Home Mangalorean News Kannada News ಕಳಪೆ ಮಟ್ಟದ ಹುಳಯಿರುವ ಅಕ್ಕಿಯನ್ನು ಜನರಿಗೆ ನೀಡದಂತೆ ಮಾಜಿ ಶಾಸಕ ಲೋಬೊ ಸಲಹೆ

ಕಳಪೆ ಮಟ್ಟದ ಹುಳಯಿರುವ ಅಕ್ಕಿಯನ್ನು ಜನರಿಗೆ ನೀಡದಂತೆ ಮಾಜಿ ಶಾಸಕ ಲೋಬೊ ಸಲಹೆ

Spread the love

ಕಳಪೆ ಮಟ್ಟದ ಹುಳಯಿರುವ ಅಕ್ಕಿಯನ್ನು ಜನರಿಗೆ ನೀಡದಂತೆ ಮಾಜಿ ಶಾಸಕ ಲೋಬೊ ಸಲಹೆ

ಮಾಜಿ ಶಾಸಕರಾದ ಜೆ.ಆರ್.ಲೋಬೊ ರವರು ಇಂದು ಜನರಿಂದ ಮಾಹಿತಿ ಪಡೆದುಕೊಂಡು ನಗರದ ಶಕ್ತಿನಗರದಲ್ಲಿರುವ   ಗೋದಾಮಿಗೆ ಭೇಟಿ ನೀಡಿ ಅಲ್ಲಿ ದಾಸ್ತಾನಿರುವ ಸುಮಾರು 130 ಕ್ವಿಂಟಾಲ್ ತೀರಾ ಕಳಪೆ ಮಟ್ಟದ ಹುಳು ಇರುವ ಅಕ್ಕಿಯನ್ನು ಪರೀಕ್ಷಿಸಿದರು.

ತಕ್ಷಣ ಅವರು ಆಹಾರ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ರವರಿಗೆ ಪೋನ್ ಮೂಲಕ ಮಾತನಾಡಿ , ಈ ಹುಳ ಇರುವ ಅಕ್ಕಿಯನ್ನು ಯಾವ ಕಾರಣಕ್ಕೂ ಜನರಿಗೆ ವಿತರಣೆ ಮಾಡಕೂಡದು. ಅದಲ್ಲದೇ ತತ್ಕ್ಷಣದಿಂದಲೇ ಗೋದಾಮಿನಿಂದ ಅದನ್ನು ವರ್ಗಾಹಿಸಬೇಕು. ಇಲ್ಲದಿದ್ದರೆ ಅದು ಅಲ್ಲಿರುವ ಬಾಕಿ ಒಳ್ಳೆಯ ಅಕ್ಕಿಗೆ ಆ ಹುಳವು ಸರಿಸುವ ಸಾದ್ಯತೆ ಇದೆ ಎಂದು ಸಲಹೆಯನ್ನು ನೀಡಿದರು. ಇದಕ್ಕೆ ಸ್ಪಂದಿಸಿದ ಉಪ ನಿರ್ದೇಶಕರು ಕೂಡಲೇ ಹುಳವಿರುವ ಅಕ್ಕಿಯನ್ನು ಬೇರೆಡೆಗೆ ವರ್ಗಾಹಿಸುತ್ತೇನೆ ಎಂದು ತಿಳಿಸಿದರು.


Spread the love

Exit mobile version