Home Mangalorean News Kannada News ಯುವಜನತೆ ಸ್ವ ಉದ್ಯಮದತ್ತ ಗಮನ ಹರಿಸಲಿ : ಕೆ ಜಯಪ್ರಕಾಶ್ ಹೆಗ್ಡೆ

ಯುವಜನತೆ ಸ್ವ ಉದ್ಯಮದತ್ತ ಗಮನ ಹರಿಸಲಿ : ಕೆ ಜಯಪ್ರಕಾಶ್ ಹೆಗ್ಡೆ

Spread the love

ಯುವಜನತೆ ಸ್ವ ಉದ್ಯಮದತ್ತ ಗಮನ ಹರಿಸಲಿ : ಕೆ ಜಯಪ್ರಕಾಶ್ ಹೆಗ್ಡೆ

ಉಡುಪಿ: ಇಂದಿನ ಯುವಜನತೆ ಹೆಚ್ಚು ಹೆಚ್ಚು ಸ್ವ ಉದ್ಯಮದತ್ತ ಗಮನ ಹರಿಸುವುದರೊಂದಿಗೆ ಇತರರ ಬಾಳಿಗೆ ಬೆಳಕಾಗುವ ಕಾರ್ಯ ನಡೆಸಬೇಕು ಎಂದು ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಶುಕ್ರವಾರ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ ಬ್ರಹ್ಮಾವರ ಇವರ ನೇತೃತ್ವದಲ್ಲಿ ಆಯೋಜಿಸಿದ್ದ ಮೂರು ದಿನಗಳ ಉಡುಪಿ ಆಹಾರ ಉದ್ಯಮ ಮೇಳ 2026 ಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ ತನ್ನ ದಶಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿದ್ದು ಶ್ಲಾಘನೀಯ. ಕಲುಷಿತ ಆಹಾರದ ಇಂದಿನ ದಿನಗಳಲ್ಲಿ ಜನರು ಹೆಚ್ಚು ಹೆಚ್ಚು ಶುಚಿ ಹಾಗೂ ರುಚಿಯ ತಿಂಡಿ ತಿನಿಸುಗಳನ್ನು ಬಯಸುತ್ತಾರೆ. ಬಣ್ಣ ಹಾಗೂ ರಾಸಾಯನಿಕ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಕ್ಷಣದಲ್ಲಿ ಲಾಭ ಬಯಸುವ ಬದಲು ಶುಚಿ ಹಾಗೂ ರುಚಿಯ ಖಾದ್ಯ ನೀಡುವ ಕೆಲಸ ನಡೆಯಬೇಕು. ಈ ಮೂಲಕ ತಮ್ಮ ಉದ್ಯಮದ ಜೊತೆಗೆ ಜನರ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕು ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ಉಡುಪಿ ಅನ್ನ ಬ್ರಹ್ಮನ ನಾಡು ಎಂದೇ ಚಿರಪರಿಚಿತವಾಗಿದ್ದು, ಬ್ಯಾಂಕಿಂಗ್, ಶಿಕ್ಷಣ, ಪ್ರವಾಸೋದ್ಯಮದಲ್ಲಿ ಕೂಡ ತನ್ನದೇ ಆದ ಸಾಧನೆ ಮೆರೆದಿದೆ. ಉಡುಪಿಯ ತಿನಿಸುಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದ್ದು ಬೇಕರಿ ಉದ್ಯಮ ಮುಂದಿನ ಪೀಳಿಗೆಗೆ ಕೂಡ ಹಸ್ತಾಂತರ ಮಾಡುವ ಕೆಲಸ ನಡೆಯಬೇಕು. ಇಂದಿನ ಯುವಜನತೆ ಶಿಕ್ಷಣದ ಬಳಿಕ ವಲಸೆ ಹೋಗುವುದನ್ನು ಬಿಟ್ಟು ಹುಟ್ಟಿದ ಊರಿನಲ್ಲಿಯೇ ಸ್ವ ಉದ್ಯಮ ಮಾಡುವುದರೊಂದಿಗೆ ಹೆತ್ತವರೊಂದಿಗೆ ಸಂತೋಷದಿಂದ ಬದುಕುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಪ್ರಸಾದ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಸಂಪತ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ಆಲ್ವಿನ್ ಬೇಕರಿ ಮುಖ್ಯಸ್ಥರಾದ ವಾಲ್ಟರ್ ಜೋಸೆಫ್ ಸಲ್ಡಾನ ರಿಗೆ ಆಹಾರೋದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ದಶಮಾನೋತ್ಸವ ಸಮಿತಿ ಅಧ್ಯಕ್ಷರಾದ ಹೆರಾಲ್ಡ್ ಡಿಸೋಜಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾಯಿರಾಧ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಮನೋಹರ ಶೆಟ್ಟಿ, ದಕ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ, ಯುನಾಯ್ಟೆಡ್ ಟೊಯೆಟೊ ಮಂಗಳೂರು ಇದರೆ ಸೋನಿಯಾ ಎಂ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾದ ವಸಂತ ಕಿಣಿ, ಬ್ರಹ್ಮಾವರ ಚರ್ಚಿನ ಧರ್ಮಗುರು ವಂ. ಜಾನ್ ಫೆರ್ನಾಂಡಿಸ್, ಉಪ್ಪಿನಕೋಟೆ ಮಸೀದಿಯ ಮುಫ್ತಿ ಮೊಹಮ್ಮದ್ ಸುಹೈಲ್, ಮುಖಡರಾದ ನಟರಾಜ್ ಪ್ರಭು, ಸಂತೋಷ ವಾಗ್ಲೆ, ರಾಜೀವ್ ಕೋಟ್ಯಾನ್, ಸೀಮಾ ಹೆಚ್, ಬಿಜು ಜಿ ನಾಯರ್, ರಾಜೇಶ್ ಶೆಟ್ಟಿ ಬಿರ್ತಿ, ಬೆಳ್ಳೇ ಶಿವಾಜಿ ಎಸ್ ಸುವರ್ಣ, ವಿನಯ್ ಕುಮಾರ್ ಕಬ್ಯಾಡಿ, ಕೇಶವ ಕುಂದರ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಗೋಕುಲ್ ದಾಸ್ ನಾಯಕ್, ಮಹೇಶ್ ಪಿ ಎಸ್, ಸುಗ್ಗಿ ಸುಧಾಕರ ಶೆಟ್ಟಿ, ಬಿ ಎನ್ ಶಂಕರ ಪೂಜಾರಿ, ಎಚ್ ಸುದರ್ಶನ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕರಾದ ಶ್ರೀಧರ್ ಪಿ ಎಸ್. ಸಂಘಟಕರಾದ ವಿಶ್ವನಾಥ ಕುಲಾಲ್, ಸತ್ಯಪ್ರಸಾದ್ ಶೆಣೈ, ಶಶಿಕಾಂತ್ ಜಿ ನಾಯಕ್, ಗಣಪತಿ ಮರಕಾಲ, ಕೃಷ್ಣ ಪೂಜಾರಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಕೂಡ ಉಪಸ್ಥಿತರಿದ್ದರು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version