Home Mangalorean News Kannada News ಉಳ್ಳಾಲ| ರಸ್ತೆಯಲ್ಲಿ ಮೀನಿನ ಎಣ್ಣೆ ಸೋರಿಕೆ: ಜಾರಿ ಬಿದ್ದ ದ್ವಿಚಕ್ರ ವಾಹನ ಸವಾರರು; ಕ್ಯಾಂಟರ್ ತಡೆದು...

ಉಳ್ಳಾಲ| ರಸ್ತೆಯಲ್ಲಿ ಮೀನಿನ ಎಣ್ಣೆ ಸೋರಿಕೆ: ಜಾರಿ ಬಿದ್ದ ದ್ವಿಚಕ್ರ ವಾಹನ ಸವಾರರು; ಕ್ಯಾಂಟರ್ ತಡೆದು ಸ್ಥಳೀಯರಿಂದ ಪ್ರತಿಭಟನೆ

Spread the love

ಉಳ್ಳಾಲ| ರಸ್ತೆಯಲ್ಲಿ ಮೀನಿನ ಎಣ್ಣೆ ಸೋರಿಕೆ: ಜಾರಿ ಬಿದ್ದ ದ್ವಿಚಕ್ರ ವಾಹನ ಸವಾರರು; ಕ್ಯಾಂಟರ್ ತಡೆದು ಸ್ಥಳೀಯರಿಂದ ಪ್ರತಿಭಟನೆ

ಉಳ್ಳಾಲ: ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ತಾಂತ್ರಿಕ ದೋಷದಿಂದ ಭಾರೀ ಪ್ರಮಾಣದ ಮೀನಿನ ಎಣ್ಣೆ ಉಳ್ಳಾಲದ ರಸ್ತೆಯಲ್ಲಿ ಸೋರಿಕೆಯಾಗಿ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮೀನಿನ ಕ್ಯಾಂಟರನ್ನ ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ.

ಕೋಟೆಪುರದಲ್ಲಿ ಫಿಶ್ ಮೀಲ್ ಫ್ಯಾಕ್ಟರಿಗಳು ಕಾರ್ಯಾಚರಿಸುತ್ತಿದ್ದು, ಇಂದು ರಾತ್ರಿ ಕೋಟೆಪುರದಿಂದ ಮಂಗಳೂರು ಬಂದರಿಗೆ ಫಿಶ್ ಮೀಲ್ ಆಯಿಲನ್ನು ಹೊತ್ತೊಯ್ಯುತ್ತಿದ್ದ ಕ್ಯಾಂಟರ್‌ನಿಂದ ಅಬ್ಬಕ್ಕ ಸರ್ಕಲ್‌ ನಿಂದ ಉಳ್ಳಾಲ ಬೈಲ್ ವರೆಗೂ ಫಿಶ್ ಆಯಿಲ್ ಸೋರಿಕೆಯಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಜಾರಿ ಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕ್ಯಾಂಟರನ್ನು ಉಳ್ಳಾಲ ಬೈಲಿನಲ್ಲಿ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


Spread the love

Exit mobile version