Home Mangalorean News Kannada News ಉಡುಪಿಯಲ್ಲಿ ಮತ್ತೆ ಕೊರೋನಾ ಹಾವಳಿ ; ಸೋಮವಾರ 40 ಮಂದಿಗೆ ಕೋರೋನಾ ಪಾಸಿಟಿವ್

ಉಡುಪಿಯಲ್ಲಿ ಮತ್ತೆ ಕೊರೋನಾ ಹಾವಳಿ ; ಸೋಮವಾರ 40 ಮಂದಿಗೆ ಕೋರೋನಾ ಪಾಸಿಟಿವ್

Spread the love

ಉಡುಪಿಯಲ್ಲಿ ಮತ್ತೆ ಕೊರೋನಾ ಹಾವಳಿ ; ಸೋಮವಾರ 40 ಮಂದಿಗೆ ಕೋರೋನಾ ಪಾಸಿಟಿವ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸೋಮವಾರ ಕೂಡ ಕೊರೋನಾ ಹಾವಳಿ ಮುಂದುವರೆದಿದ್ದು 40 ಮಂದಿಗೆ ಕೊರೊನಾ ಪಾಸಿಟಿವ್ ದೃಡಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1362 ಕ್ಕೆ ಏರಿಕೆಯಾಗಿದೆ.

ಸೋಂಕಿತ 40 ಮಂದಿಯಲ್ಲಿ ಕೋಟದಲ್ಲಿರುವ ಪ್ರತಿಷ್ಠಿತ ಹೋಟೆಲ್ ಒಂದರ ಸಿಬಂದಿಗಳು, ಮತ್ತು ಅಲ್ಲಿಯೇ ಪಕ್ಕದ ಅಂಗಡಿಯ ಮಾಲಿಕನ ಕುಟುಂಬಕ್ಕೂ ಕೂಡ ಕೊರೋನಾ ಪಾಸಿಟಿಸ್ ದೃಢಗೊಂಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಈ ವರೆಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮುಕ್ತರಾಗಿ 1154 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 205 ಸಕ್ರಿಯ ಪ್ರಕರಣಗಳಿವೆ

ಎಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.


Spread the love

Exit mobile version