Home Mangalorean News Kannada News ಉಡುಪಿ ಉಚ್ಚಿಲ ದಸರಾ-2026: ಪ್ರೇಕ್ಷಕರಿಗೆ ರಸದೌತಣ ನೀಡಿದ ‘ಪೊಣ್ಣು ಪಿಲಿ ನಲಿಕೆ’ ಪ್ರದರ್ಶನ 

ಉಡುಪಿ ಉಚ್ಚಿಲ ದಸರಾ-2026: ಪ್ರೇಕ್ಷಕರಿಗೆ ರಸದೌತಣ ನೀಡಿದ ‘ಪೊಣ್ಣು ಪಿಲಿ ನಲಿಕೆ’ ಪ್ರದರ್ಶನ 

Spread the love

ಉಡುಪಿ ಉಚ್ಚಿಲ ದಸರಾ-2026: ಪ್ರೇಕ್ಷಕರಿಗೆ ರಸದೌತಣ ನೀಡಿದ ‘ಪೊಣ್ಣು ಪಿಲಿ ನಲಿಕೆ’ ಪ್ರದರ್ಶನ 

ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ-2026 ಮಹೋತ್ಸವದ ಏಳನೇ ದಿನವಾದ ಶನಿವಾರ, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಆಯೋಜಿಸಲಾದ ‘ಪೊಣ್ಣು ಪಿಲಿ ನಲಿಕೆ’ ಸ್ಪರ್ಧೆ ಪ್ರೇಕ್ಷಕರಿಗೆ ರಸದೌತಣ ನೀಡಿತು.

ದಸರಾ ಮುಖ್ಯ ವೇದಿಕೆಯಾದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 300ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿ, ತುಳುನಾಡಿನ ಪ್ರಸಿದ್ಧ ಸಾಂಪ್ರದಾಯಿಕ ಕಲೆಯಾದ ಹುಲಿವೇಷ ಕುಣಿತದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪುರುಷರಿಗೆ ತಾವೇನೂ ಕಡಿಮೆಯಿಲ್ಲ ಎಂಬಂತೆ ಮಹಿಳೆಯರು ಹುಲಿವೇಷದ ವಿವಿಧ ಭಂಗಿಗಳೊಂದಿಗೆ ಗಮನ ಸೆಳೆದರು. ಸಾಂಪ್ರದಾಯಿಕ ಸೀರೆಯುಟ್ಟು ಹುಲಿವೇಷದ ಹೆಜ್ಜೆ ಹಾಕಿದ ಮಹಿಳೆಯರ ಪ್ರದರ್ಶನಕ್ಕೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಹಾಗೂ ಹರ್ಷೋದ್ಗಾರಗಳು ಮೊಳಗಿದವು.

ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರು ಮಹಿಳೆಯರ ಹುಲಿವೇಷದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಅಕ್ಟೋಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಹಿಳಾ ತಂಡಗಳಿಗೆ ಆಹ್ವಾನ ನೀಡಿದರು.

ಬಳಿಕ ಮಾತನಾಡಿದ ಅವರು, ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉಚ್ಚಿಲ ದಸರಾ ಮಹೋತ್ಸವದ ಉದ್ದೇಶ ಮಹತ್ವದ ಫಲಿತಾಂಶ ನೀಡುತ್ತಿದೆ. ಕರಾವಳಿಯಲ್ಲಿ ಉಚ್ಚಿಲ ಕ್ಷೇತ್ರವು ಭಗವದ್ಭಕ್ತರ ಆರಾಧನಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ನಾಡೋಜ ಡಾ. ಜಿ. ಶಂಕರ್ ಅವರ ಪರಿಕಲ್ಪನೆಯಲ್ಲಿ ಅಭಿವೃದ್ಧಿಗೊಂಡಿರುವ ಉಚ್ಚಿಲ ಕ್ಷೇತ್ರ ಇಂದು ದೇಶ-ವಿದೇಶಗಳ ಜನರ ಆಕರ್ಷಣೆಯ ತಾಣವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಉಚ್ಚಿಲ ದಸರಾ ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ಮಾತನಾಡಿ, ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಉಚ್ಚಿಲ ದಸರಾ ಮಹೋತ್ಸವದಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಸೇರಿದಂತೆ ಹಲವು ದಾನಿಗಳು ಮಹೋತ್ಸವಕ್ಕೆ ಸಹಕಾರ ನೀಡುತ್ತಿದ್ದಾರೆ. ಈ ಬಾರಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಶಿಸ್ತುಬದ್ಧವಾಗಿ ದಸರಾ ಆಚರಿಸಲಾಗುತ್ತಿದೆ. ನಿರೀಕ್ಷೆಗೂ ಮೀರಿ ಭಕ್ತರು ಉಚ್ಚಿಲ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆಯುತ್ತಿರುವುದು ದೇವಿಯ ಕೃಪೆಯಾಗಿದೆ. ಇದುವರೆಗೆ ಮಹೋತ್ಸವ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದ್ದು, ಭಕ್ತಾದಿಗಳ ಸಹಕಾರ ಶ್ಲಾಘನೀಯ ಎಂದರು.

ಉಡುಪಿ ಶಾಸಕ ಹಾಗೂ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ ಮಾತನಾಡಿ, ಶ್ರೀ ಮಹಾಲಕ್ಷ್ಮೀ ದೇವಿಯ ಆಶೀರ್ವಾದದಿಂದ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರತಿವರ್ಷ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಭಾಗವಾಗಿರುವುದು ಹೆಮ್ಮೆಯ ಸಂಗತಿ. ಯುವ ಪ್ರತಿಭೆಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುವ ಉದ್ದೇಶದಿಂದ ಬ್ಯಾಂಕ್ ಮಹೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಮುಂದೆಯೂ ಈ ಸಹಕಾರ ಮುಂದುವರಿಯಲಿದೆ ಎಂದು ತಿಳಿಸಿದರು.

ಪೊಣ್ಣು ಪಿಲಿ ನಲಿಕೆ ಸ್ಪರ್ಧೆಯ ಫಲಿತಾಂಶ
ಒಟ್ಟು 14 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಫಲಿತಾಂಶ ಹೀಗಿದೆ:
1. ಪ್ರಥಮ: ದರ್ಪಣಾ ಮಹಿಳಾ ತಂಡ – ₹30,000 ಹಾಗೂ ಪ್ರಶಸ್ತಿ.
2. ದ್ವಿತೀಯ: ಡಿ.ಡಿ. ಗ್ರೂಪ್, ನಿಟ್ಟೂರು – ₹25,000.
3. ತೃತೀಯ: ಕಿಡ್ಸ್ ಟೀಂ, ಮಲ್ಪೆ – ₹15,000.
4. ನಾಲ್ಕನೇ ಸ್ಥಾನ: ಫ್ರೆಂಡ್ಸ್ ಟೀಂ, ಮಲ್ಪೆ – ₹7,500.

ವೈಯಕ್ತಿಕ ಸೀರೆ ವಿಭಾಗದ ಫಲಿತಾಂಶ
1. ಪೂರ್ವಿ ರಾಜೇಶ್, ಮಲ್ಪೆ.
2. ಸೌಮ್ಯಾ ಸುರೇಂದ್ರ, ಸುರತ್ಕಲ್.
3. ರಮ್ಯಾ ರೂಪೇಶ್.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್ ಕುಮಾರ್, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಸಂಘದ ಮುಂಬಯಿ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್, ಮಹಿಳಾ ಮೊಗವೀರ ಸಂಘದ ಅಧ್ಯಕ್ಷೆ ಕವಿತಾ ಶರತ್, ಸನ್ನಿಧಿ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಬ್ಯಾಂಕ್ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ಯುವರಾಜ್ ಮಸ್ಕತ್, ಮಲ್ಪೆ ಟ್ರಾಲ್ ಬೋಟ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಶೇಖರ ಸಾಲ್ಯಾನ್, ಚೇತನ್ ಬೇಂದ್ರೆ, ಮನೋಜ್ ಕಾಂಚನ್, ಶಿಲ್ಪಾ ಸುವರ್ಣ ಹಾಗೂ ತೀರ್ಪುಗಾರರಾದ ಪಡ್ಡಾಂ, ಸುಧಾಕರ ಬೈಲಕೆರೆ ಮತ್ತು ತಣ್ಣೀರುಬಾವಿ ಉಪಸ್ಥಿತರಿದ್ದರು.

ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version