Home Uncategorized ತೇಜಸ್ವಿ ಸೂರ್ಯರಿಂದ ಜನರ ಹಾದಿ ತಪ್ಪಿಸುವ ಆರೋಪ: ಮಮತಾ ಗಟ್ಟಿ

ತೇಜಸ್ವಿ ಸೂರ್ಯರಿಂದ ಜನರ ಹಾದಿ ತಪ್ಪಿಸುವ ಆರೋಪ: ಮಮತಾ ಗಟ್ಟಿ

Spread the love

ತೇಜಸ್ವಿ ಸೂರ್ಯರಿಂದ ಜನರ ಹಾದಿ ತಪ್ಪಿಸುವ ಆರೋಪ: ಮಮತಾ ಗಟ್ಟಿ

ಮಂಗಳೂರು: ತಲಪಾಡಿ ಗ್ರಾಮದ ಕೆ.ಸಿ.ರೋಡ್‌ನ ಮತದಾರರ ಪಟ್ಟಿಯಲ್ಲಿ ಹಿಂದುಗಳ ಮನೆಯಲ್ಲಿ ಐವರು ಮುಸ್ಲಿಮರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಆರೋಪ ರಾಜಕೀಯ ಲಾಭಕ್ಕಾಗಿ ಜನರ ಹಾದಿ ತಪ್ಪಸುವ ಕೃತ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ ಆಕ್ಷೇಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕದ್ರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಐವರು ಮುಸ್ಲಿಮರ ಹೆಸರುಗಳನ್ನು ಪ್ರಸ್ತಾಪಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ರೀತಿಯಲ್ಲಿ ಆರೋಪಿಸಿದ್ದರು. ಈ ಸಂದರ್ಭದಲ್ಲಿ ಸಭಿಕರಿಂದ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದರು. ತಲಪಾಡಿ ಗ್ರಾಮದ ಕೆ.ಸಿ.ರೋಡ್‌ನ ಮನೆ ಸಂಖ್ಯೆ 1/288 ಮತ್ತು 1/288 ಸಿ ಎಂದು ಎರಡು ಪ್ರತ್ಯೇಕ ಮನೆಗಳಾಗಿವೆ. ಗ್ರಾಮ ಪಂಚಾಯಿತಿಯಿಂದಲೂ ಇವುಗಳಿಗೆ ಪ್ರತ್ಯೇಕ ಮನೆ ಸಂಖ್ಯೆಯನ್ನು ನೀಡಲಾಗಿದೆ. ಮುಹಮ್ಮದ್ ನಾಜಿರ್ ಮತ್ತು ಅವರ ಕುಟುಂಬದ ಐವರು ಸದಸ್ಯರು 1/288 ಸಿ ವಿಳಾಸದಲ್ಲಿ ಸುಮಾರು 20 ವರ್ಷಗಳಿಂದ ವಾಸವಾಗಿದ್ದಾರೆ. ಅವರ ಹೆಸರು ಮತದಾರರ ಪಟ್ಟಿಯ ಭಾಗ ಸಂಖ್ಯೆ 186ರಲ್ಲಿ ದಾಖಲಾಗಿವೆ. 2002ರಲ್ಲಿಯೂ ಈ ಐವರು ಮತದಾನ ಮಾಡಿರುವ ದಾಖಲೆಗಳಿವೆ ಎಂದು ಮಮತಾ ಗಟ್ಟಿ ಹೇಳಿದರು.

ಇದೇ ವೇಳೆ ಮನೆ ಸಂಖ್ಯೆ 1/288ರಲ್ಲಿ ಸತ್ಯಮೂರ್ತಿ ಕೆ. ಅವರು ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ಅವರ ಕುಟುಂಬದ ಮೂವರು ಸದಸ್ಯರ ಹೆಸರುಗಳೂ ಅದೇ ಭಾಗ ಸಂಖ್ಯೆಯ ಮತದಾರರ ಪಟ್ಟಿಯಲ್ಲಿವೆ. ಎರಡು ಮನೆಗಳ ವಿಳಾಸಗಳು ಪ್ರತ್ಯೇಕವಾಗಿದ್ದರೂ, ಅವುಗಳನ್ನು ಒಂದೇ ಮನೆ ಎಂದು ಪರಿಗಣಿಸಿ ಗೊಂದಲ ಸೃಷ್ಟಿಸಲಾಗಿದೆ. ಮುಹಮ್ಮದ್ ನಾಜಿರ್ ಅವರ ಕುಟುಂಬದ ಹೆಸರುಗಳನ್ನು ಸತ್ಯಮೂರ್ತಿ ಅವರ ಮನೆಯ ವಿಳಾಸದಲ್ಲಿ ಸೇರಿಸಲಾಗಿದೆ ಎಂಬ ಆರೋಪ ಸರಿಯಲ್ಲ ಎಂದರು.

ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆಯ ಸಂದರ್ಭದಲ್ಲಿ ಈ ವಿಚಾರ ಸ್ಪಷ್ಟವಾಗಿದೆ. ತೇಜಸ್ವಿ ಸೂರ್ಯ ಅವರು ಪ್ರಸ್ತಾಪಿಸಿದ ಐವರ ಹೆಸರು ಅವರು ತೋರಿಸಿದ ದಾಖಲೆಗಳಲ್ಲಿಯೂ ಇಲ್ಲ. ಚುನಾವಣಾ ಆಯೋಗದ ದಾಖಲೆ ಗಳಲ್ಲಿ ಕಂಡುಬಂದಿರುವ ತಾಂತ್ರಿಕ ದೋಷ ಅಥವಾ ಗೊಂದಲವನ್ನು ಆಧರಿಸಿ ಐವರು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಬಿಂಬಿಸುವುದು ಸರಿಯಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭಾಧ್ಯಕ್ಷ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಹೆಸರನ್ನು ಎಳೆದು ತಂದು, ಅವರ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿರುವು ದನ್ನೂ ಮಮತಾ ಗಟ್ಟಿ ಖಂಡಿಸಿದರು.

ತೇಜಸ್ವಿ ಸೂರ್ಯ ಅವರ ಬಳಿ ಯು.ಟಿ. ಖಾದರ್ ಅವರ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ದಾಖಲೆಗಳಿದ್ದರೆ ಅವುಗಳನ್ನು ಬಹಿರಂಗಪಡಿಸಿ, ತನಿಖೆಗೆ ಒತ್ತಾಯಿಸಲಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಬೇಕು ಎಂಬುದು ನಮ್ಮ ನಿಲುವು. ಆದರೆ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಜನಪ್ರತಿನಿಧಿಯೊಬ್ಬರ ಮೇಲೆ ಆರೋಪ ಹೊರಿಸಿ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದು ಜವಾಬ್ದಾರಿಯುತ ನಾಯಕನಿಗೆ ತಕ್ಕುದಲ್ಲ ಎಂದರು.

ಮತದಾರರ ಹಕ್ಕುಗಳ ರಕ್ಷಣೆ ಎಲ್ಲ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಮತದಾರರ ಪಟ್ಟಿಯಲ್ಲಿ ಅರ್ಹರ ಹೆಸರುಗಳು ಬಿಟ್ಟುಹೋಗಿದ್ದರೆ ಅವುಗಳನ್ನು ಸೇರ್ಪಡೆಗೊಳಿಸಲು ಚುನಾವಣಾ ಆಯೋಗದ ಅಧಿಕಾರಿಗಳ ಗಮನಕ್ಕೆ ತರುವುದು ಜನಪ್ರತಿನಿಧಿಗಳ ಕರ್ತವ್ಯ. ಈ ವಿಚಾರದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳಿಂದಲೂ ಉತ್ತರ ಕೇಳಬೇಕೇ ಹೊರತು, ಒಬ್ಬ ವ್ಯಕ್ತಿ ಅಥವಾ ಜನಪ್ರತಿನಿಧಿಯನ್ನು ಗುರಿಯಾಗಿಸಿಕೊಂಡು ರಾಜಕೀಯ ಆರೋಪ ಮಾಡಬಾರದು ಎಂದು ಹೇಳಿದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version