Home Mangalorean News Kannada News ಪಶ್ಚಿಮ ಬಂಗಾಳ ಅರಾಜಕತೆಗೆ ಮತದಾರರ ತೀರ್ಪಿನಿಂದ ಅಂತ್ಯ ಹಾಡಿದೆ: ವಿ. ಸುನಿಲ್ ಕುಮಾರ್

ಪಶ್ಚಿಮ ಬಂಗಾಳ ಅರಾಜಕತೆಗೆ ಮತದಾರರ ತೀರ್ಪಿನಿಂದ ಅಂತ್ಯ ಹಾಡಿದೆ: ವಿ. ಸುನಿಲ್ ಕುಮಾರ್

Spread the love

ಪಶ್ಚಿಮ ಬಂಗಾಳ ಅರಾಜಕತೆಗೆ ಮತದಾರರ ತೀರ್ಪಿನಿಂದ ಅಂತ್ಯ ಹಾಡಿದೆ: ವಿ. ಸುನಿಲ್ ಕುಮಾರ್

ಕಾರ್ಕಳ: ಪಶ್ಚಿಮ ಬಂಗಾಳವನ್ನು ಸುದೀರ್ಘ ಕಾಲದಿಂದ ಕಾಡುತ್ತಿದ್ದ ಅರಾಜಕತೆಗೆ ಅಲ್ಲಿನ ಮತದಾರರು ಅಂತ್ಯ ಹಾಡಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸು ಇಂದು ನನಸಾಗಿದೆ ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಮತಾಂಧರನ್ನು ಸ್ವಾಗತಿಸಿ ಅವರನ್ನು ಮತಬ್ಯಾಂಕ್ ಆಗಿಸಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರ ನಿರಂತರ ಪ್ರಯತ್ನದಿಂದ ತೃಣಮೂಲ ಕಾಂಗ್ರೆಸ್ನ ಗೂಂಡಾಗಿರಿ ರಾಜಕಾರಣಕ್ಕೆ ಅಂತ್ಯ ಬಂದಿದೆ ಎಂದು ಹೇಳಿದರು.

ಅದೇ ರೀತಿ ಆಸ್ಸಾಂನಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದ್ದು, ಪುದುಚೇರಿಯಲ್ಲಿ ಎನ್ಡಿಎ ಅಭೂತಪೂರ್ವ ಜಯ ಸಾಧಿಸಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕಾರಣವಾದ ಕಾರ್ಯಕರ್ತರ ಅವಿಶ್ರಾಂತ ಪರಿಶ್ರಮಕ್ಕೆ ಅವರು ಅಭಿನಂದನೆ ಸಲ್ಲಿಸಿದರು.


Spread the love

Exit mobile version