ತೆಂಕನಿಡಿಯೂರು ಬೆಳ್ಕಳೆ ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮ ಸಂಪನ್ನ
ಉಡುಪಿ: ತೆಂಕನಿಡಿಯೂರು ಬೆಳ್ಳಳೆ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಹಾಗೂ ಶ್ರೀ ಮೂಕಾಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮವು ರವಿವಾರ ಸಂಪನ್ನಗೊಂಡಿತು.

ಶನಿವಾರ ರಾತ್ರಿ ಶ್ರೀ ಬಬ್ಬುಸ್ವಾಮಿಯ ನೇಮ, ತನ್ನಿಮಾನಿಗ ದೈವದ ನೇಮ, ರವಿವಾರ ಬೆಳಗ್ಗಿನಿಂದ ಶ್ರೀ ಧೂಮಾವತಿ ಹಾಗೂ ಬಂಟ ದೈವಗಳ ನೇಮ, ಮಧ್ಯಾಹ್ನ ಶ್ರೀ ಚೌಂಡಿ, ರಾಹು ಹಾಗೂ ಮಹಾಗುಳಿಗದ್ವಯರ ನೇಮ, ಸಂಜೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮ ಜರಗಿತು.
ಶನಿವಾರ ಬೆಳಗ್ಗೆ ಗಜಕಂಬ ಸ್ಥಾಪನೆ, ಬಳಿಕ ಶ್ರೀ ಕಂಬಿಗಾರ ಸ್ವಾಮಿಯ ಸಂದರ್ಶನ ಸೇವೆ ನಡೆದಿದ್ದು, ಮಧ್ಯಾಹ್ನ ಚಪ್ಪರ ಆರೋಹಣವಾಗಿ ಅನ್ನಸಂತರ್ಪಣೆ ಜರಗಿತು. ಸಂಜೆ ಬೆಳ್ಳಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ತೀರ್ಥ ಪ್ರಸಾದವನ್ನು ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತಂದು ನೇಮದ ಚಪ್ಪರಕ್ಕೆ ಭಂಡಾರ ತರಲಾಯಿತು. ರಾತ್ರಿ ಶ್ರೀ ಬಬ್ಬುಸ್ವಾಮಿಯ ನೇಮ, ತನ್ನಿಮಾನಿಗ ದೈವದ ನೇಮ ನೆರವೇರಿತು.
ದೈವಸ್ಥಾನದ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬಡಾಮನೆ ಬೆಳ್ಳಳೆ, ಗೌರವಾಧ್ಯಕ್ಷ ಅಜಿತ್ ಸಂಜೀವ ಶೆಟ್ಟಿ ತೆಂಕನಿಡಿಯೂರು, ಆಡಳಿತ ಮೊಕ್ತಸರ ಐತು ಎಂ. ಶೆಟ್ಟಿ ಬೆಳ್ಳಳೆ, ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ
ಕೆಳಾರ್ಕಳಬೆಟ್ಟು ದೀಪಕ್ ಲಕ್ಷ್ಮೀನಗರ, ಕೃಷ್ಣ ಪೂಜಾರಿ ಗರಡಿಮಜಲು, ವೆಂಕಟೇಶ್ ಕುಲಾಲ್ ಲಕ್ಷ್ಮೀನಗರ, ಶರತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚೇತನ್ ಜೆ. ರಾವ್, ಕಾರ್ಯದರ್ಶಿಗಳಾದ ಮಂಜುನಾಥ, ದೀಪಕ್, ಗೌರವ ಸಲಹೆಗಾರರಾಗಿ ಅಣ್ಣಯ್ಯ ಪಾಲನ್, ಸಂದೀಪ್ ಕುಮಾರ್, ಕೋಶಾಧಿಕಾರಿ ಸತೀಶ್, ಹಿರಿಯ ಮಂಜಪ್ಪ ಪಾಲನ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಿ. ಶೆಟ್ಟಿ, ಗುರಿಕಾರ ರಾದ ಪ್ರಕಾಶ್ ಕುಂದರ್, ಸುರೇಶ್, ಬಬ್ಬುಸ್ವಾಮಿ ದೈವಸ್ಥಾನದ ಅರ್ಚಕರಾದ ಕಾಳು ಮೇಸ್ತ್ರಿ ಪ್ರಭಾಕರ, ಮೂಕಾಂಬಿಕಾ ಮತ್ತು ಶ್ರೀ ಅನ್ನೋರ ಸನ್ನಿಧಿಯ ಅರ್ಚಕರಾದ ಗೋಪಾಲ, ಪ್ರದೀಪ್, ಸಂದೀಪ್, ಆಡಳಿತ ಸಮಿತಿ, ಗುರಿಕಾರರು, ಹತ್ತು ಸಮಸ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.