Home Mangalorean News Kannada News ಉಡುಪಿ| ಎಸೆಸೆಲ್ಸಿ ಫಲಿತಾಂಶ: ಪ್ರೀತಂ ಪೂಜಾರಿಗೆ 625 ಕ್ಕೆ 625 ಅಂಕ

ಉಡುಪಿ| ಎಸೆಸೆಲ್ಸಿ ಫಲಿತಾಂಶ: ಪ್ರೀತಂ ಪೂಜಾರಿಗೆ 625 ಕ್ಕೆ 625 ಅಂಕ

Spread the love

ಉಡುಪಿ| ಎಸೆಸೆಲ್ಸಿ ಫಲಿತಾಂಶ: ಪ್ರೀತಂ ಪೂಜಾರಿಗೆ 625 ಕ್ಕೆ 625 ಅಂಕ

ಉಡುಪಿ : ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶಂಕರನಾರಾಯಣ, ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರೀತಂ ಪೂಜಾರಿ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.

ಪ್ರೀತಮ್ ಅವರು ಬಿದ್ಕಲ್ಕಟ್ಟೆ ನಿವಾಸಿ ಗಣಪತಿ ಪೂಜಾರಿ-ನಾಗರತ್ನಾ ದಂಪತಿಯ ಇಬ್ಬರ ಮಕ್ಕಳ ಪೈಕಿ ಹಿರಿಯ ಪುತ್ರ. ತಂದೆ ಗಣಪತಿ ಶ್ರೀ ಲಕ್ಷ್ಮೀ ಎಕ್ಸ್ಪ್ರೆಸ್ ಬಸ್ನಲ್ಲಿ ಕಂಡಕ್ಟರ್. ತಾಯಿ ನಾಗರತ್ನಾ ಗೃಹಿಣಿ. ಎಲ್.ಕೆ.ಜಿ.ಯಿಂದಲೂ ಈತ ಮದರ್ ಥೆರೆಸಾ ಸಂಸ್ಥೆಯಲ್ಲಿ ಕಲಿತಿದ್ದ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾಧಕ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ, ಅಂದಿನ ಪಾಠವನ್ನು ಅಂದೇ ಕಣ್ಣುಹಾಯಿಸುತ್ತಿದ್ದೆ. ಪಠ್ಯವನ್ನು ಓದಿ ಮುಗಿಸಲು ತಿಂಗಳ ಗುರಿಯನ್ನು ಇಟ್ಟುಕೊಂಡಿದ್ದೆ. ಪೋಷಕರು ಹಾಗೂ ವಿದ್ಯಾಸಂಸ್ಥೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಧನೆಗೆ ಪ್ರೇರಣೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿಎಸ್ ಓದಿ ಜೆಇ ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯ ಸಂಸ್ಥಾಪಕರಾದ ಶಮಿತಾ ರಾವ್ ಬಲ್ಮಠ, ರೇನಿಟಾ ಲೋಬೋ ಮಾತನಾಡಿ, 28 ವರ್ಷಗಳ ಹಿಂದೆ ಹಳ್ಳಿಯಲ್ಲಿ ಕಟ್ಟಿದ ವಿದ್ಯಾಸಂಸ್ಥೆ ಇದೀಗಾ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಾರ್ಥಕತೆ ಲಭಿಸಿದೆ. ಶಾಲೆಯ ವಿದ್ಯಾರ್ಥಿ ಪ್ರೀತಮ್ ಪೂಜಾರಿ ಸಾಧನೆಯು ಸಂತಸ ತಂದಿದೆ. ಆತ ವಿದ್ಯಾಭ್ಯಾಸ ಹಾಗೂ ಇತರ ಚಟುವಟಿಕೆಯಲ್ಲಿ ಸದಾ ಚುರುಕಾಗಿದ್ದ. 625 ಅಂಕ ಪಡೆಯುವ ನಿರೀಕ್ಷೆಯೂ ನಮಗಿತ್ತು. ಆತನು ಪರಿಶ್ರಮದ ಜೊತೆಗೆ ಗುರುಹಿರಿಯರ ಜೊತೆ ವಿನಮೃತೆ ಹೊಂದಿದ್ದ. ಈ ಬಾರಿ ರಾಜ್ಯಮಟ್ಟದ ಕ್ವಿಜ್ನಲ್ಲಿ ಎರಡನೇ ಸ್ಥಾನಿಯಾಗಿದ್ದ ಎಂದರು.


Spread the love

Exit mobile version