ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಹಿಳೆಯರಿಗೆ ಮೆಹಂದಿ ಸ್ಪರ್ಧೆ
ಮಂಗಳೂರು : ಕೊರೋನ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವಂತಹ ಮೆಹೆಂದಿ ಬಿಡಿಸುವ ಮಹಿಳಾ ಕಲಾವಿದರಿಗೆ ಮೆಹೆಂದಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೆಹೆಂದಿಯನ್ನು ಸ್ಫುಟವಾಗಿ ಬಿಡಿಸಿ ಮತ್ತು ಬಿಡಿಸಿದ ಹಸ್ತದ ಜೊತೆಯಲ್ಲಿ ಒಂದೇ ಮೆಹೆಂದಿ ಬಿಡಿಸಿದ ಚಿತ್ರದ ಛಾಯಚಿತ್ರಗಳನ್ನು 3 ವಿಧದ ಭಂಗಿಯಲ್ಲಿ ಕಳುಹಿಸತಕ್ಕದ್ದು ಮತ್ತು ಮೆಹೆಂದಿ ಬಿಡಿಸಿದ ಹಸ್ತದ ಚಿತ್ರದೊಂದಿಗೆ ಒಂದು ಹಾಳೆಯಲ್ಲಿ ತಮ್ಮ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು, ಆಧಾರ್ ಕಾರ್ಡ್‍ನ್ನು ಸ್ಪಷ್ಟವಾಗಿ ಭಾವಚಿತ್ರ ಕಾಣಿಸುವಂತೆ ಜೂನ್ 10ರೊಳಗೆ ನೇರವಾಗಿ ಅಕಾಡೆಮಿಯ ವಾಟ್ಸಪ್ ನಂಬ್ರ 7483946578 ಗೆ ಕಳುಹಿಸಬೇಕು.
ನಿಯಮಗಳು :- ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಅತ್ಯಾಕರ್ಷಕ ವಿನ್ಯಾಸ (ಭಾರತೀಯ ಶೈಲಿಯದ್ದಾಗಿರಬೇಕು), ಸ್ಫರ್ಧೆಯ ವಿಜೇತರಿಗೆ ಪ್ರಥಮ ರೂ. 5000/- ದ್ವಿತೀಯ ರೂ. 3000/- ತೃತೀಯ ರೂ.2000/- ಮತ್ತು 5 ಅತ್ಯಾಕರ್ಷಕ ರೂ.500/-ರಂತೆ ಹಾಗೂ 20 ಸಮಾಧಾನಕರ ಬಹುಮಾನ ರೂ.250/- ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಅಕಾಡೆಮಿಯ ವತಿಯಿಂದ ಪ್ರಮಾಣ ಪತ್ರವನ್ನು ತಮ್ಮ ವಿಳಾಸಗಳಿಗೆ ತಲುಪಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ಸದಸ್ಯೆ ನಫೀಸಾ ಮಿಸ್ರಿಯಾ ಮೊಬೈಲ್: 9743362663 ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.