Home Mangalorean News Kannada News ಗುಡ್ ಫ್ರೈಡೆ ಗೀತೆ ಬರೆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್

ಗುಡ್ ಫ್ರೈಡೆ ಗೀತೆ ಬರೆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್

Spread the love

ಗುಡ್ ಫ್ರೈಡೆ ಗೀತೆ ಬರೆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್

ಕ್ರಿಶ್ಚಿಯನ್ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ದಿನ ಗುಡ್ ಫ್ರೈಡೆ. ಯೇಸು ಕ್ರಿಸ್ತನು ಮಾನವಕುಲದ ಪಾಪಗಳಿಗಾಗಿ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ದಿನವನ್ನು ಕ್ರಿ.ಶ. 33 ಸ್ಮರಿಸಲಾಗುತ್ತದೆ. ಇದು ಈಸ್ಟರ್‌ಗೆ ಮುಂಚಿನ ಶುಕ್ರವಾರದಂದು ಬರುತ್ತದೆ. ಈ ದಿನವನ್ನು ಉಪವಾಸ, ಪ್ರಾರ್ಥನೆ ಮತ್ತು ಚರ್ಚ್ ಸೇವೆಗಳ ಮೂಲಕ ಶೋಕ ದಿನವಾಗಿ ಆಚರಿಸಲಾಗುತ್ತದೆ.

“ಅವರೇನು ಮಾಡುವರೆಂದು ಅವರರಿಯರು, ಇವರನ್ನು ಕ್ಷಮಿಸು” ಎಂದು ಹೇಳುತ್ತಾ ಪ್ರಾಣತ್ಯಾಗ ಮಾಡಿದ ಏಸು ಕ್ರಿಸ್ತನ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್ ಅವರು ಹಾಡು ಬರೆದಿದ್ದಾರೆ. ಇದಕ್ಕೆ ಒಸೆಫಚನ್ ಅವರು ಸಂಗೀತ ನೀಡಿದ್ದು, ಗಾಯಕ ಲಿಯೋ ರೈಸನ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಬೆಂಗಳೂರಿನ ಮೆಗ್ಜೀ ಆಡಿಯೋಸ್‌ನ ಲೂಯಿಸ್ ಮೆನೆಸೆಜ್ ಮತ್ತು ಲಿಜೊ ಜೋಸ್ ಹಾಡಿನ ರೂಪಾಂತರ ಮಾಡಿದರೆ, ಮೆಗ್ಜೀ ಆಡಿಯೋಸ್ ನವರು ರೆಕಾರ್ಡಿಂಗ್ ಮಾಡಿದ್ದಾರೆ. ಇದರ ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ಕಾರ್ಯವನ್ನು ಸಾಯಿ ಪ್ರಕಾಶ್ ಅವರು ನಿರ್ವಹಿಸಿದ್ದಾರೆ.

ಏಸು ಕ್ರಿಸ್ತರು ಶಿಲುಬೆಗೇರಿದ ಸಂದರ್ಭದಲ್ಲಿ ಅವರು ಸಾಕಷ್ಟು ನೋವು, ಕಷ್ಟ ಅನುಭವಿಸಿದರೂ ಮಾನವ ಕುಲವನ್ನು ಪಾಪಗಳಿಂದ ಮುಕ್ತಗೊಳಿಸಲು ಅವರು ಮಾಡಿದ ಪ್ರಾರ್ಥನೆಯನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ.


Spread the love

Exit mobile version