ಉಡುಪಿ: ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದ 1.5 ವರ್ಷದ ಮಗು ಮೃತ್ಯು
ಉಡುಪಿ: ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ನಡೆದಿದೆ.
ಒಂದೂವರೆ ವರ್ಷದ ಕೀರ್ತನಾ ಮೃತಪಟ್ಟ ಮಗು. ಕಿನ್ನಿಮೂಲ್ಕಿ ನಿವಾಸಿ ನಯನಾ ಕರ್ಕಡ ಎಂಬವರು ಮಗುವನ್ನು ಎತ್ತಿಕೊಂಡು ಮನೆ ಸಮೀಪದ ಬಾವಿಯಿಂದ ನೀರು ಸೇದುತ್ತಿದ್ದರು. ಈ ವೇಳೆ ಮಗು ಆಯತಪ್ಪಿ ಬಾವಿಗೆ ಬಿದ್ದಿದೆ. ತಕ್ಷಣ ಮಗುವಿನ ತಾಯಿ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಅಷ್ಟೊತ್ತಿಗೆ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಠಾಣಾ ಪಿಎಸ್‌ಐ ಭರತೇಶ್ ಕಂಕಣವಾಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
