Home Mangalorean News Kannada News 1 ರೂಪಾಯಿಗಾಗಿ ಸಾಸ್ತಾನದಲ್ಲಿ ಟೋಲ್ ಸಿಬಂದಿಯೊಂದಿಗೆ ಜಗಳವಾಡಿದ ಯುವಕರು!

1 ರೂಪಾಯಿಗಾಗಿ ಸಾಸ್ತಾನದಲ್ಲಿ ಟೋಲ್ ಸಿಬಂದಿಯೊಂದಿಗೆ ಜಗಳವಾಡಿದ ಯುವಕರು!

Spread the love

1 ರೂಪಾಯಿಗಾಗಿ ಸಾಸ್ತಾನದಲ್ಲಿ ಟೋಲ್ ಸಿಬಂದಿಯೊಂದಿಗೆ ಜಗಳವಾಡಿದ ಯುವಕರು!

ಉಡುಪಿ: ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಕೇಂದ್ರದ ಸಿಬಂದಿ ಟೋಲ್ ಸಂಗ್ರಹದ ವೇಳೆ 1 ರೂಪಾಯಿ ವಾಪಾಸು ಕೊಟ್ಟಿಲ್ಲ ಎಂದು ಹೇಳಿ ಯುವಕರ ಗುಂಪೊಂದು ಟೋಲ್ ಸಿಬಂದಿಯೊಂದಿಗೆ ಜಗಳವಾಡಿದ ಘಟನೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಈ ಘಟನೆ ಹಲವು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದ್ದು ಟೋಲ್ ಹಣ ಪಾವತಿ ಸಂದರ್ಭ ಸಿಬ್ಬಂದಿ 5 ರುಪಾಯಿ ಚಿಲ್ಲರೆ ಬದಲಿಗೆ 4 ರುಪಾಯಿ ನೀಡಿದ್ದರು. ಇದನ್ನೇ ಪ್ರಶ್ನಿಸಿ ಯುವಕರ ತಂಡ ಟೋಲ್ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಲ್ಲದೆ ಒಂದು ರೂಪಾಯಿ ವಾಪಸ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹೊಡೆದಾಟ ನಡೆಸುವ ದೃಶ್ಯ ಕೂಡ ವೀಡಿಯೋದಲ್ಲಿದೆ.

ಘಟನೆ ನಡೆದ ಸಂದರ್ಭ ಟೋಲ್ ಗೇಟ್ ನಲ್ಲಿ ಪೊಲೀಸ್ ಸಿಬ್ಬಂದಿ ಇರಲಿಲ್ಲ ಎಂದು ತಿಳಿದುಬಂದಿದೆ.


Spread the love

Exit mobile version