕೆಯಲ್ಲಿ ಪ್ರಕಟವಾಗಿರುವ ಘಟನೆಯ ಕುರಿತು ಪರಿಶೀಲನೆಯನ್ನು ನಡೆಸಲಾಗಿರುತ್ತದೆ.

ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಭಾಗ ಸಂಖ್ಯೆ 24 – ವ್ಯಾಪ್ತಿಯಲ್ಲಿನ ಕಟ್ಟದ ಸಂಖ್ಯೆ 2-14-1212/17 ಜೆಸ್ಟಿನ್ ಅಪಾರ್ಟ್ ಮೆಂಟ್ ಫ್ಲಾಟ್ ಸಂಖ್ಯೆ 305, ಬಿಜೈ ನ್ಯೂ ರೋಡ್, ಮಂಗಳೂರು ಇಲ್ಲಿ ಡೊನಾಲ್ಡ್ ಜೋಸೆಫ್ ರೇಗೂ ಅವರು ವ್ಯಾಸ್ತವ್ಯವಿದ್ದು, ಅವರ ಹೆಸರು ಕರಡು ಮತದಾರರ ಪಟ್ಟಿ ಪ್ರಕಟವಾಗುವ ಮೊದಲು ಭಾಗ ಸಂಖ್ಯೆ 23 ರಲ್ಲಿನ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 48 ರಲ್ಲಿ ಹೆಸರು ದಾಖಲಿದ್ದು, ಅವರ ಹೆಸರಿಗೆ ಎನ್ಯುಮರೇಶನ್ ಫಾರ್ಮ್ ಬಂದಿದ್ದು, ನಮೂನೆಯನ್ನು ಭಾಗ ಸಂಖ್ಯೆಯ ಬಿ.ಎಲ್.ಒ ರವರು ವಿತರಣೆಯನ್ನು ಮಾಡಿರುತ್ತಾರೆ.

ಎನ್ಯುಮರೇಶನ್ ಫಾರ್ಮ್ ಅನ್ನು ಮತದಾರರಾಗಿರುವ ಡೊನಾಲ್ಡ್ ಜೋಸೆಫ್ ರೇಗೂ ಇವರು ಭರ್ತಿ ಮಾಡಿಕೊಂಡು, ಬಿ.ಎಲ್.ಒ ರವರಿಗೆ ನೀಡಿದ್ದು, ಎನ್ಯುಮರೇಶನ್ ಫಾರ್ಮ್‍ನಲ್ಲಿ ಮತದಾರರು ಅವರಿಗೆ ಸಂಬಂಧಿಸಿದ 2002 ನೇ ಸಾಲಿನ ಮತದಾರರ ಪಟ್ಟಿಯ ವಿವರವನ್ನು ಮತ್ತು ಅವರ ಸಂಬಂಧಿಯ ವಿವರವನ್ನು ದಾಖಲಿಸಿರುವುದಿಲ್ಲ. ಫಾರ್ಮ್‍ನಲ್ಲಿ ವೈಯಕ್ತಿಕ ಮಾಹಿತಿ ಮಾತ್ರ ದಾಖಲಿಸಿರುತ್ತಾರೆ ಹಾಗೂ ಮತದಾರರು ಅವರ ತಂದೆಯ ಮರಣ ದೃಢಪತ್ರವನ್ನು ಫಾರ್ಮ್‍ನೊಂದಿಗೆ ಲಗತ್ತಿಸಿ ಬಿ.ಎಲ್.ಒ ರವರಿಗೆ ನೀಡಿರುತ್ತಾರೆ. ಬಿ.ಎಲ್.ಒ ರವರು ’ನೊ ಮ್ಯಾಪಿಂಗ್ ಕೇಸ್’ ಎಂದು ಪರಿಗಣಿಸಿ ಸ್ವೀಕರಿಸಿರುತ್ತಾರೆ.

ಎನ್ಯುಮರೇಶನ್ ಫಾರ್ಮ್ ಅನ್ನು ಬಿ.ಎಲ್.ಒ ರವರು ಡಿಜಿಟೈಸೇಶನ್ ಮಾಡುವ ಸಮಯದಲ್ಲಿ ಮತದಾರರು ಫಾರ್ಮ್‍ನೊಂದಿಗೆ ತಂದೆಯ ಮರಣ ದೃಢಪತ್ರವನ್ನು ಲಗತ್ತಿಸಿರುವ ಕಾರಣದಿಂದ ಬಿ.ಎಲ್.ಒ ರವರು ತಪ್ಪಾಗಿ ಮತದಾರರನು ಮೃತ ಎಂದು ದಾಖಲಿಸಿ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಟ್ಟಿರುವುದು ಕಂಡು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯವರು, ಮತಗಟ್ಟೆಗೆ ಸಂಬಂಧಿಸಿದ ಬಿ.ಎಲ್.ಒ ರವರರಿಂದ ಸ್ಪಷ್ಟೀಕರಣ ಪಡೆದಿದ್ದು ಹಾಗೂ ಈ ಕಛೇರಿಯಿಂದಲೂ ಬಿ.ಎಲ್.ಒ.ರವರಿಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಲಾಗಿರುತ್ತದೆ.

ಮತದಾರರಾದ ಡೊನಾಲ್ಡ್ ಜೋಸೆಫ್ ರೇಗೂ ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವುದಾಗಿ ಬಿ.ಎಲ್.ಒ ರವರ ಗಮನಕ್ಕೆ ಬಂದಿರುವ ತಕ್ಷಣ ಆ.29 ರಂದು ಮತದಾರರ ನೋಂದಣಾಧಿಕಾರಿಯವರು ಹಾಗೂ ಬಿ.ಎಲ್.ಒ ರವರು ಖುದ್ದಾಗಿ ಮತದಾರರನ್ನು ಸಂಪರ್ಕಿಸಿ ಬಿ.ಎಲ್.ಒ ಆ್ಯಪ್ ಮುಖಾಂತರ ಖeಜಿ ಓo: S10203ಉ6ಓ2908261200041 ರಂತೆ ನಮೂನೆ 6ರಲ್ಲಿ ಅರ್ಜಿ ಸ್ವೀಕೃತಿ ಮಾಡಿ ಹೊಸ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಈಗಾಗಲೇ ನಿಯಮಾನುಸಾರ ದಾಖಲೆಗಳನ್ನು ಪಡೆದು ಕ್ರಮಕೈಗೊಳ್ಳಲಾಗಿರುತ್ತದೆ.

ಮಂಗಳೂರು ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಭಾಗ ಸಂಖ್ಯೆ – 24 ರಲ್ಲಿ ಮತದಾರರಾಗಿ ಡೊನಾಲ್ಡ್ ಜೋಸೆಫ್ ರೇಗೂ ಅವರ ಹೆಸರು ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version