Home Mangalorean News Kannada News ಉಚ್ಚಿಲ ದಸರಾ ವೈಭವದ ಶೋಭಾಯಾತ್ರೆ ಸಂಪನ್ನ : ಲಕ್ಷಕ್ಕೂ ಅಧಿಕ ಭಕ್ತರಿಂದ ವೀಕ್ಷಣೆ

ಉಚ್ಚಿಲ ದಸರಾ ವೈಭವದ ಶೋಭಾಯಾತ್ರೆ ಸಂಪನ್ನ : ಲಕ್ಷಕ್ಕೂ ಅಧಿಕ ಭಕ್ತರಿಂದ ವೀಕ್ಷಣೆ

Spread the love

ಉಚ್ಚಿಲ ದಸರಾ ವೈಭವದ ಶೋಭಾಯಾತ್ರೆ ಸಂಪನ್ನ : ಲಕ್ಷಕ್ಕೂ ಅಧಿಕ ಭಕ್ತರಿಂದ ವೀಕ್ಷಣೆ

ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 11 ದಿನಗಳ ಕಾಲ ನಡೆದ ಉಡುಪಿ ಉಚ್ಚಿಲ ದಸರಾ ಮಹೋತ್ಸವವು ವಿಜಯದಶಮಿಯಂದು ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ದಸರಾ ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ಅವರ ಸಾರಥ್ಯದಲ್ಲಿ ಬುಧವಾರ ನಡೆದ ಶೋಭಾಯಾತ್ರೆಯಲ್ಲಿ ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಭಕ್ತಿ, ಸಂಸ್ಕೃತಿ ಮತ್ತು ಕಲಾ ವೈಭವಕ್ಕೆ ಸಾಕ್ಷಿಯಾದರು.

ವಿಜಯದಶಮಿಯಂದು ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಅಪರಾಹ್ನ 3 ಗಂಟೆಗೆ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳಿಗೆ ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಸಂಜೆ 4.50ಕ್ಕೆ ಅಂಬಾರಿಯಲ್ಲಿ ಕ್ಷೇತ್ರದ ತಾಯಿಯ ಪ್ರತಿರೂಪವನ್ನು ಹೊತ್ತು ತಂದ ಆನೆಯ ಪ್ರತಿಕೃತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಮಧ್ಯರಾತ್ರಿಯವರೆಗೂ ಸಾಗಿದ ಮೆರವಣಿಗೆ ಭಕ್ತರ ಗಮನ ಸೆಳೆಯಿತು.

ಶ್ರೀಕ್ಷೇತ್ರ ಉಚ್ಚಿಲದಿಂದ ಆರಂಭವಾದ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಎರ್ಮಾಳು ಮಸೀದಿ ಬಳಿಯ ಡೈವರ್ಷನ್ವರೆಗೆ ತೆರಳಿತು. ಬಳಿಕ ಉಚ್ಚಿಲ–ಮೂಳೂರು ಮಾರ್ಗವಾಗಿ ಕೊಪ್ಪಲಂಗಡಿಯವರೆಗೆ ಮೆರವಣಿಗೆ ಸಾಗಿತು. ಮಾರ್ಗದುದ್ದಕ್ಕೂ ಸಾವಿರಾರು ಭಕ್ತರು ಜಮಾಯಿಸಿ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳ ದರ್ಶನ ಪಡೆದರು.

ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿ 60ಕ್ಕೂ ಅಧಿಕ ವೈವಿಧ್ಯಮಯ ಸ್ತಬ್ಧಚಿತ್ರಗಳು ಹಾಗೂ ಟ್ಯಾಬ್ಲೊಗಳು ಗಮನ ಸೆಳೆದವು. ಧರ್ಮಜಾಗೃತಿ, ಸಾಮಾಜಿಕ ಸಂದೇಶ ಮತ್ತು ಏಕತೆಯನ್ನು ಸಾರುವ ಸ್ತಬ್ಧಚಿತ್ರಗಳೊಂದಿಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಬೆಣ್ಣೆಕುದ್ರು ದೇವಸ್ಥಾನ, ಶ್ರೀ ಮಹಾಲಕ್ಷ್ಮೀ ದೇವಿ, ಮೊಗವೀರ ಸಮಾಜದ ಕುಲಗುರು ಮಾಧವ ಮಂಗಳ ಪೂಜಾರಿ ಹಾಗೂ ಸದಿಯ ಸಾಹುಕಾರರ ಕುರಿತ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮೀನುಗಾರಿಕೆ, ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಶ್ರದ್ಧೆಯನ್ನು ಬಿಂಬಿಸುವ ವಿವಿಧ ಪರಿಕಲ್ಪನೆಗಳು ಜನರ ಮೆಚ್ಚುಗೆಗೆ ಪಾತ್ರವಾದವು.

ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ, ಆಕರ್ಷಕ ವೇಷಭೂಷಣಗಳು, ಕುಣಿತ, ಕಹಳೆ, ಚೆಂಡೆ ಹಾಗೂ ವಾದ್ಯಮೇಳಗಳ ನಾದ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಡಿಜೆ ಸಂಗೀತದೊಂದಿಗೆ ಸಾಗಿದ ಕಲಾತಂಡಗಳು ಪ್ರೇಕ್ಷಕರನ್ನು ಆಕರ್ಷಿಸಿದವು. ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಯೊಂದು ವಿಗ್ರಹದೊಂದಿಗೆ ಕುಣಿತ ಮತ್ತು ಭಜನಾ ತಂಡಗಳು ಸಾಗಿದವು. 100ಕ್ಕೂ ಅಧಿಕ ವಾಹನಗಳು, ಕೊಂಬು ವಾದನ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಶೋಭಾಯಾತ್ರೆಯ ವೈಭವವನ್ನು ಹೆಚ್ಚಿಸಿದವು.

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಎ. ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಗಣ್ಯರಾದ ಆನಂದ ಸಿ. ಕುಂದರ್, ಪ್ರಸಾದ್ ರಾಜ್ ಕಾಂಚನ್, ಶಾಲಿನಿ ಜಿ. ಶಂಕರ್, ಶ್ಯಾಮಿಲಿ ನವೀನ್, ವೇದಪ್ರಕಾಶ್ ಶ್ರೀಯಾನ್, ಗಣೇಶ್ ಕೆ. ಕಾಂಚನ್, ಪದ್ಮಾಕರ್, ಮೋಹನ್ ಬೇಂದ್ರೆ, ಶರಣ್ ಕುಮಾರ್ ಮಟ್ಟು, ರತ್ನಾಕರ ಸಾಲ್ಯಾನ್, ವಿನಯ್ ಕರ್ಕೇರ, ಸತೀಶ್ ಕುಂದರ್, ಸಂಧ್ಯಾ ದೀಪ ಸುನೀಲ್, ವಾಸುದೇವ ಸಾಲ್ಯಾನ್, ಗುಂಡು ಅಮೀನ್, ಶ್ರೀಪತಿ ಭಟ್ ಉಚ್ಚಿಲ, ಬಾಲಕೃಷ್ಣ ಕೋಟ್ಯಾನ್ ಕಾಪು, ಶಿಲ್ಪಾ ಜಿ. ಸುವರ್ಣ, ಮನೋಜ್ ಕಾಂಚನ್, ಕವಿತಾ ಶರತ್, ಸುಗುಣಾ ಕರ್ಕೇರ, ಅನಿಲ್ ಕುಮಾರ್ ಬೊಕ್ಕಪಟ್ಟ, ಶಿವಕುಮಾರ್ ಮೆಂಡನ್, ರವೀಶ್ ಕೊರವಡಿ, ದಿನೇಶ್ ಎರ್ಮಾಳು ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version