Home Mangalorean News Kannada News ದೆಹಲಿಯಲ್ಲಿ ಕೆಂಪೇಗೌಡ, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ

ದೆಹಲಿಯಲ್ಲಿ ಕೆಂಪೇಗೌಡ, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ

Spread the love

ದೆಹಲಿಯಲ್ಲಿ ಕೆಂಪೇಗೌಡ, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ

ದೆಹಲಿ: ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜುಲೈ 29ರಂದು ಆಯೋಜಿಸಿದ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಬೆಂಗಳೂರು ಹಾಗೂ ನಾಡಪ್ರಭು ಕೆಂಪೇಗೌಡ ಫೌಂಡೇಶನ್ ಜೊತೆಗೂಡಿ ನಾಡಪ್ರಭು ಕೆಂಪೇಗೌಡ, ದಾಸಶ್ರೇಷ್ಠ ಕನಕದಾಸರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಸಾಂಸ್ಕøತಿಕ ಉತ್ಸವವು ನಡೆಯಿತು. ಈ ಕಾರ್ಯಕ್ರಮವನ್ನು ಕರ್‍ಕರ್‍ಡೂಮ್ ಕೋರ್ಟಿನಹಿರಿಯ ನ್ಯಾಯಾಧೀಶರಾದ ಎ.ಎಸ್. ಜಯಚಂದ್ರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನವೀನ್ ಲಕ್ಷ್ಮಣ್ ಐ.ಎ.ಎಸ್. ಅಧಿಕಾರಿಗಳು, ದೆಹಲಿ ಜಲಬೋರ್ಡ್‍ನ ಹಣಕಾಸಿನ ನಿರ್ದೇಶಕರು, ಡಾ. ಎಸ್.ಎಂ.ಕಂಟೀಕರ್, ಗ್ರಾಹಕರ ವ್ಯಾಜ್ಯ ಪರಿಹಾರ ನವದೆಹಲಿ, ಬಿ.ಎಲ್. ಸುರೇಶ್, ಡಿ.ಸಿ.ಪಿ., ನವದೆಹಲಿ, ಬಲವಂತರಾವ್ ಪಾಟೀಲ್, ಜಂಟೀ ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು, ಡಾ.ತ್ಯಾಗರಾಜ್ ವಾಷಿಂಗ್ಟನ್, ಡಿ.ಸಿ. ಅಮೇರಿಕ, ಡಾ.ಎಂ.ಎಸ್. ಶಶಿಕುಮಾರ್, ವಿಜ್ಞಾನಿಗಳು, ಭಾರತ ಸರ್ಕಾರ ಹಾಗೂ ಬಿ.ಕೆ.ಬಸವರಾಜು, ಅಧ್ಯಕ್ಷರು, ಗಂಡುಗಲಿ ಮದಕರಿ ನಾಯಕ ಅಸೋಸಿಯೇಶನ್ ಸಮಾರಂಭದ ಅಧ್ಯಕ್ಷತೆಯನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆಯವರು ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ, ವೆಂಕಿ ಸ್ಕೂಲ್ ಆಫ್ ಡಾನ್ಸ್‍ನ ಅಧ್ಯಕ್ಷರಾದ ವೆಂಕಟಾದ್ರಿಅವರು ಉಪಸ್ಥಿತಿಯಲ್ಲಿ ಈ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿದ ಈ ಕೆಳಗಿನ ಕಲಾ ತಂಡಗಳು ಪ್ರದರ್ಶನವನ್ನು ನೀಡಿದವು.

ಕು. ಸಂಜೀವಿನಿ ಬೆಂಗಳೂರು-ಪ್ರಾರ್ಥನಾ ನೃತ್ಯ, ವೆಂಕಿ ಸ್ಕೂಲ್ ಆಫ್‍ಡಾನ್ಸ್-ಜಾನಪದ ನೃತ್ಯ, ಭರತ್ ಮತ್ತು ತಂಡದಿಂದ-ಕಂಟೆಂಪರರಿ ನೃತ್ಯ, ವೈಷ್ಣವಿ ಮತ್ತು ತಂಡದಿಂದ-ಭರತನಾಟ್ಯ, ಭೂಮಿಕಾ ನೃತ್ಯ ಹಾಗೂ ಸಂಗೀತ ಶಾಲೆ-ಸಮೂಹ ನೃತ್ಯ, ಭಾಗ್ಯ ಮತ್ತು ತಂಡದಿಂದ-ಶಾಸ್ತ್ರೀಯ ನೃತ್ಯ, ನೃತ್ಯಾಂಜಲಿ ನಾಟ್ಯ ಕಲಾ ಅಕಾಡೆಮಿ-ಜಾನಪದ ನೃತ್ಯ, ಲಲಿತ್ ಎಂ.ಪಿ. ಭರಧ್ವಾಜ್, ಬೆಂಗಳೂರು-ಭರತನಾಟ್ಯ, ಮೊನೀಶ ಸಾಂಸ್ಕøತಿಕ ಕಲಾ ಅಕಾಡೆಮಿ ಹೊಸಕೋಟೆ-ಸಮೂಹ ನೃತ್ಯ, ರೂಪ ಮತ್ತುತಂಡ, ಕೋಲಾರ-ನೃತ್ಯರೂಪಕ, ಗಾನಗಂಧರ್ವ, ನವದೆಹಲಿ-ಸುಗಮ ಸಂಗೀತ, ಕು.ಸಪ್ನಾಅತ್ತಾವರ, ನವದೆಹಲಿ-ಶಾಸ್ತ್ರೀಯ ನೃತ್ಯ, ಕು.ಪ್ರೇರಣಾ ರಾವ್, ನವದೆಹಲಿ-ಕಥಕ್ ನೃತ್ಯ, ಕು.ರಚನಾಜೆ,- ಭರತನಾಟ್ಯ, ಕು. ಹಿತಶ್ರೀ ರಾಘವೇಂದ್ರ, ಗುರ್‍ಗಾಂವ್- ನೃತ್ಯರೂಪಕ, ಕು.ನವನೀತ ರಾಜೇಶ್, ಗುರ್‍ಗಾಂವ್-ಶಾಸ್ತ್ರೀಯ ನೃತ್ಯ, ಕು.ಅಕ್ಷತಾ ಎ. ಕಲ್ಲೂರು-ಭರತನಾಟ್ಯ

ಈ ಎಲ್ಲಾ ತಂಡಗಳು ಸಾಂಸ್ಕøತಿಕ ಉತ್ಸವವನ್ನು ಸುಂದರವಾಗಿ ಮೂಡಿ ಬರಲು ಕಾರಣವಾದವು. ಕಾರ್ಯಕ್ರಮಕ್ಕೆ ತುಂಬಿದ ಸಭಾಂಗಣದಲ್ಲಿ ದೆಹಲಿಯ ಕನ್ನಡಿಗರು ಆನಂದಿಸಿದರು. ಈ ರಾಷ್ಟ್ರೀಯ ಉತ್ಸವಕ್ಕೆ ಕಾರಣರಾದ ಪುಪ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ.ಆರ್.ಪುರಂ, ಬೆಂಗಳೂರಿನ ಕಾರ್ಯದರ್ಶಿಗಳಾದ ವಿದ್ವಾನ್ ಕೋಲಾರ ರಮೇಶ್ ಇವರಿಗೆ ಎಲ್ಲಾ ಅತಿಥಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟೀ ನಿರ್ದೇಶಕರು ಇವರನ್ನು ಅಭಿನಂದಿಸಿದರು.


Spread the love

Exit mobile version