Home Mangalorean News Kannada News ಮ0ಗಳೂರು: ಖಾಸಗಿ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಯೋಜನೆ ; ಯು.ಟಿ.ಖಾದರ್

ಮ0ಗಳೂರು: ಖಾಸಗಿ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಯೋಜನೆ ; ಯು.ಟಿ.ಖಾದರ್

Spread the love

ಮ0ಗಳೂರು : ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗಾಗಿ ಜಾರಿಗೆ ತಂದಿರುವ ಜ್ಯೋತಿ ಸಂಜೀವಿನಿ ವಿಮಾ ಯೋಜನೆಯನ್ನು ಖಾಸಗಿ ಶಾಲಾಶಿಕ್ಷಕರಿಗೂ ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದ್ದು ಈ ಬಗ್ಗೆ ಕೂಡಲೇ ಕ್ರಮ ಕೈಗೋಳ್ಳಲಾಗುವುದೆಂದು ಆರೋಗ್ಯ ಖಾತೆ ಸಚಿವ ಯು.ಟಿ.ಖಾದರ್ ಅವರು ಇಂದು ತಿಳಿಸಿದರು.

ಯು.ಟಿ.ಫರೀದ್ ಫೌಂಡೇಶನ್ ಇದರ ವತಿಯಿಂದ ಮಂಗಳೂರು ವಿಧಾನಸಭಾ ಕ್ಷೇತ್ರ ಮಟ್ಟದ ಸರಕಾರಿ, ಅನದಾನಿತ-ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗಾಗಿ ಕಲ್ಲಾಪು, ತೊಕ್ಕೊಟ್ಟು ಇಲ್ಲಿಯ ಯುನಿಟಿ ಹಾಲ್‍ನಲ್ಲಿ ಏರ್ಪಡಿಸಿದ್ದ ಗುರು ವಂದನಾ ಹಾಗೂ ಸನ್ಮಾನ ಕಾರ್ಯಕ್ರಮ ಮತ್ತು ಶೈಕ್ಷಣಿಕ ಅದಾಲತ್ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ದೇಶಾಭಿಮಾನವನ್ನು ಬೆಳೆಸಲು ಅವರಿಗೆ ನಾಡಿನ ಸಂಸ್ಕøತಿ ಪರಂಪರೆ ಇತಿಹಾಸಗಳನ್ನು ತಿಳಿಸಬೇಕೆಂದರು. ಒಂದು ಮಗು ಸರಿದಾರಿಯಲ್ಲಿ ಸಾಗಬೇಕಾದರೆ ತಂದೆ ತಾಯಿಯರಂತೆ ಶಿಕ್ಷಕರೂ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದ ಸಚಿವರು ಶಿಕ್ಷಕರು ಮಕ್ಕಳಲ್ಲಿ ಬೇದವೆಣಿಸದೆ ಅವರಲ್ಲಿ ಉತ್ತಮ ನಡೆನುಡಿಗಳು ರೂಢಿಗತವಾಗುವಂತೆ ನೋಡಿಕೊಳ್ಳಲು ತಿಳಿಸಿದರು.

ಆರೋಗ್ಯ ಎಲ್ಲರಿಗೂ ಕೈಗೆಟಕುವಂತೆ ಸಾಮಾನ್ಯ ಜನರಿಗೂ ಉತ್ತಮ ಆರೋಗ್ಯ ಸೌಲಭ್ಯಗಳು ರಿಯಾಯ್ತಿ ದರಗಳಲ್ಲಿ ದೊರಕಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದ್ದು ಇದರಂತೆ ಎಮ್.ಆರ್.ಐ. ಸಿಟಿ ಸ್ಕ್ಯಾನ್ ನಂತಹ ಸೌಲಭ್ಯಗಳು ಸರ್ಕಾರಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ರೂ.3,500/=ಗಳಿಗೆ ಲಭ್ಯವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಮಾರಂಭವನ್ನು ಯೇನೆಪೋಯ ವಶ್ವವಿದ್ಯನಿಲಯದ ಉಪಕುಲಪತಿಗಳಾದ ಡಾ||ವಿಜಯಕುಮಾರ್ ಅವರು ಉದ್ಘಾಟಿಸಿದರು.

ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದಸಂತೋಷ್ ಕುಮಾರ್, ಸೀತಾಲಕ್ಷಮಿ ಹಾಗೂ ಶಿಕ್ಷಕಿ ಶಾರದಾ ಅವರನ್ನು ಹಾಗೂ ಇತರೆ 30 ಜನ ಶಿಕ್ಷಕರನ್ನು ಸಚಿವರು ಸನ್ಮಾನಿಸಿದರು.


Spread the love

Exit mobile version