Home Mangalorean News Kannada News ಉಡುಪಿ ಅಗ್ನಿ ದುರಂತ: ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ಶೂ ಬಜಾರ್ ಸಿಬ್ಬಂದಿಗೆ ಗೌರವ

ಉಡುಪಿ ಅಗ್ನಿ ದುರಂತ: ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ಶೂ ಬಜಾರ್ ಸಿಬ್ಬಂದಿಗೆ ಗೌರವ

Spread the love

ಉಡುಪಿ ಅಗ್ನಿ ದುರಂತ: ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ಶೂ ಬಜಾರ್ ಸಿಬ್ಬಂದಿಗೆ ಗೌರವ

ಉಡುಪಿ: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಕಟ್ಟಡದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ದುರಂತದ ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ಉಡುಪಿ ಶೂ ಬಜಾರ್ ಸಿಬ್ಬಂದಿ ಅಲ್ತಾಫ್ ಪಡುಬಿದ್ರಿ ಅವರಿಗೆ ಶೂ ಬಜಾರ್ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.

ಅಗ್ನಿ ಶಾಮಕದಳದ ನಿರಂತರ ಪ್ರಯತ್ನದ ಮಧ್ಯೆಯೂ ಬೆಂಕಿ ಹತೋಟಿ ಬಾರದ ಸಂದರ್ಭ ಅಲ್ತಾಫ್ ಕೂಡಲೇ ಯುಪಿಸಿಎಲ್ಗೆ ಕರೆ ಮಾಡಿ ತಕ್ಷಣವೇ ಅಲ್ಲಿನ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಂತೆ ಶ್ರಮಿಸಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಶೂ ಬಜಾರ್ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಕ ಮುನೀರ್ ಕಲ್ಮಾಡಿ, ಶೂ ಬಜಾರ್ನ ಪ್ರಮುಖರಾದ ಶಾಹೀದ್ ಕಾಪು, ಸಂಶುದ್ದೀನ್, ಶಮೀಮ್ ಮೊದಲಾದ ವರು ಉಪಸ್ಥಿತರಿದ್ದರು. ಅಬೂಬಕ್ಕರ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version