Home Mangalorean News Kannada News ತೋಟಬೆಂಗ್ರೆ ಯುವತಿ ಕಾಣೆ: ಪತ್ತೆಗೆ ಮನವಿ

ತೋಟಬೆಂಗ್ರೆ ಯುವತಿ ಕಾಣೆ: ಪತ್ತೆಗೆ ಮನವಿ

Spread the love

ತೋಟಬೆಂಗ್ರೆ ಯುವತಿ ಕಾಣೆ: ಪತ್ತೆಗೆ ಮನವಿ

ಮಂಗಳೂರು: ತೋಟಬೆಂಗ್ರೆಯಲ್ಲಿ ವಾಸವಿದ್ದ ಪವಿತ್ರ ಖಾರ್ವಿ (25) ಎಂಬವರು ಎಪ್ರಿಲ್ 25 ರಂದು ಕಾಣೆಯಾಗಿರುವ ಬಗ್ಗೆ ಪ್ರಕರಣ ಪಣಂಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪವಿತ್ರ ಖಾರ್ವಿ ಅವರಿಗೆ ಮದುವೆ ನಿಶ್ಚಯವಾಗಿದ್ದು, ಮನೆಯವರು ಕುಂದಾಪುರಕ್ಕೆ ತೆರಳಿ ಮನೆಗೆ ವಾಪಾಸು ಬಂದು ಮಲಗಿದ್ದ ಸಂದರ್ಭದಲ್ಲಿ ಮನೆ ಬಿಟ್ಟು ಹೋಗಿರುತ್ತಾರೆ.

ಕಾಣೆಯಾದವರ ಚಹರೆ: ಎತ್ತರ ಸುಮಾರು 4.5 ಅಡಿ, ಸಾಧಾರಣ ಕಪ್ಪು ಮೈಬಣ್ಣ, ಕಾಣೆಯಾದ ದಿನ ಕಪ್ಪು ಬಣ್ಣದ ಅರ್ಧ ತೋಳಿನ ಟೀ-ಶರ್ಟ್, ಕಂದು ಬಣ್ಣದ ಪ್ಲಾಜಾ ಪ್ಯಾಂಟ್ ಧರಿಸಿದ್ದರು. ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version