Home Mangalorean News Kannada News ‘ಕದಳಿ ವಿಶ್ವ ದರ್ಶನ’ ರಾಷ್ಟ್ರಮಟ್ಟದ ಬಾಳೆ ಮೇಳಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಚಾಲನೆ

‘ಕದಳಿ ವಿಶ್ವ ದರ್ಶನ’ ರಾಷ್ಟ್ರಮಟ್ಟದ ಬಾಳೆ ಮೇಳಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಚಾಲನೆ

Spread the love

‘ಕದಳಿ ವಿಶ್ವ ದರ್ಶನ’ ರಾಷ್ಟ್ರಮಟ್ಟದ ಬಾಳೆ ಮೇಳಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಚಾಲನೆ

ಉಡುಪಿ: ಬಾಳೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಸೋದೆ ಶ್ರೀವಾದಿರಾಜ ಮಠದ ಆಶ್ರಯದಲ್ಲಿ ಕೃಷಿಕರಿಗೆ ಮಾಹಿತಿ ನೀಡುವ ನ. 29ರಿಂದ ಡಿ. 1ರವರೆಗೆ ನಡೆಯಲಿರುವ ‘ಕದಳಿ ವಿಶ್ವ ದರ್ಶನ’ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಭಾನುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ದೇಶದ ಐದು ರಾಜ್ಯಗಳಲ್ಲಿ ಪ್ರಮುಖವಾಗಿ ಬಾಳೆ ಬೆಳೆಯುತ್ತಿದ್ದರೂ, ಅದರ ಸಮರ್ಪಕ ಬಳಕೆಯಾಗುತ್ತಿಲ್ಲ ಎಂಬುದು ತಮಗೆ ಇಲ್ಲಿಗೆ ಬಂದ ಮೇಲೆ ಅರ್ಥವಾಗಿದೆ ಎಂದರು. ತಾವೂ ಸಹ ಕೃಷಿಕ ಕುಟುಂಬದಿಂದ ಬಂದಿದ್ದು, ಈಗಲೂ ತಮ್ಮ ತೋಟದಲ್ಲಿ ‘ಜಿ-ಸೆವೆನ್’ (G7) ತಳಿಯ ಬಾಳೆ ಬೆಳೆಯುತ್ತಿದ್ದೇವೆ; ಆದರೆ ಶ್ರದ್ಧೆಯಿಂದ ಬೆಳೆ ಬೆಳೆದರೂ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ವಿಧಾನ ಇನ್ನೂ ನಮ್ಮಂತವರಿಗೆ ಅರ್ಥವಾಗಿಲ್ಲ ಎಂದು ಹೇಳಿದರು. ಇಲ್ಲಿ ಪ್ರದರ್ಶನಕ್ಕಿಟ್ಟಿರುವ 300-400 ಬಾಳೆ ತಳಿಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ನೋಡಿದಾಗ, ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಮಾಡಿಸಿದ ‘ವಿಶ್ವದರ್ಶನ’ದಂತೆಯೇ ಪರಮಪೂಜ್ಯರು ಜನಪ್ರತಿನಿಧಿಗಳಾದ ನಮಗೆ ನಮ್ಮ ಜವಾಬ್ದಾರಿಯ ವಿಶ್ವದರ್ಶನ ಮಾಡಿಸಿದ್ದಾರೆ ಎಂದು ಬಣ್ಣಿಸಿದರು. ಹಿಂದಿನ ಕಾಲದಲ್ಲಿ ಆಹಾರದ ಕೊರತೆಯಿದ್ದಾಗ ಬಾಳೆ ಮತ್ತು ಹಲಸಿನಿಂದ ಬದುಕುವ ಶಕ್ತಿಯನ್ನು ಭಗವಂತ ನೀಡಿದ್ದ ಎಂದು ಸ್ಮರಿಸಿದ ಅವರು, ಉಡುಪಿಯ ಈ ಮಠದ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದೆ ಎಂದರು.

ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರಿಮಂಡಲದಲ್ಲಿ ಕೇಂದ್ರ ಸಚಿವನಾಗಿ ಕೆಲಸ ಮಾಡುತ್ತಿರುವ ಅನುಭವವನ್ನು ಹಂಚಿಕೊಂಡ ಅವರು, ಮೋದಿಯವರ ನಾಯಕತ್ವದಲ್ಲಿ ದೇಶವು ವಿಶ್ವಕ್ಕೆ ಸರಿಸಾಟಿಯಾಗಿ ದಾಪುಗಾಲಿನಲ್ಲಿ ಸಾಗುತ್ತಿದೆ ಎಂದರು. ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಮತ್ತು ಸ್ಪೇಸ್ ಸೆಕ್ಟರ್ಗಳಲ್ಲಿ ಪಿಎಲ್ಐ (PLI) ಸ್ಕೀಮ್ ಹಾಗೂ ಸಬ್ಸಿಡಿಗಳ ಮೂಲಕ ದೊಡ್ಡ ಮಟ್ಟದ ಪ್ರಗತಿ ಸಾಧಿಸಲಾಗುತ್ತಿದೆ. ಅದೇ ರೀತಿ ಕೃಷಿ ವಲಯದಲ್ಲೂ ರಾಸಾಯನಿಕ ಗೊಬ್ಬರಗಳಿಗೆ ಪ್ರತಿವರ್ಷ ಲಕ್ಷಾಂತರ ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ಈ ಸಬ್ಸಿಡಿಗಳು ಎಷ್ಟರ ಮಟ್ಟಿಗೆ ರೈತರ ಬದುಕನ್ನು ಸರಿಪಡಿಸಿವೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಜನಪ್ರತಿನಿಧಿಗಳಾಗಿ ಜನರ ನಿರೀಕ್ಷೆಗೆ ತಕ್ಕಂತೆ ಗುರಿ ಮುಟ್ಟಲು ಇನ್ನೂ ಸಾಧ್ಯವಾಗಿಲ್ಲ ಎಂದ ಅವರು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಗೂ ಕೃಷಿ ವಲಯದ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಲು ಈ ಕಾರ್ಯಕ್ರಮ ತಮಗೆ ಪ್ರೋತ್ಸಾಹ ನೀಡಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ರೈತರು ಪ್ರತಿನಿತ್ಯ ಅರಣ್ಯ ಕಾಯ್ದೆಗಳ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕಾರಿಗಳಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದ ಸಚಿವರು, ವಾದಿರಾಜರು ಕಟ್ಟಿದ 500 ವರ್ಷಗಳ ಹಳೆಯ ದೇವಸ್ಥಾನವನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪುನರುಜ್ಜೀವನಗೊಳಿಸಿ ಲೋಕಾರ್ಪಣೆ ಮಾಡಿರುವ ಸ್ವಾಮೀಜಿಯವರ ಕಾರ್ಯವನ್ನು ಶ್ಲಾಘಿಸಿದರು. ಹಳ್ಳಿಯಲ್ಲಿರುವ ಹಳೆಯ ದೇವಸ್ಥಾನದ ಪುನಶ್ಚೇತನ ಹಾಗೂ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 17 ಎಕರೆ ಪ್ರದೇಶವನ್ನು ಮಠಕ್ಕೆ ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅರಣ್ಯ ಕಾಯ್ದೆಯ ತೊಡಕು ಎದುರಾಗಿದೆ. ಇದು ಸ್ವಾಮೀಜಿಯವರ ಸ್ವಂತಕ್ಕಲ್ಲ, ನಾಡಿಗೆ ಸಮರ್ಪಣೆ ಮಾಡುವ ಉದ್ದೇಶವಾಗಿದೆ ಎಂದ ಕುಮಾರಸ್ವಾಮಿ ಅವರು, “ನಾವು ಯಕಶ್ಚಿತ್ ಮಾನವರು, ನಾನು ಮಾಡುತ್ತೇನೆ ಎಂದರೆ ಅದು ಗರ್ವವಾಗುತ್ತದೆ; ಆದರೆ ಆ ಭಗವಂತ ಕೃಷ್ಣನ ಆಶೀರ್ವಾದದಿಂದ ಈ ಕೆಲಸವನ್ನು ಆತನೇ ನಮ್ಮ ಕೈಯಲ್ಲಿ ಮಾಡಿಸುತ್ತಾನೆ” ಎಂದು ಭರವಸೆ ನೀಡಿದರು.

ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಬಾಳೆ ಮೇಳ ಆಯೋಜನೆ ಉದ್ದೇಶವನ್ನು ವಿವರಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬಾಳೆ ಕೃಷಿಯ ವಿಫುಲ ಅವಕಾಶಗಳು, ಆಧುನಿಕ ತಂತ್ರಜ್ಞಾನ ಹಾಗೂ ಕೃಷಿ ಆಧಾರಿತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು ಮೇಳದ ಪ್ರಮುಖ ಸಂಕಲ್ಪವಾಗಿದೆ. 100ಕ್ಕೂ ಹೆಚ್ಚು ತಳಿಗಳ ಬಾಳೆ ಗೊನೆಗಳ ಪ್ರದರ್ಶನ, 150ಕ್ಕೂ ಹೆಚ್ಚು ತಳಿಗಳ ಸಸಿಗಳ ಮಾರಾಟ, 500ಕ್ಕೂ ಹೆಚ್ಚು ಬಾಳೆ ತಳಿಗಳ ಪರಿಚಯ ಮಾಡುವ ಉದ್ದೇಶದಿಂದ ಬಾಳೆ ಮೇಳವನ್ನು ಆಯೋಜಿಸಲಾಗಿದೆ ಎಂದರು..

ಪಲಿಮಾರು ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ, ಶಾಸಕ ಯಶ್ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್, ಕೃಷಿ ತಜ್ಞ ಶ್ರೀ ಪಡ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version